ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮುಸ್ಲಿಮರ ಜೀವನಮಟ್ಟ ಕೆಳಸ್ತರದಲ್ಲಿದೆ

By Srinath
|
Google Oneindia Kannada News

ನವದೆಹಲಿ, ಆಗಸ್ಟ್ 21: ದೇಶದಲ್ಲಿ ಮುಸ್ಲಿಮರ ಜೀವನಮಟ್ಟ ಬಹಳ ಕೆಳಸ್ತರದಲ್ಲಿದೆ. ಮುಸ್ಲಿಂ ಸಮುದಾಯದವರು ದಿನವೊಂದಕ್ಕೆ ತಲಾ 32.66 ರೂ ಮಾತ್ರ ಖರ್ಚು ಮಾಡುತ್ತಿದ್ದಾರೆ. ಇದು ಕೇಂದ್ರ ಸರಕಾರದ ಸಮೀಕ್ಷೆ.

ಗಮನಾರ್ಹವೆಂದರೆ ಮುಸ್ಲಿಮರಿಗಿಂತ ಬಹುಸಂಖ್ಯಾತ ಹಿಂದೂಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬಹುತೇಕ ಹಿಂದೂಗಳು ದಿನಕ್ಕೆ ಕೇವಲ 37.50 ರೂ. ಗಳಷ್ಟೇ ಖರ್ಚು ಮಾಡಬಲ್ಲರು.

ವಿವಿಧ ಧಾರ್ಮಿಕ ಸಮುದಾಯಗಳ ಜೀವನಮಟ್ಟವನ್ನು ತಿಳಿದುಕೊಳ್ಳಲು 2009-10ನೇ ಸಾಲಿಗೆ ಅನ್ವಯವಾಗುವಂತೆ ನಡೆಸಿದ ಈ ಸಮೀಕ್ಷೆಯಲ್ಲಿ ಭಾರತದ ನಾಲ್ಕು ಮುಖ್ಯ ಧರ್ಮಗಳಾದ ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ಖರನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿತ್ತು. (PTI)

NSSO ಸಮೀಕ್ಷೆ

NSSO ಸಮೀಕ್ಷೆ

NSSO ನಡೆಸಿರುವ 'ಭಾರತದ ಪ್ರಧಾನ ಧಾರ್ಮಿಕ ಸಮುದಾಯಗಳಲ್ಲಿನ ಉದ್ಯೋಗ ಮತ್ತು ನಿರುದ್ಯೋಗ ಪರಿಸ್ಥಿತಿ' ಹೆಸರಿನ ಸಮೀಕ್ಷೆ ಪ್ರಕಾರ, ಸಿಖ್ ಸಮುದಾಯದವರು ಇರೋದ್ರಲ್ಲಿ ಒಳ್ಳೆಯ ಜೀವನಮಟ್ಟ ಹೊಂದಿದ್ದಾರೆ. ಸಿಖ್ ಸಮುದಾಯದವರು ತಲಾ 55.30 ರೂ ಖರ್ಚು ಮಾಡುತ್ತಾರೆ. ಇನ್ನು, ಕ್ರೈಸ್ತರು ಎರಡನೇ ಸ್ಥಾನದಲ್ಲಿದ್ದಾರೆ. ಅವರ ದಿನದ ಸರಾಸರಿ ಖರ್ಚು 51.43 ರೂ. ನಷ್ಟಿದೆ.

average monthly per capita expenditure- NSSO

average monthly per capita expenditure- NSSO

2009-10ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಒಂದು ಸಿಖ್ ಕುಟುಂಬವು ಸರಾಸರಿ ತಿಂಗಳಲ್ಲಿ (average monthly per capita expenditure) 1659 ರೂ. ಖರ್ಚು ಮಾಡಿದ್ದಾರೆ. ಮುಸ್ಲಿಂ ಮನೆಯೊಂದರ ಖರ್ಚು ಪ್ರಮಾಣ 980 ರೂ ಅಗಿದೆ ಎನ್ನುತ್ತದೆ ಈ ಸಮೀಕ್ಷೆ.

ಹಿಂದೂಗಳು ಮತ್ತು ಕ್ರೈಸ್ತರ ಸರಾಸರಿ ತಿಂಗಳ ಖರ್ಚು

ಹಿಂದೂಗಳು ಮತ್ತು ಕ್ರೈಸ್ತರ ಸರಾಸರಿ ತಿಂಗಳ ಖರ್ಚು

ಹಿಂದೂಗಳು ಮತ್ತು ಕ್ರೈಸ್ತರ ಸರಾಸರಿ ತಿಂಗಳ ತಲಾವಾರು ಖರ್ಚುವೆಚ್ಚ ಕ್ರಮವಾಗಿ 1,125 ರೂ ಮತ್ತು 1,543 ರೂ ಆಗಿದೆ ಎನ್ನುತ್ತಿದೆ Employment and Unemployment Situation Among Major Religious Groups in India ಸಮೀಕ್ಷೆ.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕನಿಷ್ಠ ಜೀವನ

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕನಿಷ್ಠ ಜೀವನ

ದೇಶೀಯಮಟ್ಟದಲ್ಲಿ ಹಳ್ಳಿಗಳಲ್ಲಿ ತಿಂಗಳಿಗೆ ಸರಾಸರಿ ತಲಾವಾರು 901 ರೂ ಖರ್ಚು ಮಾಡುತ್ತಿದ್ದರೆ ನಗರಗಳಲ್ಲಿ 1,773 ರೂ ಖರ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 833 ರೂ ಸರಾಸರಿ ತಿಂಗಳ ತಲಾವಾರು ವೆಚ್ಚದೊಂದಿಗೆ ಮುಸ್ಲಿಮರು ತಳ ಭಾಗದಲ್ಲಿದ್ದಾರೆ. ಅವರಿಗಿಂತ ಮೇಲಿನ ಸ್ಥಾನಗಳಲ್ಲಿ ಹಿಂದೂಗಳು (888 ರೂ), ಕ್ರೈಸ್ತರು (1296 ರೂ) ಮತ್ತು ಸಿಖ್ಖರು (1,498 ರೂ) ಇದ್ದಾರೆ.

ನಗರ ಪ್ರದೇಶಗಳಲ್ಲಿ ಕ್ರೈಸ್ತರು-ಸಿಖ್ಖರು ಮುಂದು

ನಗರ ಪ್ರದೇಶಗಳಲ್ಲಿ ಕ್ರೈಸ್ತರು-ಸಿಖ್ಖರು ಮುಂದು

ನಗರ ಪ್ರದೇಶಗಳಲ್ಲಿ ಸರಾಸರಿ ತಿಂಗಳ ತಲಾವಾರು ವೆಚ್ಚ ಇತರ ಧರ್ಮಗಳ ಜನರಿಗೆ ಹೋಲಿಸಿದರೆ ಮುಸ್ಲಿಮರ ಕನಿಷ್ಠವಾಗಿದೆ. ಮುಸ್ಲಿಮರು ಸರಾಸರಿ ತಿಂಗಳೊಂದಕ್ಕೆ 1,272 ತಲಾವಾರು ಖರ್ಚು ಮಾಡುತ್ತಾರೆ. ಆದರೆ, ಹಿಂದೂಗಳು 1,797 ರೂ, ಕ್ರೈಸ್ತರು 2,053 ರೂ ಮತ್ತು ಸಿಖ್ಖರು 2,180 ರೂ ಖರ್ಚು ಮಾಡಿದ್ದಾರೆ.

English summary
India Muslims living standard lowest -Sikhs enjoys better lifestyle- MPCE NSSO. Among various religious groups, Muslims have the lowest living standard with the average per capita expenditure of just Rs 32.66 in a day, says a government survey called average monthly per capita expenditure
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X