ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾತಿ ವಿವಾಹ ಪರಿಕಲ್ಪನೆ ಯೋಚಿಸಲೂ ಭಯ

By Srinath
|
Google Oneindia Kannada News

inter-caste-marriage-not-acceptable-in-present-day-ks-eshwarappa
ಬೆಂಗಳೂರು, ಆಗಸ್ಟ್ 19: ಇಂದಿನ ದಿನಮಾನದಲ್ಲಿ ಎಲ್ಲರೂ ಜಾತಿಯ ಬಂಧನಕ್ಕೆ ಸಿಲುಕಿದ್ದಾರೆ. ನೂರಾರು ಉಪಜಾತಿಗಳು ಇವೆ. ಹೀಗಿರುವಾಗ ಅಂತರ್ಜಾತಿಯ ವಿವಾಹ ಬಂಧನಕ್ಕೆ ಸಹಮತ ಸಿಗುವುದು ಸುಲಭವಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಬಿಜೆಪಿಯ ಕೆಎಸ್ ಈಶ್ವರಪ್ಪ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದೆಡೆ ಅಂತರ್ಜಾತಿಯ ವಿವಾಹ ಬಂಧನಕ್ಕೊಳಗಾದವರಿಗೆ ಜೋಡಿಗೆ ನಗದು ಬಹುಮಾನಗಳನ್ನು ವಿತರಿಸುವ ಮೂಲಕ ಜಾತಿಯ ಚೌಕಟ್ಟು ಮೀರಿ ಮದುವೆಯಾಗುವವರನ್ನು ನಾನಾ ರಾಜ್ಯ ಸರಕಾರಗಳು ಪ್ರೋತ್ಸಾಹಿಸುತ್ತಿದ್ದರೆ ಈಶ್ವರಪ್ಪ ಅವರ ಈ ಹೇಳಿಕೆ ವಿವಾದಕ್ಕೆ ನೀರೆರೆದಿದೆ.

ಜಾತಿ ಬಂಧನದಲ್ಲಿ ಸಿಲುಕುತ್ತಿರುವ ಈಗಿನ ಸಮಾಜದಲ್ಲಿ ಬಸವಣ್ಣನವರ ಅಂತರ್ ಜಾತಿ ವಿವಾಹದ ಪರಿಕಲ್ಪನೆ ಬಗ್ಗೆ ಯೋಚಿಸಲೂ ಭಯವಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಭಾನುವಾರ ವಿಜಯನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗದ ಗುರು ಶಾಂತಬೀರ ಸೇವಾ ಸಮಿತಿ ಶಾಖೆ ಚಾಲನೆ ಹಾಗೂ ರಾಜ್ಯ ಮಟ್ಟದ ವೀರಶೈವ ವಧು-ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿದ್ದನ್ನು ಈಗಿನ ಸಮಾಜ ಪೂರ್ಣವಾಗಿ ಒಪ್ಪಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತರ್ಜಾತಿಯ ವಿವಾಹ ಬಂಧನಕ್ಕೆ ಸಹಮತ ಸಿಗುವುದು ಸುಲಭವಲ್ಲ ಎಂದು ಈಶ್ವರಪ್ಪ ನುಡಿದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ ಬಸವಣ್ಣನವರು ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ಪದ್ಧತಿ ಶಿಕ್ಕರಿಸಿ ಹೊಸ ವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಿದಾಗ ಎದುರಾದ ಸಮಸ್ಯೆಗಳನ್ನು ಈ ಸಮಾಜ ಕಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಲಿಂಗಾಯತ ಸಮಾಜದಲ್ಲಿಯೇ ಅನೇಕ ಉಪ ಪಂಗಡಗಳಾಗಿ ವಿವಾಹ ಸಂಬಂಧಗಳು ಕಷ್ಟವಾಗುತ್ತಿವೆ. ವಧು-ವರರ ಸಮಾವೇಶಗಳನ್ನು ಏರ್ಪಡಿಸುವ ಮೂಲಕ ವೀರಶೈವ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಗಳು ಹೆಚ್ಚಾಗಬೇಕು ಎಂದು ಅವರು ಕರೆನೀಡಿದರು.

English summary
Bangalore - Inter caste marriage not acceptable in present day said KS Eshwarappa, ex Deputy CM on Aug 18. As there are many sub cults in main castes people across these cults wont accept Inter caste marriages he opined .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X