ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಾರ್ಟರ್ 'ಸ್ಕಾಚ್' ಹೀರುವುದನ್ನು ಮರೆತು ಬಿಡಿ

By Mahesh
|
Google Oneindia Kannada News

ಬೆಂಗಳೂರು, ಆ.21: 'ಖಾಲಿ ಕ್ವಾರ್ಟರ್ ಬಾಟ್ಲಿಯಂತೆ ಲೈಫು..' ಎಂದು ಕುಡಿದ ನಂತರ ಹಾಡುತ್ತಿದ್ದ ಮದ್ಯಪ್ರಿಯರಿಗೆ ಇನ್ಮುಂದೆ ವಿದೇಶಿ ಮದ್ಯದ ರುಚಿ ಇನ್ನಷ್ಟು ಕಹಿಯಾಗಲಿದೆ.

ರುಪಾಯಿ ಅಪಮೌಲ್ಯದಿಂದ ಏನೇನು ತೊಂದರೆಯಾಗಲಿದೆ, ಯಾವ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ. ಡಾಲರ್ ಅಲ್ಲದೆ ವಿಶ್ವದ ಇತರೆ ಕರೆನ್ಸಿಗಳ ಎದುರು ರುಪಾಯಿ ಮೌಲ್ಯ ಕುಸಿದರೆ ಆಗುವ ಅನಾಹುತಗಳ ಬಗ್ಗೆ ಇಲ್ಲಿ ಓದಿ

ಡಾಲರ್ ಎದುರು ರುಪಾಯಿ ದಿನೇ ದಿನೇ ಕುಸಿಯುತ್ತಿರುವುದರಿಂದ ಸ್ಕಾಚ್ ಬೆಲೆ ಶೇ 30ರಷ್ಟು ಏರಿಕೆ ಮಾಡುವ ಒತ್ತಡ ಹೆಚ್ಚಿದೆ. ಅಂತಾರಾಷ್ಟ್ರೀಯ ವೈನ್ಸ್ ಹಾಗೂ ಸ್ಪಿರಿಟ್ಸ್ Connoisseurs ಈ ಬಗ್ಗೆ ಸುಳಿವು ನೀಡಿದೆ.

Rupee fall: Imported liquor prices soar 30%

ಯುರೋಪ್, ಯುಎಸ್, ಲ್ಯಾಟಿನ್ ಅಮೆರಿಕ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮುಂತಾದ ದೇಶಗಳಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಆಮದು ಮಾಡಿಕೊಳ್ಳುತ್ತದೆ. ರುಪಾಯಿ ಮೌಲ್ಯ ಕ್ಷಣ ಕ್ಷಣಕ್ಕೂ ಕುಸಿಯುತ್ತಿರುವುದರಿಂದ ಮದ್ಯದ ಬ್ರಾಂಡ್ ಗಳ ಬೆಲೆ ಏರಿಕೆ ಕಂಡಿದ್ದು ಆಮದು ವೆಚ್ಚ, ಸುಂಕ ಎಂಆರ್ ಪಿ ದರ ಏರಿಕೆ ಮಾಡಲು ಬೇಡಿಕೆ ಬಂದಿದೆ.

ಈಗ ಹೊಸ ಆಮದು ಬೇಡಿಕೆ ಬರುತ್ತಿದ್ದಂತೆ ಅದರ ಜತೆಗೆ ಬೆಲೆ ಏರಿಕೆ ಟ್ಯಾಗ್ ಕೂಡಾ ತಗುಲಾಗಿ ಕಳಿಸಬೇಕಾಗಿದೆ. ಮದ್ಯದ ಬೆಲೆಯನ್ನು ಗ್ರಾಹಕ ಎಲೆಕ್ಟ್ರಾನಿಕ್ಸ್ ಅಥವಾ ಎಫ್ ಎಂ ಸಿಸಿ ಮುಂತಾದ ಕ್ಷೇತ್ರದ ಪದಾರ್ಥಗಳಂತೆ ತಕ್ಷಣಕ್ಕೆ ಏರಿಸಲು ಬರುವುದಿಲ್ಲ. ಆಮದುದಾರರು ಮೊದಲಿಗೆ ವಿದೇಶಿ ಮದ್ಯದ ಬ್ರ್ಯಾಂಡ್ ನ ಪರಿಷ್ಕೃತ ದರಗಳ ಜತೆ ರೀಟೇಲ್ ದರವನ್ನು ಅಬಕಾರಿ ಇಲಾಖೆಗೆ ತಿಳಿಸಬೇಕು.

21ಕ್ಕೂ ಅಧಿಕ ವೈನ್ ಬ್ರ್ಯಾಂಡ್ ಗಳನ್ನು ಮಾರಾಟ ಮಾಡುವ Finewinesnmore ಸಂಸ್ಥೆಯ ಅಭಿಮಲೆಕ್ ಎಂ, ಡೇವಿಡ್ ಅವರ ಪ್ರಕಾರ ಚಿಲಿ ಹಾಗೂ ನ್ಯೂಜಿಲೆಂಡ್ ನಿಂದ ಬರುವ ವೈನ್ ಗೆ ಈಗಾಗಲೇ ಶೇ 38ರಷ್ಟು ಅಧಿಕ ವೆಚ್ಚ ಕೊಟ್ಟು ತರೆಸಿಕೊಳ್ಳಲಾಗಿದೆಯಂತೆ. 750 ಎಂಎಲ್ ನ ಚಿಲಿಯನ್ ಅಥವಾ ಕಿವೀಸ್ ವೈನ್ ಬೆಲೆ 1,300 ರು.ನಿಂದ 1800 ರು ಗೆ ಏರಿದೆ.

ಆಮದು ದರದಲ್ಲಿ ಪ್ರತಿ 1 ರು ಏರಿಕೆಯಿಂದ ಕಂಪನಿಗಳಿಗೆ 2.5ರು ಅಧಿಕ ಹೊರೆ ಬೀಳುತ್ತಿದೆ. ಇದರ ಜತೆಗೆ ಪ್ರತಿ ರಾಜ್ಯಗಳಲ್ಲಿ ಅಬಕಾರಿ ನೀತಿ ಬದಲಾಗುತ್ತದೆ ಅಲ್ಲದೆ ವಾರ್ಷಿಕವಾಗಿ ಅಬಕಾರಿ ಬೆಲೆ ಪರಿಷ್ಕರಣೆಗೊಳ್ಳುತ್ತದೆ.

ಒಟ್ಟಾರೆ ವಿದೇಶಿ ಮದ್ಯದ ಎಂಆರ್ ಪಿ ಬೆಲೆ ಶೇ 25-30ರಷ್ಟು ಏರಿಕೆ ಕಾಣಲಿದೆ. ರೀಟೇಲ್ ಮಾರುಕಟ್ಟೆಯಲ್ಲಿ ಶೇ 40ರಷ್ಟು ಆಮದು ಮದ್ಯಗಳು ಪಾಲು ಹೊಂದಿವೆ. ಪರಿಷ್ಕೃತ ದರ ಪಟ್ಟಿಯನ್ನು ಈಗಾಗಲೇ ಅಬಕಾರಿ ಇಲಾಖೆಗೆ ಕಳಿಸಿಕೊಡಲಾಗಿದೆ ಎಂದು ಡ್ರಾಪ್ಸ್ ಟೋಟಲ್ ಸ್ಪಿರಿಟ್ಸ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ವೆಂಕಟಸ್ವಾಮಿ ಹೇಳಿದ್ದಾರೆ.

English summary
Connoisseurs of international wines and spirits will have to shell out as much as 30% more for their favorite sparkling alcoholic beverage, courtesy the falling rupee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X