ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸ್ ಜೊತೆ ಅಸಭ್ಯ ವರ್ತನೆ, ಡಾಕ್ಟರ್ ಕೆಲಸಕ್ಕೆ ಕುತ್ತು

|
Google Oneindia Kannada News

doctor
ಬೆಂಗಳೂರು, ಆ.17 : ಸ್ಟಾಫ್ ನರ್ಸ್ ಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಪಕರೊಬ್ಬರು ಮನೆ ಸೇರಿದ್ದಾರೆ. ಘಟನೆಯ ವರದಿ ಸರ್ಕಾರದ ಮುಂದಿದ್ದು, ಇವರನ್ನು ಸೇವೆಯಿಂದ ವಜಾಗೊಳಿಸು ಸಾಧ್ಯತೆ ಇದೆ.

ಡಾ.ಅಬ್ದುಲ್ ರೆಹಮಾನ್ ಶರೀಫ್ ಸ್ಟಾಫ್ ಸರ್ನ್ ಗಳೊಂದಿಗೆ ಅಸಭ್ಯವಾಗಿ ಸೇವೆಯಿಂದ ಅಮಾನತು ಆಗಿರುವವರು. ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಕಾರಿ ಘಟನೆಯ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಜೂ.27 ಮತ್ತು 28ರಂದು ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಶರೀಫ್ ಇಬ್ಬರು ಸ್ಟಾಫ್ ನರ್ಸ್ ಗಳೊಂದಿಗೆ ಅನುಚಿವವಾಗಿ ವರ್ತಿಸಿದ್ದಾರೆ ಎಂಬುದು ಆರೋಪ. ಈ ಪ್ರಕರಣದ ವರದಿ ಸರ್ಕಾರದ ಮುಂದಿದ್ದು, ಆರೋಪ ಸಾಬೀತಾದರೆ, ಶರೀಫ್ ಸೇವೆಯಿಂದ ವಜಾಗೊಳ್ಳಲಿದ್ದಾರೆ.

ವರದಿಯಲ್ಲಿ ಘಟನೆಯ ಬಗ್ಗೆ ಶರೀಫ್ ಒಪ್ಪಿಕೊಂಡಿದ್ದಾರೆ. ತಮ್ಮ ಅಸಭ್ಯ ವರ್ತನೆಗೆ ಕ್ಷಮೆ ಕೇಳಿದ್ದಾರೆ. ಈಗ ಸರ್ಕಾರ ನಿರ್ಧಾರದ ಮೇಲೆ ಶರೀಫ್ ಅವರು ಸೇವೆಯಲ್ಲಿ ಮುಂದುವರೆಯುತ್ತಾರೋ? ಇಲ್ಲವೋ? ಎಂಬುದು ತೀರ್ಮಾನವಾಗಲಿದೆ.

ಆಗಿದ್ದೇನು : ಡಾ.ಶರೀಫ್ ಅವರ ತಂದೆಯನ್ನು ಜೂ.27ರಂದು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಟಾಫ್ ನರ್ಸ್ ಗಳಿಗೆ ಶರೀಫ್ ತಮ್ಮ ತಂದೆಗೆ ಮೀನು ಮತ್ತು ಮೊಟ್ಟೆ ನೀಡುವಂತೆ ಕೇಳಿದ್ದಾರೆ. ತಂದೆ ನಿತ್ರಾಣವಾಗಿರುವುದರಿಂದ ನೀವೇ ತಿನ್ನಿಸಬೇಕು ಎಂದು ಹೇಳಿದ್ದಾರೆ.

ಆದರೆ, ಸ್ಟಾಫ್ ನರ್ಸ್ ಸಸ್ಯಹಾರಿಯಾಗಿದ್ದು ಮೀನು ಮತ್ತು ಮೊಟ್ಟೆ ತಿನ್ನಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಶರೀಫ್ ಅವರನ್ನು ನಿಂದಿಸಿದ್ದಾರೆ. ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
ನಂತರ ಜೂ.28ರಂದು ಸಹ ಮತ್ತೊಬ್ಬ ನರ್ಸ್ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ಪ್ರಕರಣ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ತನಕ ಹೋಗಿದೆ. ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಜೂ.29ರಂದು ನಡೆದ ವಿಚಾರಣೆ ವೇಳೆ ಶರೀಫ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಕುರಿತು ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟಿದ್ದಾರೆ.

ಈ ಘಟನೆ ವೈದ್ಯಕೀಯ ಶಿಕ್ಷಣ ಇಲಾಖೆ ಅವರೆಗೂ ತಲುಪಿತ್ತು. ತಕ್ಷಣ ಶರೀಫ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಘಟನೆಯ ವರದಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರ ಕೈ ಸೇರಿದ್ದು, ಸರ್ಕಾರ ಶರೀಫ್ ಅವರನ್ನು ಸೇವೆಯಿಂದ ವಜಾಗೊಳಿಸಬಹುದಾಗಿದೆ.

English summary
Dr Abdul Rehman Sherief An Assistant Professor (Probationary) in Bowring and Lady Curzon Hospital in Bangalore, who allegedly misbehaved with staff nurses has been relieved of his duties. The State government, however, is yet to act on the inquiry report recommending his dismissal from service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X