ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FAQ : ಯುಪಿಎ ಸರ್ಕಾರದ ಆಹಾರ ಭದ್ರತಾ ಕಾಯ್ದೆ

By Mahesh
|
Google Oneindia Kannada News

ನವದೆಹಲಿ, ಆ.27: ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಯುಪಿಎ ಮಹತ್ವದ ಆಹಾರ ಭದ್ರತೆ ಮಸೂದೆ ಕಾಯ್ದೆಯನ್ನು ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ದಿನದಂದು ಜಾರಿಗೆ ತರುವ ಮೂಲಕ ಜನರ ಭಾವನೆಗಳ ಜತೆ ಆಟವಾಡುತ್ತಿದ್ದು, ಕುಟುಂಬ ರಾಜಕೀಯದ ವಾಸನೆ ದಟ್ಟವಾಗಿದೆ ಎಂಬ ಕೂಗೆದ್ದಿದೆ. ಪರ ವಿರೋಧ ಆರೋಪ ಪ್ರತ್ಯಾರೋಪಗಳ ನಡುವೆ ಯುಪಿಎ ಸರ್ಕಾರ ಮಹತ್ವದ ಯೋಜನೆಗೆ ಸಂಸತ್ ನಲ್ಲಿ ಒಪ್ಪಿಗೆ ಸಿಕ್ಕಿದೆ.

ದೇಶದ ಜನರ ಅಪೌಷ್ಟಿಕತೆ, ಬಡತನ ನಿರ್ಮೂಲನೆ ಹೊಣೆ ಹೊತ್ತಿದ್ದೇವೆ. ಅಗತ್ಯಬಿದ್ದರೆ ಅವರು ಮಂಗಳವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸೋನಿಯಾ ಆರೋಗ್ಯದ ಬಗ್ಗೆ ವಿವರ ಇಲ್ಲಿ ಓದಿ

ಈ ಆಹಾರ ಭದ್ರತೆ ಮಸೂದೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಷ 2009ರ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಮಸೂದೆಗೆ ವಿರೋಧ ಪಕ್ಷಗಳು ಅಪಸ್ವರ ಎತ್ತಿ ಮಸೂದೆಯಲ್ಲಿ 308 ತಿದ್ದುಪಡಿಗಳು ಆಗಬೇಕು ಎಂದಿದ್ದವು. ಆದರೆ, ಅಹಾರ ಸಚಿವ ಕೆ ವಿ ಥಾಮಸ್ ಮಂಡಿಸಿದ ಮಸೂದೆಯಲ್ಲಿ ಕೇವಲ ಹತ್ತು ತಿದ್ದುಪಡಿ ಮಾತ್ರ ಆಗಿದೆ.

ವಿಧೇಯಕ ಅನುಷ್ಠಾನಕ್ಕಾಗಿ ಅಂದಾಜು 613.3 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯಗಳ ಅಗತ್ಯವಿದೆ ಎನ್ನುತ್ತದೆ ಅಂಕಿ ಅಂಶ. ಆಹಾರ ಭದ್ರತಾ ಕಾಯ್ದೆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ..

ಸೋನಿಯಾ ವಿನ್ಯಾಸ

ಸೋನಿಯಾ ವಿನ್ಯಾಸ

* ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿ 2010ರಲ್ಲಿ ಪ್ರಸ್ತಾವಿತ ಆಹಾರ ಭದ್ರತೆ ಒದಗಿಸಲು ಮಸೂದೆ ಕರಡು ತಯಾರಿಸಿದರು. ದೇಶದ ಶೇ 75 ರಷ್ಟು ಜನರಿಗೆ ಇದರಿಂದ ಉಪಯೋಗವಾಗಲಿದೆ.
* ಸಿ ರಂಗರಾಜನ್ ಅವರ ಸಮಿತಿ ಮಸೂದೆಗೆ ಬೇಕಾದ ತಿದ್ದುಪಡಿ ಮಾಡಿತ್ತು.
* 2011ರಲ್ಲಿ ಆಹಾರ ಸಚಿವಾಲಯ ಕರಡು ಪ್ರತಿಯನ್ನು ಬಹಿರಂಗಗೊಳಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿತು
* ಈ ವರ್ಷದ ಜುಲೈ ತಿಂಗಳಿನಲ್ಲಿ ಇನ್ನಷ್ಟು ತಿದ್ದುಪಡಿಯೊಂದಿಗೆ ಆಹಾರ ಭದ್ರತಾ ಮಸೂದೆ ದೇಶದ ಶೇ 67ರಷ್ಟು ಜನರನ್ನು ತಲುಪಲು ಸಿದ್ಧವಾಯಿತು.

ಯಾರಿಗೆ ಏನು ಸಿಗಲಿದೆ

ಯಾರಿಗೆ ಏನು ಸಿಗಲಿದೆ

* ಶೇ 75 ರಷ್ಟು ಗ್ರಾಮೀಣ ಹಾಗೂ ಶೇ 50 ರಷ್ಟು ನಗರವಾಸಿಗಳಿಗೆ ಪ್ರಯೋಜನ ಸಿಗಲಿದೆ. ಸುಮಾರು 800 ಮಿಲಿಯನ್ ಜನಕ್ಕೆ 5 ಕೆಜಿ ಗೋಧಿ, ಅಕ್ಕಿ ಹಾಗೂ ಧಾನ್ಯಗಳು 3 ರು, 2 ರು ಹಾಗೂ 1 ರು ಪ್ರತಿ ಕೆಜಿಗೆ ಸಿಗಲಿದೆ.
* ಈ ಮಸೂದೆಯಲ್ಲಿ ಬೆಳೆ ಧಾನ್ಯ, ಅಡುಗೆಗೆ ಬಳಸುವ ಎಣ್ಣೆ ಸೇರಿಸಲಾಗಿಲ್ಲ.
* ಅಂತ್ಯೋದಯ ಅನ್ನ ಯೋಜನೆಯ ಅನ್ವಯ ಬಡವರಲ್ಲಿ ಬಡವರು ಇರುವ ಪ್ರತಿ ಮನೆಗೆ ಮಾಸಿಕ 35 ಕೆ.ಜಿ. ಆಹಾರಧಾನ್ಯಗಳನ್ನು 3 ರೂ, 2 ರೂ, ಮತ್ತು 1 ರೂ.ಗಳ ರಿಯಾಯಿತಿ ದರದಲ್ಲಿ ಸಿಗಲಿದೆ.
* ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಂಬಲ ಬೆಲೆ ಲಭಿಸಲಿದೆ. ಕನಿಷ್ಠ ಬೆಂಬಲ ಬೆಲೆ ಅನ್ವಯ ಪ್ರತಿ ಕೆ.ಜಿ. ಅಕ್ಕಿಗೆ 12.85 ರೂ. ಹಾಗೂ ಪ್ರತಿ ಕೆ.ಜಿ. ಭತ್ತಕ್ಕೆ 12.50 ರೂ. ಎಂಎಸ್ ಪಿ

ಅನುಷ್ಠಾನ ಹೇಗೆ

ಅನುಷ್ಠಾನ ಹೇಗೆ

ಆಹಾರ ಭದ್ರತಾ ಕಾಯ್ದೆ ಜಾರಿಗೊಂಡ ನಂತರ ಸದ್ಯ ಚಾಲನೆಯಲ್ಲಿರುವ ಪಡಿತರ ಯೋಜನೆ ವ್ಯವಸ್ಥೆಯೊಂದಿಗೆ ಈ ಯೋಜನೆಯೂ ಕೈ ಜೋಡಿಸಲಿದೆ.
* ಬಯೋಮೆಟ್ರಿಕ್ ರೇಷನ್ ಕಾರ್ಡ್ ಜತೆಗೆ ಆಹಾರ ಭದ್ರತೆ ಯೋಜನೆ ಲಾಭವನ್ನು ಪಡೆಯಬಹುದು.
* ಸೇವೆ ನೀಡಲು ನಿರಾಕರಿಸಿದರೆ ಸರ್ಕಾರವನ್ನು ಕೋರ್ಟಿಗೆಳೆಯಬಹುದು.
* ರೈತರು ಹೆಚ್ಚೆಚ್ಚು ವಾಣಿಜ್ಯ ಬೆಲೆಗಳನ್ನು ಬೆಳೆಯಲು ಪ್ರೋತ್ಸಾಹವಂತೂ ಸಿಗಲಿದೆ.

ಖರ್ಚು ವೆಚ್ಚ

ಖರ್ಚು ವೆಚ್ಚ

ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದ ಮೇಲೆ 90,000 ಕೋಟಿ ಇಂದ 1,30,000 ಕೋಟಿ ರು ವೆಚ್ಚ ಸರ್ಕಾರದ ಸಬ್ಸಿಡಿ ಮೇಲೆ ಬೀಳಲಿದೆ.
* ಹಣ ದುಬ್ಬರದ ನಡುವೆ ಆಹಾರ ಸಬ್ಸಿಡಿ ದರ ಏರಿಕೆ ಅನಿವಾರ್ಯವಾಗಲಿದ್ದ್ದು, ಜಿಡಿಪಿಯ ಶೇ 4.8ರಷ್ಟು ವಿತ್ತೀಯ ಕೊರತೆ ಎದುರಾಗಲಿದೆ.

English summary
FAQ on Food Security Bill : Lok Sabha endorses Congress lead UPS Food Security Bil on Monday. The bill was passed after a nine-year-long debate. The bill was supported by the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X