ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಟ್ಟರ್ ಗೆ ಒಂದು ದಿನದ ಗಡುವು ಕೊಟ್ಟ ಪಾಪು

|
Google Oneindia Kannada News

jagadish shettar
ಹುಬ್ಬಳ್ಳಿ, ಆ.22 : ರಿಕ್ರಿಯೇಶನ್ ಕ್ಲಬ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ನಿಲುವು ಪ್ರಕಟಿಸಬೇಕೆಂದು ನಾಡೋಜ ಪಾಟೀಲ್ ಪುಟ್ಟಪ್ಪ ಒಂದು ದಿನದ ಗಡುವು ನೀಡಿದ್ದಾರೆ. ಇದರಿಂದಾಗಿ ಹುಬ್ಬಳ್ಳಿಯ ಶೆಟ್ಟರ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ಜಾಗವನ್ನು ರಿಕ್ರಿಯೇಶನ್ ಕ್ಲಬ್ ಅನ್ನಾಗಿ ಪರಿವರ್ತಿಸಿದ ವಿರುದ್ಧ ಗ್ರೌಂಡ್ ಬಚಾವೋ ಸಮಿತಿ ಆಶ್ರಯದಲ್ಲಿ ಶೆಟ್ಟರ್ ನಿವಾಸದ ಎದುರು ಬುಧವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಇದೇವೇಳೆ ತಮ್ಮ ನಿಲುವು ಪ್ರಕಟಿಸಲು ಶೆಟ್ಟರ್ ಗೆ ಸಮಿತಿ ಅಧ್ಯಕ್ಷ ಪಾಟೀಲ್ ಪುಟ್ಟಪ್ಪ ಗಡುವು ನೀಡಿದ್ದಾರೆ.

ಮೈದಾನ ಸಾರ್ವಜನಿಕರಿಗೆ ಮುಕ್ತವಾಗಬೇಕು ಎಂದು ಆಗ್ರಹಿಸಿ ರಾಜಕೀಯ ಹಿತಾಸಕ್ತಿ ಇಲ್ಲದೆ ಪ್ರತಿಭಟನೆ ಮಾಡುತ್ತಿದ್ದೇವೆ. ಜಗದೀಶ್ ಶೆಟ್ಟರ್ ಅವರ ತೇಜೋವಧೆ ಮಾಡಲು ಅಲ್ಲ ಎಂದು ಸಮತಿ ಸ್ಪಷ್ಟಪಡಿಸಿದೆ.

ರಾಜಕೀಯ ನಾಯಕರು ಜನರಲ್ಲಿ ಒಬ್ಬರಾಗಬೇಕು. ಪ್ರತ್ಯೇಕವಾಗಿ ಬದುಕಬಾರದು. ಕೆಲವರ ಹಿತಾಸಕ್ತಿ ಕಾಪಾಡಲು ಸರ್ಕಾರಿ ಜಾಗದಲ್ಲಿದ್ದ ಮೈದಾನವನ್ನು ಕ್ಲಬ್‌ನ್ನಾಗಿ ಪರಿವರ್ತಿಸಿರುವ ಕುರಿತು ಶೆಟ್ಟರ್ ಗುರುವಾರ ಸಂಜೆಯವೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಪಾಪು ಗಡುವು ವಿಧಿಸಿದ್ದಾರೆ.

ನನ್ನ ಪಾತ್ರವಿಲ್ಲ : ಸಾರ್ವಜನಿಕರಿಗೆ ಮುಕ್ತವಾದ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಆಗಿ ಪರಿವರ್ತಿಸುವಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಉದ್ದೇಶದಿಂದ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಾನು ಸ್ಥಳೀಯ ಜನಪ್ರತಿನಿಧಿಯಾದ ಕಾರಣ ನನ್ನನ್ನು ಕ್ಲಬ್ ಗೌರವ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕಾನೂನು ಮೂಲಕವೇ ಕ್ಲಬ್ ಸ್ಥಾಪಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಕ್ಲಬ್ ಸ್ಥಾಪನೆಯಾಗಿಲ್ಲ ಎಂದು ಶೆಟ್ಟರ್ ತಿಳಿಸಿದರು.

ಪ್ರಸ್ತುತ ನಾವು ಪ್ರತಿ ಪಕ್ಷ ಸ್ಥಾನದಲ್ಲಿ ಕುಳಿತಿದ್ದೇವೆ. ಕ್ಲಬ್ ಅಕ್ರಮವಾಗಿ ಸ್ಥಾಪನೆಗೊಳ್ಳುತ್ತಿದ್ದರೆ ಆ ಕುರಿತು ಸರ್ಕಾರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ, ನಾವು ತನಿಖೆ ಎದುರಿಸಲು ಸಿದ್ಧ ಎಂದರು.

English summary
The protest against the conversion of Hubli sports ground into a recreation club took a new dimension on Wednesday, August 22. Ground Bachao Samiti leader Patil Puttappa, serving a 24-hour ultimatum to former CM Jagadish Shettar, who is a member of the club, to clarify his stand on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X