ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಎಲ್‌ವಿ-ಡಿ5 ಉಪಗ್ರಹ ಉಡಾವಣೆ ಸ್ಥಗಿತ

|
Google Oneindia Kannada News

ಹೈದರಾಬಾದ್, ಆ.19 : ತಾಂತ್ರಿಕ ದೋಷದ ಕಾರಣದಿಂದಾಗಿ ಜಿಎಸ್‌ಎಲ್‌ವಿ-ಡಿ5 ಉಪಗ್ರಹ ಉಡಾವಣೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ. ರಾಕೆಟ್ ನಲ್ಲಿ ಇಂಧನ ಸೋರಿಕೆ ಕಂಡುಬಂದ ಹಿನ್ನಲೆಯಲ್ಲಿ ಉಡಾವಣೆ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಲಾಗಿರುವ ಜಿಎಸ್‌ಎಲ್‌ವಿ-5ಡಿ ಉಪಗ್ರಹವನ್ನು ಸೋಮವಾರ ಸಂಜೆ 4.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಬೇಕಾಗಿತ್ತು. ಭಾನುವಾರದಿಂದ ಉಪಗ್ರಹ ಉಡಾವಣೆಯ ಕೌಂಟ್ ಟೌನ್ ಕ್ಲಾಕ್ ಚಾಲನೆ ಪಡೆದಿತ್ತು.

isro

ಆದರೆ, ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾದಾಗ, ಇಂಧನ ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಉಡಾವಣೆ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ರಾಧಾ ಕೃಷ್ಣನ್ ಹೇಳಿದ್ದಾರೆ.

ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 1,982 ಕೆ.ಜಿ ತೂಕದ ಉಪಗ್ರಹ ಹೊತ್ತಿರುವ 49.13 ಮೀಟರ್ ಉದ್ದದ ರಾಕೆಟ್ ಬಾನಂಗಳಕ್ಕೆ ಹಾರಬೇಕಾಗಿತ್ತು.

ಉಪಗ್ರಹ ಉಡಾವಣೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ರಾಧಾ ಕೃಷ್ಣನ್ ಹೇಳಿದ್ದಾರೆ. ಮೂರು ವರ್ಷಗಳ ಹಿಂದೆ ಕ್ರಯೋಜೆನಿಕ್ ಎಂಜಿನ್ ಹೊಂದಿದ್ದ ರಾಕೆಟ್ ಉಡಾವಣೆ ವೇಳೆ ವಿಫಲಗೊಂಡಿತ್ತು.

English summary
India's 200 crore space mission has run into trouble with the lift-off of India's heavy rocket geosynchronous satellite launch vehicle-D5 (GSLV-D5), carrying communication satellite GSAT-14, delayed due to a leak. The countdown began on Sunday at 11.50 am at Sriharikota rocket port in Andhra Pradesh, for the launch scheduled at 4.50 pm Monday, August 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X