ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನಜೀರ್ ಭುಟ್ಟೋ ಕೊಂದಿದ್ದು ಮುಷರಫ್

By Mahesh
|
Google Oneindia Kannada News

ರಾವಲ್ಪಿಂಡಿ, ಆ.20: ಪಾಕಿಸ್ತಾನದ ಮಾಜಿ ಅಧ್ಯಕ್ಷ, ಸೇನಾ ಮುಖ್ಯಸ್ಥ ಪರ್ವೇಜ್ ಮುಷರಪ್ ಅವರುಆತ್ಮಾಹುತಿ ದಾಳಿ ನಡೆಸುವ ಮೂಲಕ ರಾಜಕೀಯ ನಾಯಕಿ ಬೆನಜೀರ್ ಭುಟ್ಟೋ ಅವರನ್ನು ಕೊಂದಿದ್ದಾರೆ ಎಂದು ಮಂಗಳವಾರ (ಆ.20) ಸ್ಥಳೀಯ ಕೋರ್ಟ್ ಅಭಿಪ್ರಾಯಪಟ್ಟಿದೆ.

2007ರಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾವಲ್ಪಿಂಡಿಯಲ್ಲಿ ಆತ್ಮಾಹುತಿ ದಾಳಿ ಮೂಲಕ ಹತ್ಯೆಗೈಯಲಾಗಿತ್ತು. ಈ ಕುರಿತಂತೆ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಲಾಗಿದೆ.

ಕಳೆದ ಏ.19ರಿಂದ ಇಸ್ಲಾಮಾಬಾದಿನ ಹೊರವಲಯದಲ್ಲಿ ಗೃಹ ಬಂಧನದಲ್ಲಿರುವ ಮುಶರಪ್ ಅವರು ಕೋರ್ಟಿಗೆ ಖುದ್ದು ಹಾಜರಾಗಿದ್ದರು. ಕೊಲೆ, ಕೊಲೆ ಸಂಚು, ಹತ್ಯೆಗೆ ಸಹಾಯ ಮುಂತಾದ ಆರೋಪಗಳನ್ನು ಮುಶರಪ್ ಮೇಲೆ ಹೊರೆಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಚೌಧರಿ ಮಹಮ್ಮದ್ ಅಜರ್ ಅವರು ಸುದ್ದಿಗಾರರಿಗೆ ವಿಷಯ ತಿಳಿಸಿದರು.

Former Pak Prez Musharraf charged with Benazir Bhutto's murder

ತಮ್ಮ ಮೇಲಿರುವ ಎಲ್ಲಾ ಆರೋಪಗಳನ್ನು ಮುಶರಪ್ ನಿರಾಕರಿಸಿದ್ದು ಆ.27ರಂದು ರಾವಲ್ಪಿಂಡಿಯ ಉಗ್ರ ನಿರೋಧಿ ಕೋರ್ಟ್ ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

ಮತ್ತೊಂದು ಪ್ರಕರಣದಲ್ಲಿ : 2006ರಲ್ಲಿ ನಡೆದ ಸೇನಾ ಕಾರ್ಯಚರಣೆಯಲ್ಲಿ ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥನಾಗಿದ್ದ ಮುಷರಫ್ ಅವರು ಹತ್ಯೆ ಪ್ರಕರಣದ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಲೂಚಿಸ್ತಾನದಪೊಲೀಸರು ತನಿಖೆ ನಡೆಸಿದ್ದರು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದಿನ ಮುಷರಫ್ ಅವರ ಫಾರ್ಮ್ ಹೌಸ್ ನಲ್ಲಿ ಪೊಲೀಸರು ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಿದ್ದರು.

English summary
On Tuesday(Aug.20) Pakistani court has indicted Former Pakistan president and army chief Parvez Musharraf over 2007 murder of opposition leader Benazir Bhutto in a gun and suicide attack, a prosecutor said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X