ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಆಡಳಿತ:ಮುಜರಾಯಿ ದೇವಾಲಯಗಳು ಮತ್ತೆ ಸುದ್ದಿಯಲ್ಲಿ

|
Google Oneindia Kannada News

ಬೆಂಗಳೂರು, ಆ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಸದಾ ಸುದ್ದಿಯಲ್ಲಿರುತ್ತದೆ. ಇದಕ್ಕೆ ಪೂರಕ ಎನ್ನುವಂತೆ, ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಸುಮಾರು 41 ಐತಿಹಾಸಿಕ ದೇವಾಲಯಗಳ ಆಡಳಿತ ಮಂಡಳಿಯನ್ನು ರದ್ದಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯದ 41ಎ ದರ್ಜೆ ದೇವಾಲಯುಗಳ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ಧಾರ್ಮಿಕ ದತ್ತಿ ಪರಿಷತ್ತಿನ ನಿಯಮದಂತೆ ಸಮಿತಿ ಮೂರು ವರ್ಷ ಇರಬಹುದಾಗಿತ್ತು.

ಆದರೆ ಸಮಿತಿಯನ್ನು ಮುಂದುವರಿಸಲು ಪರಿಷತ್ ಇಚ್ಚಿಸದೇ ಇರುವುದರಿಂದ 41 ದೇವಾಲಯಗಳ ಸಮಿತಿಯನ್ನು ಜುಲೈ 31, 2013ಕ್ಕೆ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ.

ಬುಧವಾರ (ಆ 21) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಧಾನಪರಿಷತ್ ಸದಸ್ಯ ಮತ್ತು ಮಾಜಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸರಕಾರದ ಈ ಕ್ರಮ ಕಾನೂನಿಗೆ ವಿರುದ್ದವಾಗಿದೆ.

ಸರಕಾರದ ಈ ನಡೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ, ಸರಕಾರ ದೇವಾಲಯದ ಸಮಿತಿಗಳ ಹಕ್ಕನ್ನು ಕಿತ್ತುಕೊಂಡಿದೆ. ತನಗೆ ಬೇಕಾದ ವ್ಯಕ್ತಿಗಳನ್ನು ನೇಮಕ ಮಾಡಲು ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಪೂಜಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆಡಳಿತ ಮಂಡಳಿ ರದ್ದುಗೊಂಡ 41 ದೇವಾಲಯಗಳ ಸಂಪೂರ್ಣ ಪಟ್ಟಿ ಸ್ಲೈಡಿನಲ್ಲಿ ವೀಕ್ಷಿಸಿ..

ದಕ್ಷಿಣಕನ್ನಡ ಜಿಲ್ಲೆ

ದಕ್ಷಿಣಕನ್ನಡ ಜಿಲ್ಲೆ

1. ಬೆಳ್ತಂಗಡಿ ತಾಲೂಕು ಸೌತಡ್ಕ ಮಹಾಗಣಪತಿ ದೇವಾಲಯ
2. ಸುಳ್ಯ ತಾಲೂಕು ತೋಡಿಕ್ಕಾನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ
3. ಸೋಮೇಶ್ವರ ಸೋಮನಾಥ ದೇವಾಲಯ
4. ಕಾವೂರು ಮಹಾಲಿಂಗೇಶ್ವರ ದೇವಾಲಯ
5. ಕದ್ರಿ ಮಂಜುನಾಥಸ್ವಾಮಿ ದೇವಾಲಯ
6. ಬಂಟ್ವಾಳ ಮಹಾಲಿಂಗೇಶ್ವರ ದೇವಾಲಯ
7. ನಂದೇಶ್ವರ ದೇವಾಲಯ, ಪಣಂಬೂರು
8. ಈಶ್ವರ ದೇವಾಲಯ, ಪಾಂಡೇಶ್ವರ
9. ವಿನಾಯಕ ಶಂಕರನಾರಾಯಣ ದೇವಾಲಯ, ಪಾಣೆಮಂಗಳೂರು
(ಚಿತ್ರದಲ್ಲಿ ಸೌತಡ್ಕ ದೇವಾಲಯ)

ಉಡುಪಿ ಜಿಲ್ಲೆ

ಉಡುಪಿ ಜಿಲ್ಲೆ

10. ಹೊಸಮಾರಿಗುಡಿ ಮತ್ತು ಜನಾರ್ಧನ ದೇವಾಲಯ, ಕಾಪು
11. ಗುಡ್ಡೆಮಾಡಿ ಸುಬ್ರಮಣ್ಯ ದೇವಾಲಯ
12. ಎಲ್ಲೂರು ವಿಶ್ವೇಶ್ವರ ದೇವಾಲಯ
13. ಮಹಿಷಮರ್ಧಿನಿ ದೇವಾಲಯ, ಕಡಿಯಾಳಿ
14. ಅಮೃತೇಶ್ವರಿ ದೇವಾಲಯ, ಕೋಟಾ
(ಚಿತ್ರದಲ್ಲಿ ಹೊಸ ಮಾರಿಗುಡಿ ದೇವಾಲಯ)

ಉಡುಪಿ ಜಿಲ್ಲೆ

ಉಡುಪಿ ಜಿಲ್ಲೆ

15. ದುರ್ಗಾಪರಮೇಶ್ವರಿ ದೇವಾಲಯ, ಮಂದರ್ತಿ
16. ಕೋಟಿಲಿಂಗೇಶ್ವರ ದೇವಾಲಯ, ಕೋಟೇಶ್ವರ
17. ದುರ್ಗಾಪರಮೇಶ್ವರಿ ದೇವಾಲಯ, ಮುಂಡ್ಕೂರು
18. ದುರ್ಗಾಪರಮೇಶ್ವರಿ ದೇವಾಲಯ, ಉಪ್ಪುಂದ
19. ಅನಂತಪದ್ಮನಾಭ ದೇವಾಲಯ, ಪೆರ್ಡೂರು
(ಚಿತ್ರದಲ್ಲಿ ಮುಂಡ್ಕೂರು ದೇವಾಲಯ)

ಪ್ರಸಿದ್ದ ದೇವಾಲಯಗಳು

ಪ್ರಸಿದ್ದ ದೇವಾಲಯಗಳು

20. ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯ, ಬೆಳಗಾವಿ
21. ಮೈಲಾರಲಿಂಗೇಶ್ವರ ದೇವಾಲಯ, ಮೈಲಾಪುರ, ಯಾದಗಿರಿ
22. ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ, ಚಿತ್ರದುರ್ಗ
23. ಚನ್ನಕೇಶವಸ್ವಾಮಿ ದೇವಾಲಯ, ಬೇಲೂರು
24. ವಿಧುರಾಶ್ವಥ್ಥ ದೇವಾಲಯ, ಗೌರಿಬಿದನೂರು
25. ಯೋಗನಂದೀಶ್ವರ ದೇವಾಲಯ, ಚಿಕ್ಕಬಳ್ಳಾಪುರ
26. ಭಗಂಡೇಶ್ವರ ದೇವಾಲಯ, ಭಾಗಮಂಡಲ
27. ರೇವಣಸಿದ್ದೇಶ್ವರ ದೇವಾಲಯ, ರಾಮನಗರ
(ಚಿತ್ರದಲ್ಲಿ ರೇಣುಕಾ ಯಲ್ಲಮ್ಮ ದೇವಾಲಯ)

ಸಮಿತಿ ರದ್ದಾದ ದೇವಾಲಯಗಳು

ಸಮಿತಿ ರದ್ದಾದ ದೇವಾಲಯಗಳು

28. ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಮಾಲೂರು
29. ಭಾಗ್ಯವಂತ ದೇವಾಲಯ, ಅಫ್ಜಲಪುರ, ಗುಲ್ಬರ್ಗ
30. ಕಳಸೇಶ್ವರಸ್ವಾಮಿ ದೇವಾಲಯ, ಕಳಸ
31. ಸುರುಪುರ ತಾಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನ,
32. ಹುಲಿಗಮ್ಮ ದೇವಾಲಯ, ಕೊಪ್ಪಳ

ಇತರ ಪ್ರಸಿದ್ದ ದೇವಾಲಯಗಳು

ಇತರ ಪ್ರಸಿದ್ದ ದೇವಾಲಯಗಳು

33. ಬಿಳಿರಂಗನಾಥಸ್ವಾಮಿ ದೇವಾಲಯ, ಚಾಮರಾಜನಗರ
34. ಸೋಮೇಶ್ವರಸ್ವಾಮಿ ದೇವಾಲಯ, ಹಲಸೂರು, ಬೆಂಗಳೂರು
35. ವೀರಾಂಜನೇಯಸ್ವಾಮಿ ದೇವಾಲಯ, ಬಾಣಸವಾಡಿ, ಬೆಂಗಳೂರು
36. ವೈದ್ಯೇಶ್ವರಸ್ವಾಮಿ ದೇವಾಲಯ, ತಲಕಾಡು, ಮೈಸೂರು
37. ಸೂಗೂರೇಶ್ವರಸ್ವಾಮಿ ದೇವಾಲಯ, ರಾಯಚೂರು
38. ದುರ್ಗಾಂಬ ದೇವಾಲಯ, ಪಾಣೆಮಂಗಳೂರು
39. ರುದ್ರೇಸ್ವಾಮಿ ದೇವಾಲಯ, ನಾಯಕನಹಟ್ಟಿ
40. ಮೌನೇಶ್ವರ ದೇವಾಲಯ, ಸುರಪುರ
41. ಭೋಗನಂದೀಶ್ವರ ದೇವಾಲಯ ದೇವಾಲಯ, ಚಿಕ್ಕಬಳ್ಳಾಪುರ
(ಚಿತ್ರದಲ್ಲಿ ಹಲಸೂರು ದೇವಾಲಯ)

English summary
Karnataka government withdrawn management committee of 41 Muzrai temples effective from July 31, 21013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X