ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ರಮ್ಯಾ ವರ್ಸಸ್ ಸಿಎಸ್ ಪುಟ್ಟರಾಜು

By Shami
|
Google Oneindia Kannada News

ಆಗಸ್ಟ್ 21ರಂದು ನಡೆಯಲಿರುವ ಮಂಡ್ಯ ಉಪಚುನಾವಣೆಯಲ್ಲಿ ಯಾವುದೇ ರಾಜಕೀಯ ಅನುಭವವಿಲ್ಲದ ಖ್ಯಾತ ಚಿತ್ರನಟಿ ರಮ್ಯಾ ಗೆಲ್ತಾರೋ, 2008ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, 2013ರಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ಸೋಲನುಭವಿಸಿದ ಜೆಡಿಎಸ್‌ನ ಸಿಎಸ್ ಪುಟ್ಟರಾಜು ಗೆಲ್ತಾರೋ ಆಗಸ್ಟ್ 24, ಶನಿವಾರದಂದು ಪ್ರಕಟವಾಗುವ ಫಲಿತಾಂಶದಲ್ಲಿ ತಿಳಿದುಬರಲಿದೆ.

ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡುತ್ತಲೇ ಬಂದಿದ್ದ ರಮ್ಯಾ ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಚುನಾವಣಾ ಕಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಇಳಿದಿದ್ದಾರೆ. ಅವರ ಪರವಾಗಿ ಇಡೀ ಕಾಂಗ್ರೆಸ್ ಪರಿವಾರವೇ ಪ್ರಚಾರಕ್ಕಿಳಿದಿದೆ. ರಮ್ಯಾ ಅವರ ಸಾಕು ತಂದೆಯ ಸಾವು, ಇದರ ಪರಿಣಾಮವಾಗಿ ದಕ್ಕುವ ಅನುಕಂಪ, ಅವರ ಜನಪ್ರಿಯತೆ, ಕಾಂಗ್ರೆಸ್ ಅಧಿಕಾರದಲ್ಲಿರುವುದು ಅವರಿಗೆ ವರವಾಗುವುದಾ?

ಅಥವಾ, ರಮ್ಯಾ ಅವರ ಅನುಭವದ ಮತ್ತು ಮುಂದಿನ ರಾಜಕೀಯ ಭವಿಷ್ಯದ ಅಸ್ಥಿರತೆಯ ಲಾಭ ಪಡೆದು, ಕಳೆದ ಬಾರಿ ಸೋತ ಅನುಕಂಪದ ಬೆನ್ನೇರಿ ಸಿಎಸ್ ಪುಟ್ಟರಾಜು ಜಯಭೇರಿ ಬಾರಿಸುವರಾ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಗಿಂತ ಮೇಲುಗೈ ಸಾಧಿಸಿತ್ತು. ಈ ಫ್ಯಾಕ್ಟರ್ ಪುಟ್ಟರಾಜು ಅವರ ನೆರವಿಗೆ ಬರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

Mandya Lok Sabha by-poll : Ramya Vs CS Puttaraju

ರಮ್ಯಾ ಆಲಿಯಾಸ್ ದಿವ್ಯಸ್ಪಂದನ ಪ್ಲಸ್ ಪಾಯಿಂಟ್

* ಅಂಬರೀಷ್, ಎಸ್ಎಂ ಕೃಷ್ಣ ಬಲ ಸಿಕ್ಕಿರೋದು
* ಕಾಂಗ್ರೆಸ್ ಸರ್ಕಾರ ಇರೋದು
* ಸಾಕುತಂದೆ ಸಾವು, ಬಳಿಕ ನಡೆದ ಘಟನೆಗಳಿಂದ ಅನುಕಂಪ

ರಮ್ಯಾ ಮೈನಸ್ ಪಾಯಿಂಟ್

* ಜನಸಾಮಾನ್ಯರ ಕೈಗೇ ಸಿಗಲ್ಲ ಅನ್ನೋ ಆರೋಪ
* ರಮ್ಯಾಗೆ ಕ್ಷೇತ್ರದ ಬಗ್ಗೆ, ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ
* ಸ್ಥಳೀಯ ಮುಖಂಡರ ಬಣಗಳ ನಡುವೆ ಗುಗುಗು ಗುದ್ದಾಟ

ಪಾಂಡವಪುರ ಸಿ.ಎಸ್. ಪುಟ್ಟರಾಜು ಪ್ಲಸ್ ಪಾಯಿಂಟ್

* 5 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಕೈನಲ್ಲಿವೆ
* ಸ್ವತಃ ದೇವೇಗೌಡರಿಂದಲೇ ಚುನಾವಣಾ ಉಸ್ತುವಾರಿ
* ನಾಗಮಂಗಲ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋತ (2013) ಅನುಕಂಪ

ಸಿ.ಎಸ್. ಪುಟ್ಟರಾಜು ಮೈನಸ್ ಪಾಯಿಂಟ್

* ಅಂಬಿ, ಕೃಷ್ಣ ಒಂದುಗೂಡಿರೋದು
* ಜೆಡಿಎಸ್‍ನಿಂದ ಬೈ ಎಲೆಕ್ಷನ್ ಬಂದಿದೆ ಅನ್ನೋ ಅಪವಾದ

English summary
Mandya (Karnataka) Lok Sabha by-poll necessitated by resignation of MP Cheluvaraya Swamy. The constituency now witness to useless, unwanted election. Wasteful expenditure of Public money. The battle is between JD(S) grass root C.S. Puttaraju vs Cine Glamor Ramya (Congress), both belongs to same caste - Vokkaliga or Gowda community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X