ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಪೌರೋಹಿತ್ಯದಲ್ಲಿ ಅನಾಥೆಗೆ ಕಂಕಣಭಾಗ್ಯ!

|
Google Oneindia Kannada News

ಬೆಂಗಳೂರು, ಆ.20 : ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ವೀಕಾರ ಕೇಂದ್ರದಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ಕೇಂದ್ರದ ಆವರಣದಲ್ಲಿ ಮದುವೆ ಸಂಭ್ರಮದ ಕಳೆ ಕಟ್ಟಿತ್ತು. ಅನಾಥೆ ಕಾಳಮ್ಮ ಮತ್ತು ಸತೀಶ್ ಅವರ ವಿವಾಹಕ್ಕೆ ಇಲಾಖೆ ಆವರಣ ಸಾಕ್ಷಿಯಾಯಿತು.

ಮದುವೆ ಸಂಪ್ರದಾಯದಂತೆಯೇ ನಡೆಯಿತು. ತೋರಣ, ಹೂಗಳಿಂದ ಅಲಂಕಾರಗೊಂಡಿದ್ದ ಕೇಂದ್ರದಲ್ಲಿ ಇಲಾಖೆ ಸಿಬ್ಬಂದಿಗಳು ಮನೆ ಮಗಳ ಮದುವೆಯಂತೆ ಉತ್ಸಾಹದಲ್ಲಿ ಓಡಾಡಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಅನಾಥೆಯಾಗಿ ಕೇಂದ್ರಕ್ಕೆ ಸೇರಿದ್ದ ಕಾಳಮ್ಮ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು.

marriage

ಅನಾಥೆಯಾಗಿ ಬಾಲಮಂದಿರ ಸೇರಿ ಬೆಳೆದ ಕಾಳಮ್ಮ ವಿವಾಹ ಮಹೋತ್ಸವಕ್ಕೆ ಸರ್ಕಾರ ಪೌರೋಹಿತ್ಯ ವಹಿಸಿತ್ತು. ಸಚಿವರಾದ ಉಮಾಶ್ರೀ ಮತ್ತು ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಕಾಳಮ್ಮ, ಚಿಕ್ಕಮಗಳೂರಿನ ಸತೀಶ್ ಜೊತೆ ವಿವಾಹವಾದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಸಂಘಟನೆ ಮತ್ತು ದಾನಿಗಳ ನೆರವಿನೊಂದಿಗೆ ಸೋಮವಾರ ಸಂದ್ರಪಾಯಬದ್ಧವಾಗಿ ಕಾಳಮ್ಮ ಮತ್ತು ಸತೀಶ್ ಅವರ ವಿವಾಹವನ್ನು ನಡೆಸಿಕೊಟ್ಟಿತು.

ಚಿಕ್ಕಮಗಳೂರಿನ ಬಿಕಾಂ ಪದವೀಧರ ಸತೀಶ್, ಪೂರ್ಣ ಪ್ರಜ್ಞಾ ಶಾಲೆಯ ಹಾಸ್ಟೆಲ್‌ನಲ್ಲಿ ಕೆಟರಿಂಗ್‌ ಕೆಲಸ ಮಾಡುತ್ತಿದ್ದಾರೆ. ಕಾಳಮ್ಮ ಅವರನ್ನು ವಿವಾಹವಾಗುವ ಮೂಲಕ ಅನಾಥೆಗೆ ಬಾಳು ನೀಡಿ ಬ್ರಾಹ್ಮಣ ಜನಾಂಗದ ಇವರು ಆದರ್ಶ ಮೆರೆದಿದ್ದಾರೆ.

ವಿವಾಹದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ದಂಪತಿಗಳಿಗೆ ಐದು ಸಾವಿರ ರೂ. ಉಡುಗೊರೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಉಮಾಶ್ರೀ ಕಾಣಿಕೆ ಇಬ್ಬರನ್ನು ಹರಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವಾರು ಸಿಬ್ಭಂದಿಗಳು ಪಾಲ್ಗೊಂಡಿದ್ದರು. (ಅನಾಥ ಕಾಳಮ್ಮನ ಲಗ್ನಕ್ಕೆ ಸರಕಾರದ ಪೌರೋಹಿತ್ಯ)

ಕಾಳಮ್ಮ ಯಾರು : ಆರು ವರ್ಷವಿರುವಾದ ಕಾಳಮ್ಮ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದಳು. ಆಕೆಯ ವಿದ್ಯಾಭ್ಯಾಸ ನೀಡಲು ಡಿವಿಎಸ್‌ ರಸ್ತೆಯಲ್ಲಿರುವ ಅಭಯ ಆಶ್ರಮಕ್ಕೆ ಸೇರಿಸಲಾಗಿತ್ತು. ಆದರೆ, ಕಾಳಮ್ಮಳಿಗೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ 9ನೇ ತರಗತಿವರೆಗೆ ಓದಿದಳು.

ಬಳಿಕ ಸ್ವೀಕರ ಕೇಂದ್ರಕ್ಕೆ ಮರಳಿದರೂ ಓದನ್ನು ಮುಂದುವರೆಸಲಿಲ್ಲ. ತಂದೆ-ತಾಯಿ, ಜಾತಿ ಯಾವುದೂ ಗೊತ್ತಿಲ್ಲದ ಆಕೆಯನ್ನು ವಿವಾಹವಾಗಿ ಸತೀಶ್ ಆಕೆಗೆ ಹೊಸ ಜೀವನ ನೀಡಿದ್ದಾನೆ. ವಿವಾಹದ ನಂತರ ಕಾಳಮ್ಮ ಓದು ಮುಂದುವರೆಸುವ ಉತ್ಸಾಹದಲ್ಲಿದ್ದಾರೆ.

ಕಾಳಮ್ಮಳಿಗೆ ಸ್ವೀಕಾರ ಕೇಂದ್ರದ ಅಧೀಕ್ಷಕಿ ವಾಸಂತಿ ತಾಯಿ ಸ್ಥಾನದಲ್ಲಿ ನಿಂತು ಧಾರೆ ಎರೆದುಕೊಟ್ಟರು. ವರನ ಪೋಷಕರು ಸಹ ತಮ್ಮ ಸೊಸೆಯನ್ನು ಸಂತೋಷದಿಂದ ಮನೆ ತುಂಬಿಸಿಕೊಂಡರು. ತನ್ನ ಪೌರೋಹಿತ್ಯದಲ್ಲಿ ನಡೆದ ಮದುವೆಗೆ ಸರ್ಕಾರದಿಂದ 15 ಸಾವಿರ ರೂ. ನೀಡಲಾಯಿತು.

ಕೇಂದ್ರದಲ್ಲಿನ 11ನೇ ಮದುವೆ : ಅನಾಥ ಹುಡುಗಿಯರನ್ನು ವಿವಾಹವಾಗಲು ಬಯಸುವ ಹುಡುಗರನ್ನು ಇಲಾಖೆ ಅಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಹುಡುಗ-ಹುಡುಗಿಯ ಒಪ್ಪಿಗೆ ಮೇರೆಗೆ ಮದುವೆ ಮಾಡಿಸಲಾಗುತ್ತದೆ.

English summary
Marriages are made in heaven. But this one was happening in namma Bangalore. It all ended well though for 20-year-old Kalamma, as she wed BP Satish at the government-run rehabilitation center, her home for the past 14 years. It was a fitting farewell for the young bride who came here as a six-year-old orphan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X