ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ವಿಶ್ಲೇಷಣೆ

By Shami
|
Google Oneindia Kannada News

ಸಕ್ಕರೆ ನಾಡಿನಲ್ಲಿ ತೆನೆಹೊತ್ತ ಮಹಿಳೆ ವರ್ಸಸ್ ಕೈ ನಡುವೆ ಪೈಪೋಟಿ ಎದುರಾಗಿದೆ. ಮೊದಲ ಬಾರಿ ಚುನಾವಣೆ ಕಣಕ್ಕಿಳಿದಿರುವ ಚಿತ್ರನಟಿ ರಮ್ಯಾ ಕಾಂಗ್ರೆಸ್‍ನಿಂದ ಅದೃಷ್ಟ ಪರೀಕ್ಷೆಗಿಳಿದಿದ್ದರೆ, 2008ರ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆಯಿಂದ ಜಯಭೇರಿ ಬಾರಿಸಿದ್ದ ಜೆಡಿಎಸ್‍ನಿಂದ ಪುಟ್ಟರಾಜು ಅಖಾಡದಲ್ಲಿದ್ದಾರೆ. ಆದರೆ ಬಿಜೆಪಿ ಕಣದಿಂದ ಹಿಂದೆ ಸರಿದಿದ್ದು, ಜೆಡಿಎಸ್‍ಗೆ ಪರೋಕ್ಷ ಬೆಂಬಲ ನೀಡಿದೆ.

ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಜೆಡಿಎಸ್, 2ರಲ್ಲಿ ಕಾಂಗ್ರೆಸ್, 1ರಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಗೆಲುವು ಸಾಧಿಸಿತ್ತು. ಜೆಡಿಎಸ್ ಶಕ್ತಿ ಕುಗ್ಗಿಸಲು ಕಾಂಗ್ರೆಸ್ ಸಚಿವರ ದಂಡೇ ಅಖಾಡಕ್ಕೆ ಇಳಿದಿದೆ.

2009ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಜಯ ಸಾಧಿಸಿತು. ಜೆಡಿಎಸ್‍ನ ಚೆಲುವರಾಯಸ್ವಾಮಿ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಅಂಬರೀಶ್ ಅವ್ರನ್ನ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಎಸ್ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, 5 ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೂ ಜೆಡಿಎಸ್ ಗೆಲುವು ಸಾಧಿಸಿತು. ಬಿಜೆಪಿ ಇಲ್ಲಿ ಲೆಕ್ಕಕ್ಕೇ ಇಲ್ಲ.

Mandya Lok Sabha by poll : Analysis

ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು

ಮಂಡ್ಯ
ಮಳವಳ್ಳಿ
ಮದ್ದೂರು
ಶ್ರೀರಂಗಪಟ್ಟಣ
ಮೇಲುಕೋಟೆ
ಕೆ.ಆರ್.ಪೇಟೆ
ಕೆ.ಆರ್.ನಗರ
ನಾಗಮಂಗಲ

ಕಣದಲ್ಲಿರೋ ಪ್ರಮುಖರು

ಕಾಂಗ್ರೆಸ್ - ರಮ್ಯಾ
ಜೆಡಿಎಸ್ - ಸಿ.ಎಸ್.ಪುಟ್ಟರಾಜು

ಮಂಡ್ಯದ ಮತದಾರರ ವಿವರ

ಒಟ್ಟು ಮತದಾರರು - 16,14,874
ಪುರುಷ ಮತದಾರರು - 8,13,642
ಮಹಿಳಾ ಮತದಾರರು - 8,01232

ಕಳೆದ ಲೋಕಸಭಾ ಚುನಾವಣೆಯ (2009) ಚಿತ್ರಣ

ಎಂ.ಎಚ್.ಅಂಬರೀಶ್, ಕಾಂಗ್ರೆಸ್ - 3,60,943
ಎನ್.ಚೆಲುವರಾಯಸ್ವಾಮಿ, ಜೆಡಿಎಸ್ - 3,84,443 (ಗೆಲುವು)
ಎಲ್.ಆರ್.ಶಿವರಾಮೇಗೌಡ, ಬಿಜೆಪಿ - 1,44,875

ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ (2013ರ ಚುನಾವಣೆ)

ಒಟ್ಟು ಕ್ಷೇತ್ರಗಳು - 8
ಜೆಡಿಎಸ್ - 5
ಕಾಂಗ್ರೆಸ್ - 2
ಸರ್ವೋದಯ ಕರ್ನಾಟಕ - 1

English summary
Mandya (Karnataka) Lok Sabha by-poll necessitated by resignation of MP Cheluvaraya Swamy. The constituency now witness to useless, unwanted election. Wasteful expenditure of Public money. The battle is between JD(S) grass root C.S. Puttaraju vs Cine Glamor Ramya (Congress), both belongs to same caste - Vokkaliga or Gowda community. In 2009 LS poll Cheluvarayaswamy had defeated Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X