ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಮೋದಿಗೆ ಹೋಲಿಸಬೇಡಿ: ಸಿಎಂ ಸಿದ್ದು ತಾಕೀತು

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 20: 'ನನ್ನನ್ನು ನರೇಂದ್ರ ಮೋದಿಗೆ ಹೋಲಿಸುವುದನ್ನು ಕನಸು ಮನಸ್ಸಿನಲ್ಲೂ ನೆನೆಪಿಸಿಕೊಳ್ಳುವುದಿಲ್ಲ. ಈ ಹೋಲಿಕೆಯನ್ನು ನಾನು ಒಪ್ಪುವುದಿಲ್ಲ. ಅದು ಸಚಿವ ಅಂಬರೀಷ್ ಅವರ ವೈಯಕ್ತಿಕ ಅಭಿಪ್ರಾಯವಿರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಸಿದ್ದಾರೆ.

'ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಮೋದಿ ಇದ್ದಂತೆ' ಎಂದು ಮಂಡ್ಯದ ಗಂಡು ಅಂಬರೀಷ್ ಅವರು ನಿನ್ನೆ ಡೈಲಾಗ್ ಹೊಡೆದಿದ್ದರು. ಅಂಬರೀಷ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದು, ನರೇಂದ್ರ ಮೋದಿ ಸಮಾಜಮುಖಿಯಲ್ಲ. ಅವರಿಗೂ ನನಗೂ ಹೋಲಿಕೆ ಸಾಧ್ಯವಿಲ್ಲ. ಅಂಬರೀಷ್ ಅವರು ಬಾಯಿ ತಪ್ಪಿ ಮಾತನಾಡಿದ್ದಾರೆ ಅಷ್ಟೆ. ಈ ಹೋಲಿಕೆಯನ್ನು ನಾನು ಕನಸು ಮನಸಲ್ಲೂ ಒಪ್ಪಲ್ಲ' ಎಂದಿದ್ದಾರೆ.

ನಾನು ಉತ್ತರ ಧ್ರುವ ಅವರದು ದಕ್ಷಿಣ

ನಾನು ಉತ್ತರ ಧ್ರುವ ಅವರದು ದಕ್ಷಿಣ

'ನನ್ನ ವಿಚಾರಗಳೇ ಬೇರೆ ಅವರ (ಮೋದಿ) ವಿಚಾರಗಳೇ ಬೇರೆ. ನಾನು ಉತ್ತರ ಧ್ರುವ ಅವರು ದಕ್ಷಿಣ ಧ್ರುವ' ಎಂದು ಸಿಎಂ ಸಿದ್ದು ತಮ್ಮ ಸ್ಪಷ್ಟ ಅನಿಸಿಕೆಗಳನ್ನು ಹೊರಹಾಕಿದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 98ನೇ ಜನ್ಮದಿನೋತ್ಸವದಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಷ್ ಹೇಳಿಕೆಗೆ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಪ್ರಧಾನಿಯಾದರೆ ದೇಶ ಹೊತ್ತಿ ಉರಿಯುತ್ತದೆ:

ಮೋದಿ ಪ್ರಧಾನಿಯಾದರೆ ದೇಶ ಹೊತ್ತಿ ಉರಿಯುತ್ತದೆ:

'ಮೋದಿ ಕೋಮುವಾದಿ. ನಾನು ಜಾತ್ಯಾತೀತ. ಎಂಥಾ ಸಂದರ್ಭದಲ್ಲೂ ನಾನು ಜಾತ್ಯತೀತ ಸಿದ್ಧಾಂತ ಬಿಡುವುದಿಲ್ಲ' ಎಂದಿರುವ ಸಿಎಂ ಸಿದ್ದರಾಮಯ್ಯ ಅವರು 'ಮೋದಿ ಪ್ರಧಾನಿಯಾದರೆ ದೇಶ ಹೊತ್ತಿ ಉರಿಯುತ್ತದೆ' ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರದು ಅರಸು ವ್ಯಕ್ತಿತ್ವ:

ಸಿಎಂ ಸಿದ್ದರಾಮಯ್ಯ ಅವರದು ಅರಸು ವ್ಯಕ್ತಿತ್ವ:

ಕೆಆರ್ ನಗರದಲ್ಲಿ ನಿನ್ನೆ 'ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ನರೇಂದ್ರ ಮೋದಿ ಇದ್ದಂತೆ. ಅವರು ರಾಷ್ಟ್ರ ನಾಯಕರಾಗುವ ದಿನಗಳು ದೂರವಿಲ್ಲ' ಎಂದು ವಸತಿ ಸಚಿವ ಅಂಬರೀಷ್‌ ಭವಿಷ್ಯ ನುಡಿದಿದ್ದರು. ಈ ಹೇಳಿಕೆಗೆ ಇದೇ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರ ಅವರೂ ಪ್ರತಿಕ್ರಯಿಸಿದ್ದು ಅಂಬರೀಷ್ ಹೋಲಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು.

ಮೋದಿಗೆ ಹೋಲಿಸುವುದು ಸರ್ವತಾ ಸಲ್ಲದು

ಮೋದಿಗೆ ಹೋಲಿಸುವುದು ಸರ್ವತಾ ಸಲ್ಲದು

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೀನದಲಿತರ ಉದ್ಧಾರಕ ದೇವರಾಜ ಅರಸು ಅವರಿಗೆ ಹೋಲಿಸುವುದು ಅತ್ಯಂತ ಸಮಂಜಸವಾಗಿರುತ್ತದೆ. ಅದು ಬಿಟ್ಟು ಮೋದಿಗೆ ಹೋಲಿಸುವುದು ಸರ್ವತಾ ಸಲ್ಲದು' ಎಂದು ಬರಗೂರು ಗುಡುಗಿದರು.

English summary
Congress Minister Ambarish compares Karnataka Chief Minister Siddaramaiah to Narendra Modi. But Chief Minister Siddaramaiah rejects his (Ambarish) statement. Pleads not to compare him with Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X