ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ತಕ್ಕ ಉತ್ತರ ನೀಡಿದ ವಾಯುಸೇನೆ

By Mahesh
|
Google Oneindia Kannada News

ನವದೆಹಲಿ, ಅ.21: ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ ಪ್ರದೇಶದಲ್ಲಿ ಸೂಪರ್ ಹರ್ಕುಲೆಸ್ ವಿಮಾನವನ್ನು ನಿಲ್ಲಿಸುವ ಮೂಲಕ ಗಡಿ ಭಾಗದಲ್ಲಿ ಹೊಂಚು ಹಾಕುವ ಚೀನಿಯರಿಗೆ ಭಾರತ ಮಂಗಳವಾರ ಕಠಿಣ ಸಂದೇಶ ರವಾನಿಸಿದೆ.

ಜಗತ್ತಿನಲ್ಲೇ ಅತಿ ಎತ್ತರದಲ್ಲಿರುವ ವಾಯು ನೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಡಾಕ್ ಬಳಿ ಇರುವ ದೌಲತ್ ಬೇಗ್ ಓಲ್ಡಿ ಸೇನಾ ನೆಲೆಯಲ್ಲಿ ಸೂಪರ್ ಹರ್ಕುಲೆಸ್ ವಿಮಾನವನ್ನು ಇಳಿಸುವ ಮೂಲಕ ಸೇನೆಗೆ ಮಾನಸಿಕವಾಗಿ ಧೈರ್ಯ ತುಂಬಿದೆ. Line of Acutal Control(LAC) ನಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಈ ವಾಯುನೆಲೆಯಲ್ಲಿ ಭಾರತ ತನ್ನ ದೈತ್ಯ ವಿಮಾನ ಹಾರಾಟ ನಡೆಸಿದೆ.

ಇದೇ ಪ್ರದೇಶದ ವಿಚಾರವಾಗಿ ಕಳೆದ ಏಪ್ರಿಲ್ ನಲ್ಲಿ ಚೀನಾ ಜೊತೆ ಭಾರತ ಜಗಳವಾಡಬೇಕಾಗಿತ್ತು. ಈ ವಾಯುನೆಲೆಯ ಮೇಲೆ ನಾಲ್ಕು ದಶಕಗಳಿಂದ ಚೀನಾ ಕಣ್ಣಿಟ್ಟಿತ್ತು. ಇದು ನಮ್ಮದೇ ವಾಯುನೆಲೆ ಎಂಬುದನ್ನು ತೋರುವ ಸಲುವಾಗಿ ಭಾರತ ವಿಮಾನವನ್ನು ಇಳಿಸಿದೆ.

India dares China, lands Super Hercules plane in Ladakh,

ಮಂಗಳವಾರ ಬೆಳಗ್ಗೆ 6.54ರ ಹೊತ್ತಿಗೆ ಎ ಸಿ-130ಜೆ ಸೂಪರ್ ಹರ್ಕುಲೆಸ್ ವಿಮಾನವನ್ನು ದೌಲತ್ ಬೇಗ್ ಓಲ್ಡೀ(DBO) ವಾಯುನೆಲೆಯಲ್ಲಿ ಇಳಿಸಲಾಯಿತು ಎಂದು ಕಮಾಂಡಿಂಗ್ ಅಧಿಕಾರಿ, ಗ್ರೂಪ್ ಕ್ಯಾಪ್ಟನ್ ತೇಜ್ಬೀರ್ ಸಿಂಗ್ ಹೇಳಿದ್ದಾರೆ.

1965ರಲ್ಲಿ ಪಾಕ್ ಜತೆಗಿನ ಯುದ್ಧದಲ್ಲಿ ಈ ವಾಯುನೆಲೆಯನ್ನು ಬಳಸಿಕೊಳ್ಳಲಾಗಿತ್ತು. 2008ರಲ್ಲಿ ಚಂಡೀಗಡದಿಂದ ಇಲ್ಲಿಗೆ ಒಂದು ವಿಮಾನ ಬಂದಿತ್ತು. ಅದನ್ನು ಬಿಟ್ಟರೆ ಈಗಲೇ ವಿಮಾನ ಬಂದಿಳಿದಿದೆ.

ಭಾರತೀಯ ವಾಯುಸೇನೆಯ Veiled Vipers ಸ್ಕ್ವಾಡ್ರಾನ್ ಗೆ ಸೇರಿದ ಈ ದೈತ್ಯ ವಿಮಾನ ಸಮುದ್ರಮಟ್ಟದಿಂದ ಸುಮಾರು 16,614 ಅಡಿ ಎತ್ತರದಲ್ಲಿರುವ ಅಕ್ಸಾಯ್ ಚೀನಾ ಪ್ರದೇಶದಲ್ಲಿ ಹಾರಾಟ ನಡೆಸಿತು. ಸುಮಾರು 671 ಕಿ.ಮೀ/ಗಂಟೆ ವೇಗದಲ್ಲಿ ಚಲಿಸಬಲ್ಲ, 92 ಕಂಬ್ಯಾಟ್ ಟ್ರೂಪ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ, 19,090 ಕೆಜಿ ತೂಕ ಹೊರೆ ಬಲ್ಲ ಶಕ್ತಿ ಈ ಯುದ್ಧ ವಿಮಾನಕ್ಕಿದೆ. ರೋಲ್ಸ್ ರಾಯ್ಸ್ ಇಂಜಿನ್ ವುಳ್ಳ ಈ ವಿಮಾನಗಳು ಯುಎಸ್, ಯುಕೆ, ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್ ಹಾಗೂ ಇಟಲಿ ಸೇರಿದಂತೆ 15 ದೇಶಗಳಲ್ಲಿ ಬಳಕೆಯಲ್ಲಿದೆ.

2008ರಲ್ಲಿ ಅಮೆರಿಕದೊಡನೆ ಒಪ್ಪಂದ ಮಾಡಿಕೊಂಡಿರುವ ಭಾರತ 1.2 ಬಿಲಿಯನ್ ಡಾಲರ್ ತೆತ್ತು ಆರು ಸಿ-130 ಜೆ ವಿಮಾನಗಳನ್ನು ಖರೀದಿಸಿದೆ. ಭಾರತೀಯ ವಾಯುಸೇನೆ ಇನ್ನೂ 6 ವಿಮಾನಗಳ ಬೇಡಿಕೆ ಇಟ್ಟಿದೆ. 2008ರಲ್ಲಿ DBO ಏರ್ ಸ್ಟ್ರಿಪ್, ಫುಕ್ಚೆ(13,000 ಅಡಿ ಎತ್ತರ, LAC ನಿಂದ 3 ಕಿ.ಮೀ) ಹಾಗೂ ನ್ಯೊಮಾ(13,300 ಅಡಿ, 23 ಕಿ.ಮೀ ದೂರ ಇದೆ) ಏರ್ ಸ್ಟ್ರಿಪ್ ಸೆಪ್ಟೆಂಬರ್ 2009ರಲ್ಲಿ ಮರು ಚಾಲನೆ ಗೊಂಡಿದೆ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಈ ವಾಯುನೆಲೆಗಳು ಬಳಕೆಯಾಗಿದ್ದವು.

English summary
The Indian air force on Tuesday landed a C-130J ‘Super Hercules’ aircraft -- configured for special operations and airborne assault -- at the world’s highest airstrip in north-eastern Ladakh, barely eight km from the Line of Actual Control (LAC), signalling India’s aggressive stance towards China following a spurt in incursions in that sensitive sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X