ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ನಲ್ಲಿ ಉದ್ಯೋಗ ಕಡಿತ ಶುರು?

By Mahesh
|
Google Oneindia Kannada News

Infosys plans to cut onsite effort by 20%
ಬೆಂಗಳೂರು,ಆ.27 : ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಸಾಫ್ಟ್ ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಕಹಿ ಸುದ್ದಿ ನೀಡಿದ ಬೆನ್ನಲ್ಲೇ ಇನ್ಫೋಸಿಸ್ ಹುದ್ದೆ ಕಡಿತಕ್ಕೆ ಚಿಂತನೆ ನಡೆಸಿದೆ

ಇನ್ಫೋಸಿಸ್ ತನ್ನ ವೆಚ್ಚ ನಿಯಂತ್ರಣದ ಭಾಗವಾಗಿ 'ಆನ್ ಸೈಟ್' ವಿಭಾಗದಲ್ಲಿ ಸಿಬ್ಬಂದಿ ಗಾತ್ರವನ್ನು ತಗ್ಗಿಸಲು ಚಿಂತನೆ ನಡೆಸಿದೆ. ಆನ್ ಸೈಟ್ ವಿಭಾಗದಲ್ಲಿ ಗ್ರಾಹಕರು ಇರುವ ಸ್ಥಳಗಳಿಗೆ ತೆರಳಿ ಇಲ್ಲಿನ ಸಾಫ್ಟ್ ವೇರ್ ಟೆಕ್ಕಿಗಳು ಕೆಲಸ ಸಲ್ಲಿಸುತ್ತಾರೆ.

ಅಮೆರಿಕದಲ್ಲಿ ಬದಲಾಗುತ್ತಿರುವ ಉದ್ಯೋಗ ನೀತಿ, ಸ್ಥಳೀಯರಿಗೆ ಆದ್ಯತೆ ನೀಡುವುದು ಅನಿವಾರ್ಯವಾಗಿರುವುದರಿಂದ ಆನ್ ಸೈಟ್ ಉದ್ಯೋಗಿಗಳ ಕೆಲಸಕ್ಕೆ ಕುತ್ತು ಬರಲಿದೆ.

ವಿಸ್ಕೊಸಿನ್ ಮೂಲದ ಐಟಿ ತಜ್ಞೆಯೊಬ್ಬರು ಇನ್ಫೋಸಿಸ್ ಕಂಪನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಇನ್ಫೋಸಿಸ್ ಸಂಸ್ಥೆ ದಕ್ಷಿಣ ಏಷ್ಯನ್ನರು ನೇಮಿಸಿಕೊಳ್ಳುವ ಇಚ್ಛೆ ಹೊಂದಿರುವಂತೆ ಕಾಣುತ್ತದೆ ಹೀಗಾಗಿ ಸ್ಥಳೀಯರಿಗೆ ಉದ್ಯೋಗ ನೀಡಲು ನಿರಾಕರಿಸಿದೆ ಎಂದು ಆಕೆ ತನ್ನ ದೂರಿನಲ್ಲಿ ಹೇಳಿದ್ದರು. ಇದಾದ ಕೆಲ ದಿನಗಳ ನಂತರವೇ ಈ ಬೆಳವಣಿಗೆ ಕುತೂಹಲಕಾರಿಯಾಗಿದೆ.

2013ರ ಮಾರ್ಚ್ ವೇಳೆಗೆ ಕಂಪನಿಯ ಒಟ್ಟು ವೆಚ್ಚದಲ್ಲಿ ಆನ್ ಸೈಟ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವೆಚ್ಚ ಶೇ.46ರಷ್ಟಿತ್ತು. ಇನ್ಫೋಸಿಸ್ಸಿನ ಆನ್ ಸೈಟ್ ವಿಭಾಗದಲ್ಲಿ ಅನೇಕ ಮಂದಿ ಉದ್ಯೋಗದಲ್ಲಿದ್ದು, ಸಾಕಷ್ಟು ಟೆಕ್ಕಿಗಳಿಗೆ ಇದೀಗ ಉದ್ಯೋಗ ಕಳೆದುಕೊಳ್ಳುವ ಆತಂಕ ಉಂಟಾಗಿದೆ.

ಅಮೆರಿಕದಲ್ಲಿನ ಮಾರುಕಟ್ಟೆ ವಿಭಾಗದಲ್ಲಿ ಕೂಡ ಉದ್ಯೋಗ ಕಡಿತದ ನಿರೀಕ್ಷೆ ಇದೆ. 'ಇನ್ಫೋಸಿಸ್ ತನ್ನ ಸ್ಟ್ರಾಟಜಿಕ್ ಗ್ಲೋಬಲ್ ಸೋರ್ಸಿಂಗ್(ಎಸ್ ಜಿಎಸ್) ವಿಭಾಗದಲ್ಲಿ ಕೂಡ ಉದ್ಯೋಗ ಕಡಿತಕ್ಕೆ ಪರಿಶೀಲಿಸುತ್ತಿದೆ' ಎಂದು ವರದಿ ತಿಳಿಸಿದೆ.

ಇನ್ಫೋಸಿಸ್ ಅಧ್ಯಕ್ಷ ಎನ್ನಾರ್ ನಾರಾಯಣ ಮೂರ್ತಿ ಮತ್ತು ಪುತ್ರ ರೋಹನ್ ಮೂರ್ತಿ ಕಳೆದ ಎರಡು ವಾರಗಳ ಕಾಲ ಅಮೆರಿಕದಲ್ಲಿದ್ದು ದೇಶೀಯ ಮಟ್ಟದಲ್ಲಿನ ವೆಚ್ಚ ಕಡಿತದ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿದೆ.

ಈ ನಡುವೆ ಇನ್ಫೋಸಿಸ್ ನ ಉಪಾಧ್ಯಕ್ಷ ಹಾಗೂ ಅಮೆರಿಕದಲ್ಲಿ ಹಣಕಾಸು ವಿಭಾಗದ ಮುಖ್ಯಸ್ಥ ಸುಧೀರ್ ಚತುರ್ವೇದಿ ಕಂಪನಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಾರಾಯಣ ಮೂರ್ತಿಯವರು ಕಂಪನಿಗೆ ಮರಳಿ ಸಂಘಟನಾತ್ಮಕ ಪುನಾರಚನೆಗೆ ಮುಂದಾಗಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ಕಳೆದ ಜುಲೈನಲ್ಲಿ ಇನ್ಫೋಸಿಸ್ ನ ಜಾಗತಿಕ ವಹಿವಾಟು ವಿಭಾಗದ ಮುಖ್ಯಸ್ಥ ಬಸಬ್ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದರು. ಹಿರಿಯ ಉಪಾಧ್ಯಕ್ಷ ಮತ್ತು ಹಣಕಾಸು ವಿಭಾಗದ (ಅಮೆರಿಕ) ಮುಖ್ಯಸ್ಥರಾಗಿದ್ದ ಶಾಜಿ ಫರೂಕ್ ಅವರು ಕಳೆದ ವರ್ಷ ರಾಜೀನಾಮೆ ಕೊಟ್ಟು ಎದುರಾಳಿ ವಿಪ್ರೊಗೆ ಸೇರ್ಪಡೆಯಾಗಿದ್ದರು.

English summary
The common view has been that the growing immigration challenges in the US would push Indian IT services companies to hire more local Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X