• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈ : ಫೋಟೋಗ್ರಾಫರ್ ಮೇಲೆ ಗ್ಯಾಂಗ್ ರೇಪ್

|

ಮುಂಬೈ, ಆ.23 : ನಿಯತಕಾಲಿಕೆಯ ಛಾಯಾಗ್ರಾಹಕಿ ಮೇಲೆ ಯುವಕರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮುಂಬೈನ ಮಹಾಲಕ್ಷ್ಮೀ ಪ್ರದೇಶದಲ್ಲಿ ನಡೆದಿದೆ. ಘಟನೆಯಿಂದ ಅಸ್ವಸ್ಥಗೊಂಡಿರುವ ಯುವತಿಯನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಗುರುವಾರ ಸಂಜೆ ವರದಿಗಾರಿಕೆಗಾಗಿ ಸಹೋದ್ಯೋಗಿಯ ಜೊತೆ ಛಾಯಾಗ್ರಾಹಕಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಛಾಯಾಗ್ರಾಹಕಿ ಜೊತೆ ಇದ್ದ ಸಹೋದ್ಯೋಗಿಯನ್ನು, ಮಹಾಲಕ್ಮೀ ಬಡಾವಣೆಯ ಶಕ್ತಿ ಮಿಲ್ ನಲ್ಲಿ ಕಟ್ಟಿಹಾಕಿದ ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಯುವತಿಯ ಸ್ನೇಹಿತರು ಮತ್ತು ಕುಟುಂಬದವರು ಎನ್.ಎಂ.ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಸ್ ಲೋಕ್ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ಸಂಜೆ ನಿಯತಕಾಲಿಕೆಯೊಂದೆ ವರದಿಗೆ ಮಹಾಲಕ್ಮೀ ಮಿಲ್ ಬಳಿ ತೆರಳಿದ್ದಾಗ, ಅಲ್ಲಿಗೆ ಆಗಮಿಸಿದ ಐವರು ಯುವಕರ ಗುಂಪು, ಛಾಯಾಗ್ರಾಹಕಿ ಜೊತೆ ಇದ್ದ ಸಹೋದ್ಯೋಗಿಯ ಜೊತೆ ಜಗಳವಾಡಿದ್ದಾರೆ. ನಂತರ ಆತನಿಗೆ ಥಳಿಸಿ ಮಿಲ್ ನಲ್ಲಿ ಕಟ್ಟಿಹಾಕಿದ್ದಾರೆ. ನಂತರ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಎಂದು ತಿಳಿದು ಬಂದಿದೆ.

ಯುವತಿ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದಾಳೆ ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಜೋಶಿ ಮಾರ್ಗ ಪೊಲೀಸರು ಹೇಳಿದ್ದಾರೆ. ತಲೆ ಮರಿಸಿಕೊಂಡಿರುವ ಇಬ್ಬರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಯುವತಿ ಚೇತರಿಸಿಕೊಂಡ ಬಳಿಕ ಘಟನೆಯ ಪೂರ್ಣ ವಿವರ ಲಭ್ಯವಾಗಲಿದೆ.

ರೇಖಾಚಿತ್ರ ಬಿಡುಗಡೆ :ಫೋಟೋಗ್ರಾಫರ್ ಮೇಲೆ ಗುರುವಾರ ರಾತ್ರಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳ ರೇಖಾಚಿತ್ರವನ್ನು ಶುಕ್ರವಾರ ಬೆಳಗ್ಗೆ ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಯುವತಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಐವರು ಶಂಕಿತ ಅತ್ಯಾಚಾರಿಗಳ ರೇಖಾ ಚಿತ್ರ ಬಿಡುಗಡೆ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ 18 ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.

English summary
Three among a group of five men raped a 22-year-old photographer, interning for a lifestyle magazine, after bashing up her male colleague at an abandoned mill close to the railway tracks in the Mahalaxmi area on Thursday, August 22 evening. girl admitted to Jaslok Hospital for a medical examination. N M Joshi Marg police registered case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X