ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಜಿಲ್ಲೆಯಲ್ಲಿ ಮುಸ್ಲಿಮರ ಜತೆ ಮೋದಿ ಸಂಭ್ರಮ

By Mahesh
|
Google Oneindia Kannada News

ಬೆಂಗಳೂರು, ಆ.26: ಸ್ವಾತಂತ್ರೋತ್ಸವದ ಆಚರಣೆಯ ಸಂದರ್ಭದಲ್ಲಿ ಗುಜರಾತಿಗೆ ಹೊಸ ಜಿಲ್ಲೆಗಳನ್ನು ನೀಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ತ್ವರಿತವಾಗಿ ಕೈಗೊಂಡಿದ್ದಾರೆ. ಶನಿವಾರ ಮುಸ್ಲಿಂ ಸಮುದಾಯದವರೊಡನೆ ರಾಜ್ ಕೋಟ್ ನ ಹೊಸ ಜಿಲ್ಲೆ ಮೊರ್ಬಿಯಲ್ಲಿ ಮೋದಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಬೇಡಿಕೆ ಈಡೇರಿಸಿದ ನೆಚ್ಚಿನ ಮುಖ್ಯಮಂತ್ರಿ ಮೋದಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ ಮೊರ್ಬಿ ಜಿಲ್ಲೆ ಜನತೆ, ಬೆಳ್ಳಿ ನಾಣ್ಯದ ತುಲಾಭಾರ ಮಾಡಿದರು. ಅರವಲ್ಲಿ, ಬೊಟಡ್, ಛೋಟಾ ಉದೇಪುರ್, ಗಿರ್ ಸೋಮನಾಥ್, ಮಹಿಸಾಗರ್, ದೇವ್ ಭೂಮಿ ಧ್ವಾರಕ ಹಾಗೂ ಮೋರ್ಬಿ ಹೊಸ ಏಳು ಜಿಲ್ಲೆಗಳೊಂದಿಗೆ ಗುಜರಾತಿನಲ್ಲಿ ಈಗ 33 ಜಿಲ್ಲೆಗಳಿವೆ. ಅಧಿಕಾರ ವಿಕೇಂದ್ರಿಕರಣ ಮಾಡುವ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ತಕ್ಕಂತೆ ಜಿಲ್ಲೆಗಳನ್ನು ರಚಿಸಲಾಗಿದೆ.

ಉಳಿದಂತೆ ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಿದೆ. ಇಂಡಿಯನ್ ಬಾಡ್ಮಿಂಟನ್ ಲೀಗ್, ಲಾಕ್ಮೆ ಫ್ಯಾಷನ್ ವೀಕ್, ವಿಶ್ವಹಿಂದೂ ಪರಿಷತ್ ಸಂಚಲನ, ಮುಂಬೈ ಅತ್ಯಾಚಾರ ವಿರುದ್ಧ ಪ್ರತಿಭಟನೆ ಸೇರಿದಂತೆ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸರಣಿಯಲ್ಲಿದೆ ತಪ್ಪದೇ ನೋಡಿ...

ಮೋದಿ ಸಂಭ್ರಮಾಚರಣೆ

ಮೋದಿ ಸಂಭ್ರಮಾಚರಣೆ

ಸ್ವಾತಂತ್ರೋತ್ಸವದ ಆಚರಣೆಯ ಸಂದರ್ಭದಲ್ಲಿ ಗುಜರಾತಿಗೆ ಹೊಸ ಜಿಲ್ಲೆಗಳನ್ನು ನೀಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ತ್ವರಿತವಾಗಿ ಕೈಗೊಂಡಿದ್ದಾರೆ. ಶನಿವಾರ ಮುಸ್ಲಿಂ ಸಮುದಾಯದವರೊಡನೆ ರಾಜ್ ಕೋಟ್ ನ ಹೊಸ ಜಿಲ್ಲೆ ಮೊರ್ಬಿಯಲ್ಲಿ ಮೋದಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ

ಅಲಿಪೋರ್ ಪ್ರಾಣಿ ಸಂಗ್ರಹಾಲಯದಲ್ಲಿ ಕಂಡ ಆನೆಗಳು.PTI Photo by Swapan Mahapatra.. ಕಳೆದ ವಾರ ಕಂಡ ಪ್ರಾಣಿ ಪ್ರಪಂಚದ ಇನ್ನಷ್ಟು ಚಿತ್ರಗಳು ನಿರೀಕ್ಷಿಸಿ...

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈನಲ್ಲಿ ನಡೆದ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ನಟಿ ಯಾಮಿ ಗೌತಮ್ ಭಂಗಿ.. ಈ ಫ್ಯಾಷನ್ ಶೋನ ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಬೀದಿಗಿಳಿದ ಸ್ಟಾರ್ ಗಳು

ಬೀದಿಗಿಳಿದ ಸ್ಟಾರ್ ಗಳು

ಮುಂಬೈನ ಫೋಟೊ ಜರ್ನಲಿಸ್ಟ್ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಬಾಲಿವುಡ್ ನಟ ನಟಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

English summary
Todays News stories in Pics: Gujarat Chief Minister Narendra Modi is weighed against silver during a function to announce the creation of separate Morbi district out of Rajkot and Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X