ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ 'ನಗ್ನ ವಿವಾಹ' ಭಾಗ್ಯಕ್ಕೆ ಬೇಡಿಕೆ!

By Srinath
|
Google Oneindia Kannada News

Match-making problems in China - 'Naked marriage' gaining acceptance -Survey
ಬೀಜಿಂಗ್, ಆಗಸ್ಟ್ 21: ಚೀನಾದಲ್ಲಿ ಗಂಡುದಿಕ್ಕು ಇಲ್ಲದೆ ಲಕ್ಷಾಂತರ ಸುಶಿಕ್ಷಿತ ಯುವತಿಯರು (left overs) ಕಂಕಣಭಾಗ್ಯವಿಲ್ಲದೆ ಒದ್ಲಾಡುತ್ತಿದ್ದಾರೆ ಎಂಬುದನ್ನು ಮೊನ್ನೆಯಷ್ಟೇ ತಿಳಿದುಕೊಂಡಿರಿ. ಈಗ, ವಿವಾಹಕ್ಕೆ ಸಂಬಂಧಪಟ್ಟಂತೆಯೇ ಚೀನಾವನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆಯ ಬಗ್ಗೆಯೂ ತಿಳಿದುಕೊಳ್ಳಿ.

ಇತ್ತೀಚೆಗೆ ಚೀನಾದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ 'ನಗ್ನ ವಿವಾಹ' ಅಂದರೆ naked marriage ಹೆಚ್ಚು ಚಾಲ್ತಿಗೆ ಬರುತ್ತಿದೆ.

ಏನಪ್ಪಾ ಇದು ಮದುವೆ ಆದಮೇಲೆ ನೇಕೆಡ್ ಓಕೆ! ಆದರೆ ಮದುವೆಯನ್ನೇ ನೇಕೆಡ್ ಅಂದರೆ ಏನರ್ಥ ಅಥವಾ ಏನನರ್ಥ ಎಂದು ನೀವು ಗಾಬರಿಯಾಗಬೇಡಿ. ಏಕೆಂದರೆ ಚೀನಾದ ಯುವಜನತೆ ಇಂದು ಯಾವ ದುಃಸ್ಥಿತಿ ತಲುಪಿದ್ದಾರೆಂದರೆ ಅಲ್ಲಿನ ಸಾಮಾಜಿಕ ಚೌಕಟ್ಟು ಶಿಥಿಲಾವಸ್ಥೆಗೆ ತಲುಪುತ್ತಿದೆ.

naked marriage ಅಂದರೆ ಮನೆ/ಕಾರು ಅಥವಾ ಆಸ್ತಿಪಾಸ್ತಿಯಿಲ್ಲದೆ, ಕೇವಲ ವರ ಅಥವಾ ವಧುವನ್ನು ಮಾತ್ರವೇ ವರಿಸುವುದು ಎಂದರ್ಥ. ಅಂದರೆ ನೋ ರಗಳೆ ವಿತ್ ಡೌರಿ!

ಬಹಳಷ್ಟು ಮಂದಿ ಈ ಐಡಿಯಾವನ್ನು ಅಪ್ಪಿಕೊಂಡಿದ್ದಾರೆ. ಆದರೆ ಇನ್ನೂ ಕೆಲವು ಮಂದಿ ಇಲ್ಲಾಇಲ್ಲಾ ಮನೆ/ಕಾರು ಅಥವಾ ಆಸ್ತಿಪಾಸ್ತಿ ಬೇಕೇ ಬೇಕು ಎಂದು ಮದುವೆಯಾಗದೆ ಮೂಲೆ ಹಿಡಿದಿದ್ದಾರೆ. ಆದರೆ ಇನ್ನೂ ಕೆಲವು ಮಂದಿ ತಮ್ಮ would beಯ ಸಾಲಸೋಲದ ಜವಾಬ್ದಾರಿಯನ್ನು ತಾವೂ ಹೊರುವುದಾಗಿ ಹೇಳಿದ್ದಾರೆ.

ಅಂದಹಾಗೆ ಈ ವಿದ್ಯಮಾನ ಕಂಡುಬಂದಿರುವುದು ಬೀಜಿಂಗ್, ಶಾಂಘಾಯ್ ಮತ್ತು ಗೌಂಗುಝೋವ್ ಸೇರಿದಂತೆ ಆರೇಳು ನಗರಗಳಲ್ಲಿ. ಸುಮಾರು 15 ಲಕ್ಷ ಮಂದಿಯನ್ನು ಸಮೀಕ್ಷೆಗೊಳಪಡಿಸಿದಾಗ ವಾಸ್ತವದ ನೆಲೆಗಟ್ಟಿನಲ್ಲಿ ಅವರೆಲ್ಲಾ ತಮ್ಮ ಪ್ರಾಮಾಣಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

English summary
Match-making problems in China - 'Naked marriage' gaining acceptance -Survey. It also found that when it comes to a "naked marriage", which means getting married without a house and car, 45 per cent of those polled "approve of the idea". Over 70 per cent of the interviewees said they were ready to share their mortgage payments with their spouse after marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X