ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ತಿಂಗಳು 10 ರೂ. ಏರುತ್ತೆ ಸಿಲಿಂಡರ್ ದರ?

|
Google Oneindia Kannada News

lpg
ನವದೆಹಲಿ, ಆ.26 : ಈಗಾಗಲೇ ಬೆಲೆ ಏರಿಕೆ ಬಿಸಿ ಎದುರಿಸುತ್ತಿರುವ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಡೀಸೆಲ್ ದರದ ಮಾದರಿಯಲ್ಲಿಯೇ ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ರೂ.10ರಷ್ಟು ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತ ಅಂತಿಮ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.

ತೈಲ ಕಂಪನಿಗಳಿಗೆ ಈಗಾಗಲೇ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದೇ ರೀತಿ ಸಿಲಿಂಡರ್ ಬೆಲೆಯನ್ನು 10 ರಿಂದ 25 ರೂ.ಗಳ ವರೆಗೆ ಪರಿಷ್ಕರಿಸುವ ಅವಕಾಶ ನೀಡಲು ಮುಂದಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಅಪಮೌಲ್ಯದ ಪರಿಣಾಮ ತೈಲ ಬೆಲೆಗಳು ಅನಿರೀಕ್ಷಿತವಾಗಿ ಹೆಚ್ಚಳವಾಗಿದೆ. ತೈಲ ಖರೀದಿಯಲ್ಲಿ ಕೇಂದ್ರ ಸರ್ಕಾರಕ್ಕೆ 30 ಸಾವಿರ ಕೋಟಿ ರೂ. ನಷ್ಟ ಉಂಟಾಗುತ್ತಿದೆ. ಇದನ್ನು ತುಂಬಿಕೊಳ್ಳಲು ಸಿಲಿಂಡರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.

ಬುಧವಾರ ಅಥವ ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಪ್ರತಿ ತಿಂಗಳು ಸಿಲಿಂಡರ್ ಬೆಲೆ ಹೆಚ್ಚಳ ಮಾಡುವ ಅಧಿಕಾರವನ್ನು ತೈಲ ಕಂಪನಿಗಳಿಗೆ ಸರ್ಕಾರ ನೀಡುವ ಸಾಧ್ಯತೆ ಇದೆ.

ಪ್ರತಿ ತಿಂಗಳು 10 ರೂ. ಏರಿಕೆ ಮಾಡದಿದ್ದರೆ, ಮೂರು ತಿಂಗಳಿಗೊಮ್ಮೆ 25 ರೂ. ಹೆಚ್ಚಳ ಮಾಡುವ ಪ್ರಸ್ತಾಪವೂ ಕೇಂದ್ರ ಸರ್ಕಾರದ ಮುಂದಿದೆ. ಯಾವ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿದೆ ಎನ್ನುವುದರ ಮೇಲೆ ಸಿಲಿಂಡರ್ ಬೆಲೆಗಳು ನಿಗದಿಯಾಗಲಿವೆ.

ಗೃಹಬಳಕೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಸಿಲಿಂಡರ್ ಬಳಸುವ ಗ್ರಾಹಕರಿಗೆ ಈ ನೀತಿ ಸಮಾನವಾಗಿ ಅನ್ವಯವಾಗಲಿದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡುತ್ತಿರುವ ತೈಲ ಕಂಪನಿಗಳು ಪ್ರತಿ ತಿಂಗಳು ಇನ್ನು ಮುಂದೆ ಸಿಲಿಂಡರ್ ದರವನ್ನು ಪರಿಷ್ಕರಿಸಲಿವೆ.

English summary
Taking a cue from monthly revisions in diesel price, the Center is likely to go in for a monthly or quarterly increase in the price of domestic LPG cylinders. The hike could be around Rs. 10 a month or Rs. 25 a quarter A final decision on timing and quantum vests with the cabinet meeting soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X