ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಕಿಣಿ ಸಾರಥ್ಯದಲ್ಲಿ 'ಓ ಮನಸೇ' ಮತ್ತೆ ಉದಯ

By Mahesh
|
Google Oneindia Kannada News

ಬೆಂಗಳೂರು, ಆ.22: ಕನ್ನಡದ ಯುವ ಮನಸ್ಸನ್ನು ಕದ್ದ ರವಿ ಬೆಳೆಗೆರೆ ಅವರ 'ಸಾಫ್ಟ್' ಬರಹಗಳ ಪತ್ರಿಕೆ ಓ ಮನಸೇ ಮತ್ತೆ ಆರಂಭಗೊಳ್ಳುವುದು ಖಾತ್ರಿಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಿಮ್ಮ ಕೈ ಸೇರಲಿದೆ. ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರ ಸಂಪಾದಕತ್ವದಲ್ಲಿ ಓ ಮನಸೇ ಮತ್ತೆ ಪ್ರಕಟಣೆಯಾಗಲಿದೆ.

ರವಿ ಬೆಳಗೆರೆ ಅವರು 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಎರಡು ಮೂರು ಸಂಚಿಕೆಯಲ್ಲಿ ಬರೆದಿದ್ದರು. ರವಿಬೆಳಗೆರೆ ಅವರು ಓ ಮನಸೇ ಬಗ್ಗೆ ಬರೆದಿದ್ದದ್ದು ಯಥಾವತ್ತು ನೀಡುತ್ತಿದ್ದೇವೆ ಓದಿ..

ಬರೆಯಲು ಸಿದ್ಧವಾಗಿರಿ!: ಮೂರು ವರ್ಷ ಸ್ಥಗಿತಗೊಂಡ 'ಓ ಮನಸೇ..' ಮತ್ತೆ ಶುರುವಾಗುತಿದೆ. ಈ ಬಾರಿ ಖಂಡಿತಾ ನಿಮಗೆ ನಿರಾಶೆಗೊಳಿಸುವುದಿಲ್ಲ. ಈ ಮೂರು ವರ್ಷಗಳಲ್ಲಿ 'ಓ ಮನಸೇ..' ಯನ್ನೇ ಹೋಲುವ ಹಲವು ಪಾಕ್ಷಿಕಗಳು, ಸಾಪ್ತಾಹಿಕಗಳು ಮಾರುಕಟ್ಟೆಗೆ ಬಂದಿವೆ ಮತ್ತು ಹೋಗಿವೆ, ಆದರೆ ಓ ಮನಸೆ ಕೊಟ್ಟಷ್ಟು ಸುಖ, ಸಂತೋಷ ಮತ್ತು ನೆಮ್ಮದಿಯನ್ನು ಬೇರೆ ಯಾವ ಪತ್ರಿಕೆಗಳೂ ಕೊಟ್ಟಿಲ್ಲ ಎಂದು ಪತ್ರಗಳು ಮೇಲೆ ಪತ್ರ ಬರೆದ ನಿಮ್ಮೆಲ್ಲರಿಗೂ ಥ್ಯಾಂಕ್ಸ್ ಹೇಳುತ್ತಾ ಮನಸ್ಸಿನಂಗಳದೊಳಗೆ ಮತ್ತೆ ಕಾಲಿಡುತ್ತಿದ್ದೇವೆ.

ನಿಮ್ಮೆಲ್ಲ ಮಿತ್ರರಿಗೂ, ಬಂಧುಗಳಿಗೂ ಮತ್ತು ಅಕ್ಷರ ವ್ಯಾವೋಹಕ್ಕೆ ಬಲಿಯಾದವರಿಗೂ ಈ ಶುಭ ಸುದ್ದಿಯನ್ನು ಟಾಂಟಾಂ ಮಾಡುತ್ತೀರಿ ಅನ್ನೋ ನಂಬಿಕೆ ನಮ್ಮದು.

ಅಂದ ಹಾಗೆ ಹಳೆಯ ಹಿಟ್ ಕಾಲಂಗಳ ಜೊತೆ ಹೊಸ ಕಾಲಂಗಳೂರು' ಓ ಮನಸೇ..'ಗೆ ಸೇರ್ಪಡೆಯಾಗಲಿವೆ. ನೀವೂ ಗರಿಗರಿಯಾಗಿ ಬರೀಬಹುದು. ಸಿದ್ಧರಾಗಿರಿ
-ಬೆಳಗೆರೆ

Popular Kannada Magazine O Manase re launch

ಈ ವಾರದ ಮನಸಿನ ಮಾತು:

ಪ್ರಿಯ ಓದುಗರೇ,

'ಓ ಮನಸೇ....' ಪತ್ರಿಕೆ ಮತ್ತೆ ಆರಂಭವಾಗುತ್ತಿದೆ ಎಂಬ ನಾಲ್ಕು ಸಾಲುಗಳ ಪ್ರಕಟಣೆಗೆ ನಿಮ್ಮಿಂದ ದೊರಕಿದ ಸ್ವಾಗತ ಅಭೂತಪೂರ್ವ. ಯಾವಾಗ ಶುರು ಆಗುತ್ತಿದೆ ಅನ್ನುವ ಕುತೂಹಲದಿಂದ ಹಿಡಿದು ಬೇಗನೆ ಶುರು ಮಾಡ್ರೀ ಅನ್ನುವ ಅಪ್ಪಣೆ ತನಕ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಬರೀ ಆಸೆ ಹುಟ್ಟಿಸ್ತಿದೀರೋ ಅಥವಾ ನಿಜವಾಗ್ಲೂ ಶುರು ಮಾಡ್ತಿದೀರೋ ಎಂದು ಕಿಚಾಯಿಸಿದವರೂ ಇದ್ದಾರೆ. ಅಂದಹಾಗೆ 'ಓ ಮನಸೇ..'ಯ ಪುನರಾಗಮನವನ್ನು ನಾವು ವಿಶೇಷ ರೀತಿಯಲ್ಲಿ ಆಚರಿಸುವುದಕ್ಕೆ ನಿರ್ಧರಿಸಿದ್ದೇವೆ.

'ಸಮಾಧಾನ'ದಂತಹ ಜನಪ್ರಿಯ ಅಂಕಣಗಳ ಜೊತೆಗೆ ಕೆಲವು ಹೊಸ ಅಂಕಣಗಳು ಸೇರ್ಪಡೆಯಾಗುತ್ತಿವೆ. ನಮ್ಮ ನಿತ್ಯದ ಬದುಕಲ್ಲಿ ಪದೇಪದೇ ಬಂದುಹೋಗುವ ಕೆಲವು ವಿಶಿಷ್ಟ ಆಚರಣೆಗಳ ಹಿಂದಿರುವ ಕಾರಣಗಳನ್ನು ಹುಡುಕುವ 'ಆಚಾರ ವಿಚಾರ', ನಿಮ್ಮೂರ ದೇವರ ಹಿನ್ನೆಲೆಯನ್ನು ಪರಿಚಯಿಸುವ 'ಊರ ದೇವರ ಸುತ್ತ ನೂರು ಕತೆ', ನಿಮ್ಮ ಕಾನೂನು eನವನ್ನು ವಿಸ್ತರಿಸುವ 'ಲಾ ಪಾಯಿಂಟ್', ಹಳ್ಳಿ ಮನೆಗಳಲ್ಲಿ ಇಂದಿಗೂ ಮಕ್ಕಳ ಮನಸ್ಸಲ್ಲಿ ಮನೆ ಮಾಡಿರುವ ಭೂತ, ಪ್ರೇತ, ಪಿಶಾಚಿಗಳ ಜಗತ್ತನ್ನು ಅನಾವರಣಗೊಳಿಸುವ 'ದೆವ್ವದ ಕತೆ', ಇತ್ಯಾದಿ.. ಇವೆಲ್ಲದರ ಜೊತೆ ರುಚಿಗೆ ತಕ್ಕಷ್ಟು ಕತೆ, ಕವನ, ಜೋಕ್ಸ್ ಇದ್ದೇ ಇರುತ್ತವೆ. ಓದುವ ಸುಖ ನಿಮ್ಮದಾಗಲಿ.

ನಿಮ್ಮ ಲೇಖನಗಳನ್ನು [email protected] ಗೆ ಕಳಿಸಿ..

ಹೆಚ್ಚಿನ ಅಪ್ ಡೇಟ್ ಗಳಿಗೆ https://www.facebook.com/omanase2013 ಪುಟ ನೋಡುತ್ತಿರಿ

-ಬೆಳಗೆರೆ

English summary
Popular Kannada Magazine O Manase is set to re launch says Hai Bangalore tabloid and O Manase owner cum editor Ravi Belagere. Uday Marakani will be editor in chief of O Manase magazine which attracted many youths in the past
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X