ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ ನಲ್ಲಿ ನಡೆಯಲಿದೆ ಪುಸ್ತಕ ಪರಿಷೆ

|
Google Oneindia Kannada News

book
ಬೆಂಗಳೂರು, ಆ.18 : ಐತಿಹಾಸಿಕ ಕಡಲೆಕಾಯಿ ಪರಿಷೆಯಷ್ಟೇ ಹೆಸರುವಾಸಿಯಾಗುತ್ತಿರುವ ಸಮಕಾಲೀನ ಬಸವನಗುಡಿ ಪುಸ್ತಕ ಪರಿಷೆ ಮತ್ತೊಮ್ಮೆ ಬಂದಿದೆ. ಇದೇ ಅ.27ರಂದು ಪುಸ್ತಕ ಪರಿಷೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭವಾಗುತ್ತಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನ-ಮಾರಾಟ ಇರುತ್ತದೆ.

ಶುಕ್ರವಾರ ಪ್ರತಿಕಾಗೋಷ್ಠಿ ನಡೆಸಿದ ಸಾಹಿತಿ ಡಾ.ಸಿದ್ದಲಿಂಗಯ್ಯ, ಕಳೆದ ಆರು ವರ್ಷಗಳಿಂದ ಪುಸ್ತಕ ಪರಿಷೆಯನ್ನು ಸೃಷ್ಟಿ ವೆಂಚರ್ಸ್ ಸಂಸ್ಥೆ ಆಯೋಜಿಸುತ್ತಿದೆ. ಈ ಬಾರಿ ಅಕ್ಟೋಬರ್ 27ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪುಸ್ತಕ ಪರಿಷೆ ನಡೆಯಲಿದೆ ಎಂದರು.

ಕಳೆದ ವರ್ಷ 10 ಲಕ್ಷ ಪುಸ್ತಕಗಳನ್ನು ಪರಿಷೆಯಲ್ಲಿ ಪ್ರದರ್ಶಿಸಲಾಗಿತ್ತು. ಈ ಬಾರಿ 20 ಲಕ್ಷ ಪುಸ್ತಕಗಳ ಪ್ರದರ್ಶನ ಏರ್ಪಡಿಸಿ, ಹೊಸ ದಾಖಲೆ ಸೃಷ್ಟಿಸಲಾಗುವುದು ಎಂದು ಮಾಹಿತಿ ನೀಡಿದರು. ಜನರು ತಮ್ಮಲ್ಲಿರು ಪುಸ್ತಕಗಳನ್ನು ಪರಿಷೆಗೆ ನೀಡಿ, ಹೊಸ ಪುಸ್ತಕಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಥೆ, ಕಾದಂಬರಿ, ನಾಟಕ, ಸಾಮಾಜಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ, ವೈದ್ಯಕೀಯ ಮತ್ತು ಪರಿಸರ ಕ್ಷೇತ್ರದ ಪುಸ್ತಕಗಳು ಪರಿಷೆಯಲ್ಲಿ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪಿಯುಸಿಯಿಂದ ಪಿಎಚ್ ಡಿ ವರೆಗಿನ ಅಧ್ಯಯನ ಪುಸ್ತಕಗಳನ್ನು ಈ ಬಾರಿಯ ಪರಿಷೆಯಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಪುಸ್ತಕ ಪರಿಷೆಯ ನಿಯಮದಂತೆ ಸಾರ್ವಜನಿಕರು ತಾವು ಓದಿದ ಹಳೆಯ ಪುಸ್ತಕವನ್ನು ಸೃಷ್ಟಿ ವೆಂಚರ್ಸ್ ಸಂಸ್ಥಗೆ ನೀಡಬಹುದಾಗಿದೆ. ಪರಿಷೆಯನ್ನು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸೃಷ್ಟಿ ವೆಂಚರ್ಸ್ ಕಾರ್ಯದರ್ಶಿ ನಾಗರಾಜ ನಾವುಂದ ತಿಳಿಸಿದರು.ಪುಸ್ತಕಗಳನ್ನು ನೀಡಲು ಇಚ್ಚಿಸುವವರು : 9945003479, 9900204748 ನಂಬರ್ ಗಳಿಗೆ ಕರೆ ಮಾಡಬಹುದು.

English summary
Srushti ventures Basavanagudi has organized a unique Bangalore book fair on Oct 27, 2013 at National College Grounds Basavanagudi, Bangalore. 'drop a book, pick a book' concept likely to have exchange of over 20 lakh books says organizer Nagaraj Navunda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X