ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃಗಾಲಯದಲ್ಲಿ ಬೌ ಬೌ ಎಂದ ಸಿಂಹ!

|
Google Oneindia Kannada News

lion
ಬೀಜಿಂಗ್‌, ಆ.16 : ಮೃಗಾಲಯದಲ್ಲಿದ್ದ ಸಿಂಹವೊಂದು ಬೌ ಬೌ ಎಂದು ಪ್ರವಾಸಿಗರ ಎದುರು ಬೊಗಳಿ ಸಿಕ್ಕಿಬಿದ್ದಿದೆ. ನಾಯಿಯನ್ನು ಸಿಂಹವೆಂದು ತಂದಿಟ್ಟು ಪ್ರವಾಸಿಗರನ್ನು ವಂಚಿಸುತ್ತಿದ್ದ ಮೃಗಾಲಯದ ಸಿಬ್ಬಂದಿಯೂ ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಚೀನಾದ ಲೂಹಿ ಪ್ರಾಂತ್ಯದಲ್ಲಿನ ಮೃಗಾಲಯದಲ್ಲಿ ಸಿಂಹ ನೋಡಲು ಹೋಗಿದ್ದ ಪ್ರವಾಸಿಗರು ಅದು ಬೌ ಬೌ ಎಂದು ಬೊಗಳಿದ್ದು ನೋಡಿ ಅಚ್ಚರಿಗೊಂಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಅದು ಸಿಂಹವಲ್ಲ, ನಾಯಿ ಎಂದು ತಿಳಿದು ಮೃಗಾಲಯದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗಿದ್ದೇನು : ಲಿಯೂ ಎಂಬಾತ ರಜೆಯ ಮೋಜಿನಲ್ಲಿ ತನ್ನ ಮಗನನ್ನು ಕರೆದುಕೊಂಡು ಮೃಗಾಲಯಕ್ಕೆ ಹೋಗಿದ್ದಾನೆ. ಎಲ್ಲಾ ಪ್ರಾಣಿಗಳು ಹೇಗೆ ಸ್ವರ ಮಾಡುತ್ತೆ ಎಂದು ಮಗನಿಗೆ ವಿವರಿಸುತ್ತಾ ಬಂದಿದ್ದಾನೆ.

ಸಿಂಹದ ಬಳಿ ಬಂದಾಗ ಅದು ಗಜರಾಜನ ಠೀವಿಯಲ್ಲಿ ಘರ್ಜಿಸುವ ಬದಲು ಬೌ ಬೌ ಎಂದಿದೆ. ಇದನ್ನು ಕೇಳಿ ಲೂ ಗಾಬರಿ ಬಿದ್ದಿದ್ದಾನೆ. ಆತನ ಪುಟ್ಟ ಮಗನಿಗೂ ಗೊಂದಲ ಉಂಟಾಗಿದೆ. ತಕ್ಷಣ ಅವರು ಸಿಬ್ಬಂದಿಯನ್ನು ಕೂಗಿದ್ದಾರೆ.

ಸಿಂಹ ಘರ್ಜಿಸುವುದು ಕೇಳಿದ್ದೇವೆ ಇದು ನಾಯಿಯಂತೆ ಬೊಗಳುತ್ತಿದೆ. ಇದಕ್ಕೆ ಉತ್ತರ ನೀಡಿ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಮೃಗಾಯಲದ ಸಿಬ್ಬಂದಿ ಇದು ಆಫ್ರಿಕನ್‌ ಸಿಂಹ. ಇದು ಹೀಗೆ ಕೂಗುವುದು ಎಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

ಮೃಗಾಲಯದ ಸಿಬ್ಬಂದಿ ಮೇಲೆ ಅನುಮಾನಗೊಂಡ ಲೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಂದಾಗ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಮೃಗಾಲಯದಲ್ಲಿರುವುದು ಸಿಂಹವಲ್ಲ, ಅದು ನಾಯಿಯೇ ಎಂದು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ.

ಮೃಗಾಲಯದಲ್ಲಿದ್ದ ಸಿಂಹ ಸಂತಾನೋತ್ಪತ್ತಿಗೆ ಹೋಗಿತ್ತು. ಆದ್ದರಿಂದ ಸಿಬ್ಬಂದಿ ಟಿಬೆಟ್‌ ಪ್ರದೇಶದಲ್ಲಿ ಕಂಡುಬರುವ ಒಂದು ಜಾತಿಯ ನಾಯಿಯನ್ನು ತಂದು ಅಲ್ಲಿ ಕೂಡಿಹಾಕಿದ್ದರು. ಮೈತುಂಬಾ ಕೂದಲು ಇದ್ದ ಅದು ಸಿಂಹದಂತೆಯೇ ಇತ್ತು. ಆದರೆ, ಪ್ರವಾಸಿಗರ ಎದುರು ಬೊಗಳಿ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿತು.

English summary
Visitors to a zoo in China got a rude surprise when the lion started barking. Turns out it was no lion, but just a Tibetan mastiff, a large, hairy breed of dog. On the way of zoo Mrs. Liu was teaching her son all the sounds, But when they arrived near lion it was barking like a dog. The zoo is absolutely trying to cheat them, but finally they know that is is dog not lion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X