ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಗಂಟೆ ತಲೆಗೆ ಲಾಂಗ್ ಇರಿದಿದ್ದರೂ ಬಚಾವಾದ ಭೂಪ

By Srinath
|
Google Oneindia Kannada News

ತುಮಕೂರು, ಆಗಸ್ಟ್ 27: ನಿವೇಶನ ವಿವಾದ ಸಂಬಂಧ ವ್ಯಕ್ತಿಯೊಬ್ಬನನ್ನು ಲಾಂಗ್‌ ಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಎನ್‌ ಇಪಿಎಸ್ (ಹೊಸ ಬಡಾವಣೆ) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಭೀಕರವಾಗಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಚನ್ನಪ್ಪನಪಾಳ್ಯದ ಶ್ರೀನಿವಾಸ್ (42) ಎಂದು ಗುರುತಿಸಲಾಗಿದೆ.

ರಾತ್ರಿ 9 ಗಂಟೆ ಸುಮಾರಿಗೆ ತನ್ನ 10 ವರ್ಷದ ಪುತ್ರ ಮನು ಜತೆಗೆ ಶ್ರೀನಿವಾಸ್ ಉಪ್ಪಾರಹಳ್ಳಿಯ ಆಟೋ ನಿಲ್ದಾಣದ ಬಳಿ ಔಷಧಿ ಖರೀದಿಸಿ, ಮನೆಗೆ ವಾಪಸ್ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಲಾಂಗ್‌ ನಿಂದ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾರೆ.

Long weapon pierces into head but NIMHANS doctors remove,

ಆ ವೇಳೆ, ವಿರೋಧಿ ಗ್ಯಾಂಗು ಬೀಸಿದ್ದ ಮಚ್ಚೊಂದು ಬಂದು ಶ್ರೀನಿವಾಸ್ ತಲೆಗೆ ನಾಟಿತ್ತು. ತಲೆಗೆ ಭೀಕರ ಪೆಟ್ಟು ಬಿದ್ದಾಗ ಶ್ರೀನಿವಾಸ್ ಸ್ಥಳದಲ್ಲೇ ಕುಸಿದು ಬಿದ್ದರು. ಅವರ ಪುತ್ರ ಕಿರುಚಿಕೊಂಡ ಸದ್ದು ಕೇಳಿ ಅಕ್ಕಪಕ್ಕದವರು ರಕ್ಷಣೆಗೆ ಧಾವಿಸಿ ಬಂದಿದ್ದಾರೆ. ಆ ವೇಳೆಗೆ ಶ್ರೀನಿವಾಸ್ ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆ ಅದಾದನಂತರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಆದರೆ ಅಲ್ಲಿನ ವೈದ್ಯರು ಭೀಬತ್ಸ ದೃಶ್ಯವನ್ನು ಕಂಡು ಶ್ರೀನಿವಾಸ್ ತಲೆಗೆ ನಾಟಿದ್ದ ಲಾಂಗನ್ನು ತೆಗೆದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಕ್ಷರಶಃ ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ಆದರೂ ಮನೆಯವರು ಚಿಕಿತ್ಸೆಗಾಗಿ ಶ್ರೀನಿವಾಸರನ್ನು ಬೆಂಗಳೂರಿನ ನಿಮ್ಹಾನ್ಸ್‌ ಗೆ ದಾಖಲಿಸಿದರು.

ಒಟ್ಟು 6 ಗಂಟೆ ಕಾಲ ಮಚ್ಚು ತಲೆಯನ್ನೇ ಕಚ್ಚಿಕೊಂಡಿತ್ತು!:
ನಿಮ್ಹಾನ್ಸ್‌ ವೈದ್ಯರು ಅದನ್ನು ಸವಾಲಾಗಿ ಸ್ವೀಕರಿಸಿ, ಶ್ರೀನಿವಾಸ್ ತಲೆಗೆ ನಾಟಿದ್ದ ಲಾಂಗನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಮೂರು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಭಾಸ್ಕರರಾವ್, ಡಾ. ಹರಿವೇಲಗನ್ ನೇತೃತ್ವದ ತಂಡ ಶ್ರೀನಿವಾಸನ ಜೀವ ಉಳಿಸಿದ್ದಾರೆ. ಶ್ರೀನಿವಾಸ್ ಈಗ ಪ್ರಾಣಾಪಾಯದಿಂದ ಪಾರಾಗಿದ್ದು, ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀನಿವಾಸ್ ಪತ್ನಿ ಆರೋಪಿಸುವಂತೆ ನಿವೇಶನವೊಂದರ ವಿವಾದ ಹಿನ್ನೆಲೆಯಲ್ಲಿ ಸಂಬಂಧಿಕ ಸೋಮ ಮತ್ತು ಆತನ ಸ್ನೇಹಿತರಾದ ಗುಂಡ ಮತ್ತು ಗಣೇಶ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪಿಎಸ್‌ ಐ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ವೃತ್ತ ನಿರೀಕ್ಷಕ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.

English summary
In a land dispute miscreants pierces a long weapon into the head of Srinivas in Tumkur late on Aug 26. Though local doctors were horrified to remove the weapon and treat Srinivas, NIMHANS doctors in Bangalore remove it succesfully. Now Srinivas is out of danger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X