• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮಸೀದಿಗಳು ಭಯೋತ್ಪಾದಕ ಚಟುವಟಿಕೆ ತಾಣಗಳು'

By Srinath
|

ನ್ಯೂಯಾರ್ಕ್, ಆಗಸ್ಟ್ 29‌: ಮಸೀದಿಗಳು ಭಯೋತ್ಪಾದಕ ಚಟುವಟಿಕೆ ತಾಣಗಳು. ಹಾಗಾಗಿ ಅಕ್ಷರಶಃ ಅವುಗಳನ್ನು ಭಯೋತ್ಪಾದಕ ಸಂಸ್ಥೆಗಳ ಪಟ್ಟಿಯಲ್ಲಿ ವರ್ಗೀಕರಿಸಲಾಗಿದೆ.

ಇತ್ತ, ಭಯೋತ್ಪಾದನೆಯ ವಿರುದ್ಧ ಯಾವುದೇ ಕಠಿಣ ಕ್ರಮಕೈಗೊಳ್ಳದೆ ಭಾರತ ಪರಿತಪಿಸುತ್ತಿದ್ದರೆ ಅತ್ತ 9/11ರ ದಾಳಿಯ ಬಳಿಕ ಎಚ್ಚೆತ್ತಿರುವ ಅಮೆರಿಕ, ಭಯೋತ್ಫಾದನೆಯ ವಿರುದ್ಧ ಸಮರ ಸಾರಿದ್ದು, ಭಯೋತ್ಪಾದನೆಯನ್ನು ಮೂಲ ಸಮೇತ ಕಿತ್ತೊಗೆಯಲು ಅಮೆರಿಕದಲ್ಲಿನ ಮಸೀದಿಗಳಿಗೆ ಈ ಹಣೆಪಟ್ಟಿ ಹಚ್ಚಿದೆ.

New York Police Department 2003ರಿಂದಲೇ ಅತ್ಯಂತ ರಹಸ್ಯವಾಗಿ ಈ ಅಭಿಯಾನಕ್ಕೆ ಕೈಹಾಕಿದ್ದು, ಮಸೀದಿಗಳಲ್ಲಿ ಕಾರ್ಯಗತವಾಗುವ ಭಯೋತ್ಪಾದನ ಸಂಸ್ಥೆಗಳ ವಿರುದ್ಧ ಖಡಕ್ ತನಿಖೆ ಕೈಗೊಂಡಿದೆ.

Terrorism Enterprise Investigations ರಹಸ್ಯ ಕಾರ್ಯಾಚರಣೆ

Terrorism Enterprise Investigations ರಹಸ್ಯ ಕಾರ್ಯಾಚರಣೆ

ಈ ಕ್ರಮದಿಂದಾಗಿ ಯಾವುದೇ ಅಪರಾಧ ಪ್ರಕರಣದ ಬಗ್ಗೆ ಸಾಕ್ಷ್ಯಾಧಾರ ಇಲ್ಲದಿದ್ದರೂ ನೇರವಾಗಿ ಮಸೀದಿಗಳಲ್ಲಿ ನಡೆಯುವ ಧರ್ಮ ಬೋಧನೆಗಳ ಬಗ್ಗೆ ಮತ್ತು ಮಸೀದಿಗಳಲ್ಲಿ ಇಮಾಂಗಳು ಗೂಢಚರ್ಯೆ ನಡೆಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ಲಭಿಸಿದೆ.

Terrorism Enterprise Investigations - TEI ಹೆಸರಿನ ಪೊಲೀಸ್‌ ಇಲಾಖೆಯ ಈ ರಹಸ್ಯ ಕ್ರಮದಿಂದಾಗಿ ಮಸೀದಿಗಳ ವಿರುದ್ಧ ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ಬಹಳಷ್ಟು ಸಹಕಾರಿಯಾಗಿದೆ. ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ಬರುವ ಪ್ರತಿಯೊಬ್ಬನತ್ತಲೂ ಇಲಾಖೆ ಹದ್ದಿನಕಣ್ಣು ಇಟ್ಟಿದೆ.

ಯಾವುದೇ ಮಸೀದಿ ವಿರುದ್ಧ ಆರೋಪ ಹೊರಿಸಿಲ್ಲ

ಯಾವುದೇ ಮಸೀದಿ ವಿರುದ್ಧ ಆರೋಪ ಹೊರಿಸಿಲ್ಲ

ಗಮನಾರ್ಹವೆಂದರೆ NYPD ಇದುವರೆಗೂ ಯಾರೊಬ್ಬರ ವಿರುದ್ಧವೂ ಅಥವಾ ಯಾವುದೇ ಮಸೀದಿಯಲ್ಲಿ ಇಂತಹ ಗುರುತರ ಅಪರಾಧ ಆರೋಪವನ್ನು ಹೊರಿಸಿಲ್ಲವಾದರೂ ಅನೇಕ ವರ್ಷಗಳವರೆಗೂ ನ್ಯೂಯಾರ್ಕ್ ಪೊಲೀಸರು ಅಬಾಧಿತವಾಗಿ ಈ ಕಾರ್ಯಾಚರಣೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಇದು ಭಯೋತ್ಫಾದನೆಯನ್ನು ಮಟ್ಟ ಹಾಕಲು ಅಮೆರಿಕ ಕಂಡುಕೊಂಡಿರುವ ಖಡಕ್ ಮಾರ್ಗ ಎಂದು ಬಿಂಬಿಸಲಾಗಿದೆ.

ಆದರೆ ಅನುಮಾನ ಬಂದ ಅನೇಕರ (ಮಸೀದಿಗೆ ಬರುವ/ ಮಸೀದಿಯಲ್ಲಿರುವವರ ಬಗ್ಗೆ) ವಿರುದ್ಧ ರಹಸ್ಯ ಪೊಲೀಸ್ ಕಡತಗಳಲ್ಲಿ ಮಾಹಿತಿ ದಾಖಲಾಗಿದ್ದು ಪೊಲೀಸರು ಸದಾ ಅಂತಹವರ ಬೆನ್ನುಹತ್ತಿದ್ದಾರೆ.

ಲಾಡೆನ್ ನಡೆಸಿದ 9/11ರ ದಾಳಿಯೇ ಕಾರಣವಂತೆ

ಲಾಡೆನ್ ನಡೆಸಿದ 9/11ರ ದಾಳಿಯೇ ಕಾರಣವಂತೆ

ನ್ಯೂಯಾರ್ಕ್ ಪೊಲೀಸರು ಸಮವಸ್ತ್ರ ತ್ಯಜಿಸಿ ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸುವುದು ಅಥವಾ ಮಸೀದಿಗಳ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮಂಡಳಿ ಸದಸ್ಯರ ಪೈಕಿ ಒಬ್ಬಿಬ್ಬರನ್ನು ಪೊಲೀಸ್ ಮಾಹಿತಿಗಾರರನ್ನಾಗಿ ನೇಮಿಸಿಕೊಂಡು ಭಯೋತ್ಫಾದನೆ ವಿರುದ್ಧ ಯಶಸ್ವಿ ಅಭಿಯಾನ ನಡೆಸಿದ್ದಾರೆ.

ಆದರೆ ಇದೆಲ್ಲದಕ್ಕೂ ಬಿನ್ ಲಾಡೆನ್ ಅಮೆರಿಕದ ವಿರುದ್ಧ ಸಾರಿದ ಅಂತಿಮ ಯುದ್ಧವೇ ಕಾರಣವಂತೆ. ಅಂದು ಅವಳಿ ವಾಣಿಜ್ಯ ಕಟ್ಟಡಗಳಿಗೆ ವಿಮಾನಗಳನ್ನು ನುಗ್ಗಿಸಿ, ಧ್ವಂಸಗೊಳಿಸಿದ ಬಳಿಕ ಎಚ್ಚೆತ್ತು ಆ ನಂತರ ಒಂದೂ ಭಯೋತ್ಫಾದಕ ಕೃತ್ಯ ನಡೆಯದಂತೆ ಅಮೆರಿಕ ತನ್ನ ಜಾಗ್ರತೆಯಲ್ಲಿ ತಾನಿದೆ.

ಯಾರ ಅಂಕೆಯೂ ನಮಗಿಲ್ಲ- NYPD

ಯಾರ ಅಂಕೆಯೂ ನಮಗಿಲ್ಲ- NYPD

'ಪೊಲೀಸರ ಈ ಕ್ರಮದಿಂದಾಗಿ ನಿರ್ಭೀತ ವಾತಾವರಣದಲ್ಲಿ ನಾವು ಪ್ರಾರ್ಥನೆ ಮಾಡುವುದಕ್ಕೆ ತೊಡಕಾಗಿದೆ. ಇದು ಸಂವಿಧಾನ ವಿರೋಧಿ' ಎಂದು ಮುಸ್ಲಿಂ ಧಾರ್ಮಿಕ ನಾಯಕರು ಬೊಬ್ಬೆಯಿಟ್ಟರೂ 'ನಮಗೆ ಎಲ್ಲೆಲ್ಲಿ ಅನುಮಾನ ಸುಳಿಯತ್ತದೋ ಅಲ್ಲಿಗೆಲ್ಲ ಯಾರಪ್ಪಣೆಯೂ ಇಲ್ಲದೆ ಸುಳಿದಾಡುತ್ತೇವೆ. ಯಾರ ಅಂಕೆಯೂ ನಮಗಿಲ್ಲ' ಎಂದು NYPD ಪ್ರತ್ಯುತ್ತರ ನೀಡಿದೆ.

English summary
Muslim mosques in New York are terrorist organizations designates New York Police Department. The New York Police Department has secretly labeled entire mosques as terrorist organizations, a designation that allows police to use informants to record sermons and spy on imams, often without specific evidence of criminal wrongdoing. Since the 9/11 attacks, the NYPD has opened at least a dozen "terrorism enterprise investigations" into mosques
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X