ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ಟಿವಿಗಿಂತ ಆಕಾಶವಾಣಿಯೇ ಜನಪ್ರಿಯ

By Mahesh
|
Google Oneindia Kannada News

ಹುಬ್ಬಳ್ಳಿ, ಆ.26: ಟಿವಿ ಬಂದ ಮೇಲೆ ರೇಡಿಯೋ ಕೇಳುವವರೇ ಇಲ್ಲ. ಖಾಸಗಿ ವಾಹಿನಿಗಳ ಅಬ್ಬರ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ನಡುವೆ ಆಕಾಶವಾಣಿ ಎಂಬ ಮೆಲುದನಿಯ ಸಂಗಾತಿಯನ್ನು ಜನರು ಕಳೆದುಕೊಂಡಿದ್ದಾರೆ. ಆಕಾಶವಾಣಿ ಜನಪ್ರಿಯತೆ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂಬ ಮಾತು ನಿಜವಾದರೂ ಇತ್ತೀಚಿನ ಸಮೀಕ್ಷೆಯೊಂದು ಧಾರವಾಡ ಕೇಂದ್ರ ಟಿವಿಗಿಂತ ಜನಪ್ರಿಯವಾಗಿದೆ ಎಂಬ ಅಚ್ಚರಿಯ ಸತ್ಯ ಹೊರ ಹಾಕಿದೆ.

ಆಕಾಶವಾಣಿಯ ಶ್ರೋತೃ ಸಂಶೋಧನಾ ವಿಭಾಗದ ಸಮೀಕ್ಷೆ ನೀಡಿರುವ ವರದಿ ನಂಬುವುದೇ ಕಷ್ಟ ಎನಿಸಬಹುದು. ಆದರೆ, ಧಾರವಾಡ ಆಕಾಶವಾಣಿ ಸ್ಪಷ್ಟವಾಗಿ ಕೇಳಿಸುವ ಹಳ್ಳಿ, ಗ್ರಾಮ, ಪಟ್ಟಣ, ಹೋಬಳಿ, ನಗರಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ.

ಧಾರವಾಡ ಆಕಾಶವಾಣಿ ವ್ಯಾಪ್ತಿಯ ನೂರು ಹಳ್ಳಿ, ನೂರು ಪಟ್ಟಣಗಳಲ್ಲಿ ನಡೆಸಿದ ಸ್ಯಾಂಪಲ್ ಸರ್ವೆ ಈ ಮಾಹಿತಿ ಹೊರಗೆಡವಿದೆ.40 ಸಾವಿರ ಚದರ ಕಿ.ಮೀ ವ್ಯಾಪ್ತಿಯ ಪ್ರಸಾರ ವಲಯವನ್ನು ಹೊಂದಿರುವ ಆಕಾಶವಾಣಿ ಧಾರವಾಡ 3.42 ಕೋಟಿ ಕೇಳುಗರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಸುಮಾರು 16 ಲಕ್ಷ ರೆಡಿಯೊ ಮನೆಗಳಿದ್ದು 80 ಲಕ್ಷ ಜನ ಪ್ರತಿನಿತ್ಯ ಒಂದಲ್ಲ ಒಂದು ರೆಡಿಯೊ ಕಾರ್ಯಕ್ರಮ ಕೇಳುತ್ತಿದ್ದಾರೆ.

In Dharwad, AIR still popular than TV in weekdays

ಎಲ್ಲರ ಪ್ರೀತಿಯ ಚಿತ್ರಗೀತೆಗಳ ಜತೆಗೆ ಪ್ರದೇಶ ಸಮಾಚಾರ, ವಾರ್ತೆ, ಆರೋಗ್ಯ ಸಂಬಂಧಿ ಕಾರ್ಯಕ್ರಮ, ವಿಶೇಷ ಬಾನುಲಿ ಸರಣಿಗಳು, ಕರಂಗ ಹೀಗೆ ಹತ್ತಾರು ಕಾರ್ಯಕ್ರಮಗಳಿಂದ ಆಕಾಶವಾಣಿ ಧಾರವಾಡ ಕೇಳುಗರ ನಿತ್ಯ ಸಂಗಾತಿಯಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಧಾರವಾಡದ ಶೇ 80.5 ರಷ್ಟು ಜನಸಂಖ್ಯೆ ಆಕಾಶವಾಣಿಗೆ ಅಂಟಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 79.3 ರಷ್ಟು ಹಾಗೂ ನಗರ ವಿಭಾಗದಲ್ಲಿ ಶೇ 81.3 ರಷ್ಟು ಕೇಳುಗರನ್ನು ಹೊಂದಿದೆಯಂತೆ. ಆದರೆ, ಶೇ 19.5 ರಷ್ಟು ಮಂದಿ ರೇಡಿಯೋ ಕೇಳುವುದೇ ಇಲ್ಲವಂತೆ.

ಟಿವಿಗೆ ಹೋಲಿಸಿದರೆ ಬೆಳಗ್ಗೆ 6.30 ರಿಂದ 9 ಗಂಟೆ ತನಕ ಆಕಾಶವಾಣಿ ಅತಿ ಹೆಚ್ಚು ಕೇಳುಗರನ್ನು ಹೊಂದಿರುತ್ತದೆ. ಬೆಂಗಳೂರಿಗೆ ಹೋಲಿಸಿದರೆ ಎಲ್ಲರ ಕೈಲೂ ಮೊಬೈಲ್ ಗಳಿದ್ದು ಅದರಲ್ಲಿ ಎಫ್ ಎಂ ವಾಹಿನಿಗಳದ್ದೇ ಸದ್ದು ಕೇಳಿಬರುತ್ತದೆ. ಧಾರಾವಾಡದಲ್ಲಿ ಇಂದಿಗೂ ಹಳೆ ಕಾಲದ ರೇಡಿಯೋ ಸೆಟ್ ಗಳು ಗುಜುರಿ ಸೇರದಂತೆ ನೋಡಿಕೊಳ್ಳಲಾಗಿದೆ.
ವಾರದ ದಿನಗಳಲ್ಲಿ ಟಿವಿಗಿಂತ ರೇಡಿಯೋ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಪುರುಷರಿಗಿಂತ ಗೃಹಿಣಿಯರು ಟಿವಿಯಲ್ಲಿ ಸೀರಿಯಲ್ ನೋಡುವುದಕ್ಕಿಂತ ರೇಡಿಯೋದಲ್ಲಿ ಹಾಡು ಹಸೆ, ಆರೋಗ್ಯ ಸಲಹೆ ಕಾರ್ಯಕ್ರಮ ಕೇಳುವುದರಲ್ಲೇ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರಂತೆ.

ಒಟ್ಟಾರೆ ಧಾರಾವಾಡ ಅಕಾಶವಾಣಿ(AIR) ಕೇಂದ್ರದ ಪ್ರಸಾರ ಧಾರವಾಡ, ಬೆಳಗಾವಿ, ಬಿಜಾಪುರ, ಕೊಪ್ಪಳ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ತಲುಪುತ್ತಿದೆ.

ಹೆಚ್ಚಿನ ಪ್ರಸರಣ ಸಾಮರ್ಥ್ಯದೊಂದಿಗೆ ರಾಯಚೂರು, ಬಳ್ಳಾರಿ, ದಾವಣಗೆರೆ, ಗುಲ್ಬರ್ಗಾ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೂ ತಲುಪಿದೆ. ನೆರೆ ರಾಜ್ಯ ಮಹಾರಾಷ್ಟ್ರ ಹಾಗೂ ಗೋವಾದಲ್ಲೂ ಧಾರವಾಡದ ದನಿ ಕೇಳಿ ಬಂದಿದೆ.

ವಿವಿಧ ಭಾರತಿ ಪ್ರತಿನಿತ್ಯ 56 ಲಕ್ಷ ಕೇಳುಗರನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಆಧುನಿಕ ತಂತ್ರಜ್ಞಾನದ ಬೆಂಬಲದಿಂದ ಮನರಂಜನೆ ಮಾಹಿತಿಗಳನ್ನು ಕೇಳುಗರಿಗೆ ತಲುಪಿಸುತ್ತಾ ಜನಪ್ರಿಯ ಕಾಯ್ದುಕೊಂಡಿದೆ.

English summary
A recent survey conducted by the Audience Research Unit of the All India Radio (AIR), Dharwad, has proved that the radio, once the dominant public voice, is not far behind its johnnie-come-lately competitor, TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X