ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ಮಾಡೋಕ್ಕೆ ಹೇಳಿದ್ದು ಪಾಕ್ ಐಎಸ್ಐ

By Srinath
|
Google Oneindia Kannada News

ನವದೆಹಲಿ, ಆಗಸ್ಟ್ 29‌: ಶತ್ರು ಎಲ್ಲಿದ್ದಾನೆ ಅಂದ್ರೆ ಇಲ್ಲೇ ನನ್ನ ಪಕ್ಕದಲ್ಲೇ ಇದ್ದಾನೆ (शत्रु कहां है तो बगल में है) ಎನ್ನುವಂತೆ ನಿನ್ನೆ ಬಿಹಾರ ಬಳಿ ನೇಪಾಳ ಗಡಿಯಲ್ಲಿ ಬಂಧನಕ್ಕೊಳಗಾಗಿರುವ ಯಾಸಿನ್ ಭಟ್ಕಳನ ವಿಷಯದಲ್ಲೂ ಇದೇ ಆಗಿದೆ.

ನೆರೆ'ಹೊರೆ'ಯ ಪಾಕಿಸ್ತಾನ ನಮ್ಮ ಮೇಲೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಇಡೀ ಭಾರತ ಬೊಂಬಡಾ ಹೊಡೆಯುತ್ತಿರುವಾಗ ಇಲ್ಲೇ ನಮ್ಮ ಮಡಿಲಲ್ಲೇ ಇರುವ ಭಟ್ಕಳದಲ್ಲಿ ಇವನೊಬ್ಬ ಪಾತಕಿ ಹುಟ್ಟುಕೊಂಡಿದ್ದಾನೆ ನೋಡಿ. ಇದೇ ಯಾಸಿನ್ ಭಟ್ಕಳ ಇದೀಗ ತಾನು ದೇಶದ್ರೋಹ ಕೆಲಸದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಯಾಸಿನ್ ಸೋದರ ರಿಯಾಜ್ ಕರಾಚಿಯಲ್ಲಿದ್ದಾನೆ

ಯಾಸಿನ್ ಸೋದರ ರಿಯಾಜ್ ಕರಾಚಿಯಲ್ಲಿದ್ದಾನೆ

ಆದರೂ ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ಧಿಬಾಪಾನಿಗೆ ತಾನು ಎಸಗಿರುವ ಕೃತ್ಯಗಳ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ತಾನೇ ಯಾಸಿನ್‌ ಭಟ್ಕಳ ಎಂದು ಅವನು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ.

ಅಷ್ಟೇ ಅಲ್ಲ 2009ರಲ್ಲಿ ತನ್ನ ಸಹೋದರನ ಜೊತೆ ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದೆ' ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಜತೆಗೆ, ತನ್ನ ಸೋದರ ಮತ್ತೊಬ್ಬ ಉಗ್ರ ರಿಯಾಜ್ ಭಟ್ಕಳನ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ರಿಯಾಜ್ ಭಟ್ಕಳ ಪ್ರಸ್ತುತ ಕರಾಚಿಯಲ್ಲಿದ್ದನಂತೆ.

SI ಜತೆ ತನಗೆ ಸಂಪರ್ಕವಿದೆ

SI ಜತೆ ತನಗೆ ಸಂಪರ್ಕವಿದೆ

ನಿನ್ನೆ ತನ್ನ ಬಂಧನವಾದಾಗ ತಾನು ಎಸಗಿರುವ ಕೃತ್ಯಗಳ ಬಗ್ಗೆ ಸಮರ್ಥಿಸಿಕೊಂಡಿದ್ದ ಯಾಸಿನ್ ಭಟ್ಕಳ 'ಅನೇಕ ಸಮಯಗಳಲ್ಲಿ ಬಾಂಬ್ ಸ್ಫೋಟಗಳಾಗಿವೆ. ಇದರಲ್ಲಿ ಹೊಸದೇನಿದೆ. ಬಾಂಬ್ ಸ್ಫೋಟಿಸಿರುವುದರ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ' ಎಂದು ಹೇಳಿದ್ದವನು ಇಂದು ವಿಚಾರಣೆಯ ವೇಳೆ 'ISI ಜತೆ ತನಗೆ ಸಂಪರ್ಕವಿದೆ. ISI ಕರ್ನಲ್ ಒಬ್ಬರು ಭಾರತದ ಮೇಲೆ ಭಯೋತ್ಪಾದನೆ ದಾಳಿ ನಡೆಸುವಂತೆ ತನಗೆ ನಿರ್ದೇಶಿಸಿದ್ದರು' ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಭಟ್ಕಳನನ್ನು ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತರಲಾಗುತ್ತಿದೆ

ಭಟ್ಕಳನನ್ನು ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತರಲಾಗುತ್ತಿದೆ

ನಿನ್ನೆ ಬೇಹುಗಾರಿಕಾ ದಳ ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯಾಸಿನ್ ಭಟ್ಕಳನನ್ನು ಬಂಧಿಸಲಾಗಿತ್ತು. ಬಿಹಾರಕ್ಕೆ ಹೊಂದಿಕೊಂಡಿರುವ ನೇಪಾಳ ಗಡಿಯಲ್ಲಿ ಬುಧವಾರ ರಾತ್ರಿ ಭಟ್ಕಳನನ್ನು ಬಂಧಿಸಲಾಗಿದೆ. ಇಂದು ಮಧ್ಯಾಹ್ನ ಭಟ್ಕಳನನ್ನು ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತರಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

ಡಿಎನ್‌ಎ ಪರೀಕ್ಷೆ:

ಡಿಎನ್‌ಎ ಪರೀಕ್ಷೆ:

ಡಿಎನ್‌ಎ ಪರೀಕ್ಷೆ: ಸೆರೆಯಾಗಿರುವ ವ್ಯಕ್ತಿ ಯಾಸಿನ್‌ ಭಟ್ಕಳ ಎಂದು ಅನುಮಾತೀತವಾಗಿ ದೃಢಪಡಿಸಿಕೊಳ್ಳಲು ಅವನ ಡಿಎನ್‌ಎ ಯನ್ನು ತಂದೆ, ತಾಯಿ ಅಥವಾ ಕುಟುಂಬದ ಯಾವುದೇ ಸದಸ್ಯನ ಡಿಎನ್‌ಎ ಜತೆಗೆ ಹೋಲಿಸಿನೊಡಲಾಗುವುದು. ಇದಕ್ಕಾಗಿ ಮನೆಯವರ ಡಿಎನ್‌ಎ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Indian Mujahideen terrorist Yaseen Bhatkal Confess visiting Pak ISI. A day after alleged Indian Mujahideen co-founder Yasin Bhatkal was arrested from India-Nepal border, the police claimed on Friday that he has made startling revelations about his trip to Pakistan, the ISI-link and his brother’s whereabouts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X