ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಶ್ರೀಕೃಷ್ಣಂ ವಂದೇ ಜಗದ್ಗುರುಂ

By Mahesh
|
Google Oneindia Kannada News

ಬೆಂಗಳೂರು, ಆ.30: ವಿಶ್ವದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ದೇವಸ್ಥಾನ, ಮನೆ, ಊರಿನ ಪ್ರಮುಖ ರಸ್ತೆಗಳಲ್ಲಿ, ಕೃಷ್ಣಮಠಗಳಲ್ಲಿ ಜಗದ್ಧೋರನನ್ನು ಕೊಂಡಾಡಲಾಗಿದೆ.

ಮಥುರಾ, ಉಡುಪಿ, ಪಂಡರಾಪುರ, ಗುರುವಾಯೂರು, ದ್ವಾರಕಾ ಮುಂತಾದ ಪ್ರದೇಶಗಳ ಶ್ರೀಕೃಷ್ಣ ದೇವಾಲಯಗಳಲ್ಲಿ ಸಂಭ್ರಮ, ಸಡಗರದ ಜನ್ಮಾಷ್ಠಮಿ ಹಬ್ಬದ ಆಚರಣೆ ಕಂಡು ಬಂದಿದೆ. ಮಥುರಾ ನಗರಿಯಲ್ಲಿ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ಮುಸ್ಲಿಂ ಭಾಂದವರು ಭಕ್ತಿ, ಸಡಗರದಲ್ಲಿ ಕೃಷ್ಣನ ಸೇವೆಗೆ ನಿಲ್ಲುತ್ತಾರೆ.ಇದೇ ರೀತಿ ಚಿತ್ರಣ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಂಡು ಬಂದಿದ್ದು ಮುಸ್ಲಿಂ ಮಕ್ಕಳು ಕೂಡಾ ಕೃಷ್ಣ ವೇಷಧಾರಿಯಾಗಿ ಸ್ಪರ್ಧಿಯಲ್ಲಿ ಭಾಗವಹಿಸಿ ಗಮನ ಸೆಳೆದರು.

ನಾವು ಮತ್ತು ಹಿಂದೂ ಬಾಂಧವರು ಸೋದರರಂತೆ ಇರುತ್ತೇವೆ. ಕೋಮು ಗಲಭೆಗೆ ಕಾರಣರಾಗುವುದು ರಾಜಕಾರಿಣಿಗಳು. ದೇಶದ ಯಾವುದೇ ಭಾಗದಲ್ಲೂ ಕೋಮು ಗಲಭೆ ನಡೆದರೂ ನಮ್ಮ ಸಂಬಂಧದ ನಡುವೆ ಯಾವುದೇ ಒಡಕು ಉಂಟಾಗುವುದಿಲ್ಲ ಎನ್ನುತ್ತಾರೆ ಮಥುರಾದ ಸ್ಥಳೀಯ ಮುಸ್ಲಿಂ ನಿವಾಸಿಗಳು. ಸಂಭ್ರಮದ ಕೃಷ್ಣ ಜನ್ಮದಿನೋತ್ಸವದ ಚಿತ್ರಗಳು ಇಲ್ಲಿವೆ...

ಉಡುಪಿಯಲ್ಲಿ

ಉಡುಪಿಯಲ್ಲಿ

ಎರಡು ದಿನಗಳ ಕಾಲ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯಿತು. ಪರ್ಯಾಯ ಸೋದೆ ಶ್ರೀಗಳಿಂದ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ, ಮಹಾಪೂಜೆ ನಡೆಸಿದರು.

ಮಧ್ಯರಾತ್ರಿ 12.10ಕ್ಕೆ ಅರ್ಘ್ಯ ಪ್ರಧಾನ ಆ 29ರ ಬೆಳಗ್ಗೆ ಮಹಾಪೂಜೆಯ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಸಲಾಯಿತು. ಮಧ್ಯಾಹ್ನ ವೈಭವದ ವಿಟ್ಲಪಿಂಡಿ (ಮೊಸರು ಕುಡಿಕೆ) ರಥೋತ್ಸವ ನಡೆಸಲಾಯಿತು.
ಢಾಕಾದಲ್ಲಿ

ಢಾಕಾದಲ್ಲಿ

ಬಾಂಗ್ಲಾದೇಶಿ ಮಗುವೊಂದಕ್ಕೆ ಹಿಂದೂ ದೇವರಾದ ಕೃಷ್ಣನ ವೇಷ ಹಾಕಿ ಮೆರವಣಿಗೆ ಮಾಡಲಾಯಿತು

ಅರ್ಜುನ್ ಕಪೂರ್

ಅರ್ಜುನ್ ಕಪೂರ್

ಮುಂಬೈ: ಥಾಣೆಯಲ್ಲಿ ನಟ ಅರ್ಜುನ್ ಕಪೂರ್ ಅವರು 'ದಹಿ ಹಂಡಿ' (ಮೊಸರು ಗಡಿಗೆ) ಹೊಡೆಯುವ ಸಂಭ್ರಮದಲ್ಲಿ

ದೆಹಲಿಯಲ್ಲಿ

ದೆಹಲಿಯಲ್ಲಿ

ದೀಪಾಂಲಕೃತಗೊಂಡ ಲಕ್ಷ್ಮಿ ನಾರಾಯಣ ದೇಗುಲ (ಬಿರ್ಲಾ ಮಂದಿರ)

ಮಥುರಾದಲ್ಲಿ

ಮಥುರಾದಲ್ಲಿ

ಮಥುರಾ: ಶ್ರೀಕೃಷ್ಣಾಜನ್ಮಾಷ್ಟಮಿಯ ಅಂಗವಾಗಿ ಯಮುನಾ ನದಿಯಲ್ಲಿ ಮಿಂದು ಪುನೀತರಾದ ಭಕ್ತರು.

ಗುವಾಹಟಿಯಲ್ಲಿ

ಗುವಾಹಟಿಯಲ್ಲಿ

ವಿಶಿಷ್ಟ ವಾದ್ಯಗಳನ್ನು ಬಾರಿಸುತ್ತಾ ಕೃಷ್ಣ ನಾಮ ಸ್ಮರಿಸುತ್ತಾ ಹಾಡಿ ನಲಿದ ಭಕ್ತರು

ಮಥುರಾದಲಿ

ಮಥುರಾದಲಿ

ಮಹಂತಾ ನಿರ್ತ್ಯಾ ಗೋಪಾಲ ದಾಸರು ಶ್ರೀಕೃಷ್ಣನಿಗೆ ಆರತಿ ಬೆಳಗುತ್ತಿದ್ದಾರೆ.

ಜಮ್ಮುವಿನಲ್ಲಿ

ಜಮ್ಮುವಿನಲ್ಲಿ

ಹಿಂದೂ ಭಕ್ತರು ಇಸ್ಕಾನ್ ಆಯೋಜಿಸಿದ್ದ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಮುಂಬೈನಲ್ಲಿ

ಮುಂಬೈನಲ್ಲಿ

ಅಂಧಶಾಲೆಯ ಮಕ್ಕಳು ಮೊಸರಿನ ಗಡಿಗೆ ಒಡೆಯುವ ಆಟದಲ್ಲಿ ತೊಡಗಿದ್ದು ಹೀಗೆ

ಮುಂಬೈನ ವಿದೇಶಿಯರು

ಮುಂಬೈನ ವಿದೇಶಿಯರು

ಸ್ಪೇನ್ ನಿಂದ ಬಂದ ಮಾನವ ಪಿರಿಮಿಡ್ ರಚನೆಗಾರರು ಇಂಡಿಯಾ ಗೇಟ್ ಬಳಿ PTI Photo by Shashank Parade

ನವದೆಹಲಿಯಲ್ಲಿ

ನವದೆಹಲಿಯಲ್ಲಿ

ಶ್ರೀಕೃಷ್ಣನನ್ನು ಹೊತ್ತ ವಾಸುದೇವನ ಪ್ರತಿಮೆ, ಬಿರ್ಲಾ ಮಂದಿರ, ನವದೆಹಲಿ

ಮುಂಬೈನಲ್ಲಿ

ಮುಂಬೈನಲ್ಲಿ

ಮೊಸರಿನ ಗಡಿಗೆ ಒಡೆಯುವ ಆಟದಲ್ಲಿ ತೊಡಗಿದ್ದು ಹೀಗೆ

ಶಾರುಖ್ ಮನೆಯಲ್ಲಿ

ಶಾರುಖ್ ಮನೆಯಲ್ಲಿ

ಶಾರುಖ್ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಮಥುರಾದಲ್ಲಿ

ಮಥುರಾದಲ್ಲಿ

ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ

ಮುಂಬೈನಲ್ಲಿ

ಮುಂಬೈನಲ್ಲಿ

ಬಾಲಿವುಡ್ ನಟ ಬಿಪಾಶ ಬಸು ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದಲ್ಲಿ

ಶಾರುಖ್ ಮನೆಯಲ್ಲಿ

ಶಾರುಖ್ ಮನೆಯಲ್ಲಿ

ಮೊಸರಿನ ಗಡಿಗೆ ಒಡೆಯುತ್ತಿರುವ ಶಾರುಖ್ ಖಾನ್

English summary
Whole World celebrated Krishna Janmashtami (birthday of Sri Krishna) A Bangladeshi child dressed as Hindu god Krishna sleeps in a basket, carried by Hindu devotees during a Janmashtami procession in Dhaka, Bangladesh attracted many devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X