ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಮುಸ್ಲಿಂ ಉಗ್ರರಿಗೆ ಕೇಂದ್ರದಿಂದ ಕಾನೂನು ನೆರವು?

|
Google Oneindia Kannada News

Legal support likely to Muslim youths facing doubtful terror charges
ನವದೆಹಲಿ, ಆ 20: ಉಗ್ರ ಚಟುವಟಿಕೆಗಳಲ್ಲಿ ಬಂಧಿತರಾಗಿರುವ ಯುವಕರಿಗೆ ಕಾನೂನು ನೆರವು ನೀಡುವ ಬಗ್ಗೆ ಕೇಂದ್ರದ ಯುಪಿಎ ಸರಕಾರ ಗಂಭೀರ ಚಿಂತನೆ ನಡೆಸಿದೆ.

ಗೃಹ ಸಚಿವಾಲಯದ ಮೂಲಗಳ ಪ್ರಕಾರ ಬಂಧಿತ ಯುವಕರು ಬಹುಪಾಲು ಮುಸ್ಲಿಂ ಸಮುದಾಯದವರಾಗಿದ್ದು, ಅಮಾಯಕರೂ ಆಗಿರುವ ಸಾಧ್ಯತೆಗಳಿರುವುದರಿಂದ ಸಚಿವಾಲಯ ಈ ನಿರ್ಧಾರಕ್ಕೆ ಮುಂದಾಗಿದೆ.

ರಾಷ್ಟ್ರೀಯ ತನಿಖಾ ದಳ (National Investigation Agency) ಉಗ್ರ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥಕ್ಕೆ 39 ವಿಶೇಷ ನ್ಯಾಯಾಲಯ ಇತ್ತೀಚೆಗಷ್ಟೇ ಸ್ಥಾಪಿಸಿತ್ತು.

ವಿಶೇಷ ನ್ಯಾಯಾಲಯ ಸ್ಥಾಪಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಬಂಧಿತ ಯುವಕರಿಗೆ ಆಶಾದಾಯಕವಾದ ಕಾನೂನು ಹೆಜ್ಜೆ ಇಡಲು ಮುಂದಾಗಿದೆ.

ಜೈಲುವಾಸ ಅನುಭವಿಸುತ್ತಿರುವ ಕೆಲವು ಮುಸ್ಲಿಂ ಯುವಕರು ಅಮಾಯಕರು ಮತ್ತು ನಿರ್ದೋಷಿಗಳಾಗಿರುವ ಸಾಧ್ಯತೆಗಳಿವೆ. ಹಾಗಾಗಿ ಅವರಿಗೆ ನ್ಯಾಯ ಒದಗಿಸಲು ಕಾನೂನು ರೀತಿಯಲ್ಲಿ ಸಹಾಯ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿರುವ ರೆಹಮಾನ್ ಖಾನ್, ಬಂಧಿತರಲ್ಲಿ ಹಲವಾರು ಯುವ ಮುಸ್ಲಿಂರು ಅಮಾಯಕರು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಬಳಿ ತಮ್ಮ ಅಳಲು ವ್ಯಕ್ತ ಪಡಿಸಿದ್ದರು.

ಅಮಾಯಕ ಮುಸ್ಲಿಂರಿಗೆ ಶಿಕ್ಷೆಯಾಗಬಾರದು ಅವರಿಗೆ ಕಾನೂನು ನೆರವು ನೀಡುವ ಬಗ್ಗೆ ಚಿಂತನೆ ಮಾಡಲು ರೆಹಮಾನ್ ಖಾನ್ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಈಗ ಕಾನೂನು ನೆರವು ನೀಡುವ ಬಗ್ಗೆ ಚಿಂತನೆಗೆ ಮುಂದಾಗಿದ್ದಾರೆ.

English summary
In order to restrict growing allegations of wrongful arrests of Muslim youth in terror cases, the union government is planning to provide legal assistance to those who have been jailed on doubtful charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X