ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಢುಂಢಿ ಪುಸ್ತಕ ನಿಷೇಧ ತಪ್ಪು: ಡಾ. ಯುಆರ್ಎ

By Mahesh
|
Google Oneindia Kannada News

Dr. Ur Ananthamurthy on Dhundi Kannada book Controversy
ಬೆಂಗಳೂರು, ಆ.30 : ವಿಘ್ನ ನಿವಾರಕ ಗಣೇಶ ದೇವರನ್ನು ರೌಡಿ ಎಂದು ಚಿತ್ರಿಸಿ, ವಿವಾದಕ್ಕೆ ತುತ್ತಾದ 'ಢುಂಢಿ' ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಅವರ ಬಂಧನವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯುಆರ್ ಅನಂತಮೂರ್ತಿ ಖಂಡಿಸಿದ್ದಾರೆ.

ಗಣಪತಿಯ ಅಸ್ತಿತ್ವದ ಬಗ್ಗೆ ಬಂದಿರುವ 'ಢುಂಢಿ' ಪುಸ್ತಕ ನಿಷೇಧ ತಪ್ಪು, ಹೀಗೆ ಆಗುತ್ತಿದ್ದರೆ ನನ್ನನ್ನು ಬಂಧಿಸಬಹುದು. ಇದು ಅನ್ಯಾಯ ಎಂದು ಯುಆರ್ ಅನಂತಮೂರ್ತಿ ಹೇಳಿದ್ದಾರೆ. ಢುಂಢಿ ಪುಸ್ತಕದಲ್ಲಿರುವ ವಿವಾದಿತ ಅಂಶಗಳ ಬಗ್ಗೆ ಪರ-ವಿರೋಧ ಚರ್ಚೆ ಇನ್ನೂ ಜಾರಿಯಲ್ಲಿದೆ. ಪುಸ್ತಕ ನಿಷೇಧದ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

'ಪುಸ್ತಕಗಳಲ್ಲಿರುವ ಅಂಶಗಳ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಲಿ. ಈ ಬಗ್ಗೆ ಲೇಖಕ ಯೋಗೇಶ್ ಮಾಸ್ಟರ್ ರನ್ನು ನೇರವಾಗಿ ಪ್ರಶ್ನಿಸಿ ಉತ್ತರ ಪಡೆಯಿರಿ. ಪುಸ್ತಕ ನಿಷೇಧಿಸಿ, ಲೇಖಕನನ್ನು ಬಂಧಿಸಿದರೆ ಸಮಸ್ಯೆ ಪರಿಹಾರ ಸಿಗುವುದಿಲ್ಲ.ನನ್ನ ಸಂಸ್ಕಾರ ಕಾದಂಬರಿ ಕೂಡಾ ವಿವಾದಕ್ಕೀಡಾಗಿತ್ತು. ಆ ಸಮಯದಲ್ಲಿ ನನ್ನನ್ನು ಬಂಧಿಸಬಹುದಾಗಿತ್ತು' ಎಂದು ಯುಆರ್ ಅನಂತಮೂರ್ತಿ ಹೇಳಿದ್ದಾರೆ.

ಗಣಪತಿಯ ಹುಟ್ಟಿನ ಬಗ್ಗೆ ಪುಸ್ತಕದಲ್ಲಿ ಅಪಮಾನಕಾರಿಯಾಗಿ ಬಿಂಬಿಸಿರುವುದಲ್ಲದೆ, ಗಣಪತಿಯನ್ನು ರೌಡಿ ಎಂದು ಚಿತ್ರಿಸಲಾಗಿದ್ದು, ಲೇಖಕ ಯೋಗೇಶ್ ಮಾಸ್ಟರ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಾಧ್ಯಕ್ಷ ಪ್ರಣವಾನಂದಸ್ವಾಮಿ ಅವರು ದೂರು ನೀಡಿದ್ದರು.

'ಡುಂಢಿ' ಕೃತಿಯಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಅವರು ಕೋಟ್ಯಂತರ ಹಿಂದೂಗಳಿಂದ ಪೂಜಿಸಲ್ಪಡುವ ಗಣೇಶ ಗೂಂಡಾ, ಕ್ರೂರಿ ಎಂದು ವಿಶ್ಲೇಷಿಸಿದ್ದರು. ಅಲ್ಲದೇ, ಶಿವ-ಪಾರ್ವತಿ ಹಾಗೂ ಗಣೇಶನ ಸಂಬಂಧವನ್ನು ಆಕ್ಷೇಪಾರ್ಹವಾಗಿ ಈ ಕಾದಂಬರಿಯಲ್ಲಿ ಲೇಖಕರು ಹೆಣೆದಿದ್ದರು ಎನ್ನಲಾಗಿದೆ. ಯೋಗೇಶ್ ಮಾಸ್ಟರ್ ರನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದಾರೆ. ವಿವಾದ, ಬಂಧನದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

English summary
Dr. UR Ananatha Murthy says Yogesh Master arrest is un acceptable, the author of a controversial Kannada novel must be made available for dicusssion in public domain. The book which reportedly made derogatory references to Lord Ganesha. The author Yogesh arrested by Bangalore police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X