• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆಗಾಗಿ ಕಾಯುತ್ತಿರುವ 5 ಲಕ್ಷ ಯುವತಿಯರು

By Srinath
|

ಶಾಂಘೈ, ಆಗಸ್ಟ್ 16: ಚೀನಾದಲ್ಲಿ ಗಂಡುದಿಕ್ಕು ಇಲ್ಲವಾಗಿದೆ. ಅಂದರೆ ರಾಜಧಾನಿ ಬೀಜಿಂಗ್ ಒಂದರಲ್ಲೇ 5 ಲಕ್ಷಕ್ಕೂ ಹೆಚ್ಚು ಸುಶಿಕ್ಷಿತ ಯುವತಿಯರು ಕಂಕಣಭಾಗ್ಯ ಬೇಡಿ ಕಾಯುತ್ತಿದ್ದಾರೆ. ಲಕ್ಷಾಂತರ ಯುವತಿಯರಿಗೆ ಸೂಕ್ತ ಗಂಡು ಸಿಗದೆ ಮದುವೆ ಭಾಗ್ಯ ಕಾಣದೆ ಅಕ್ಷರಶಃ ಪರಿತಪಿಸುತ್ತಿದ್ದಾರೆ.

ಹಾಗಂತ ಲಕ್ಷಾಂತರ ಯುವತಿಯತು ಕೈಕಟ್ಟಿಕೊಂಡು ಕುಳಿತಿಲ್ಲ. ಮುಕ್ತ ಮನಸ್ಸಿನಿಂದ ಮನೆಗಳಿಂದ ಹೊರಬಂದು ಸೂಕ್ತ ಗಂಡು ದಿಕ್ಕಿಗಾಗಿ ಹುಡುಕಾಟ ನಡೆಸಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಆಪ್ತ ವರ್ಗ ಬೇಗ ಮದುವೆ ಮಾಡಿಕೋ, ಇನ್ನೂ ಮದುವೆ ಮಾಡಿಕೊಂಡಿಲ್ಲವಾ? ಎಂದೆಲ್ಲಾ ಪೀಡಿಸುತ್ತಿದ್ದಾರೆ. ಚೀನಾ, ಏಷ್ಯಾ ಮಾರುಕಟ್ಟೆಯಲ್ಲಿ ತನ್ನ ಸರಕುಗಳನ್ನು ಎಗ್ಗಿಲ್ಲದೆ ತುರುಕುತ್ತದೆ. ಆದರೆ ತನ್ನದೇ ವಿವಾಹ ಮಾರುಕಟ್ಟೆಯಲ್ಲಿ ಗಂಡುಗಳನ್ನು ಪೂರೈಸಲು ಹೆಣಗಾಡುತ್ತಿದೆ.

ಚೀನಾದಲ್ಲಿ ಗಂಡಿನ ಸ್ಥಾನ ಮಹಿಳೆಗಿಂತ ಒಂದು ಕೈಮೇಲು

ಚೀನಾದಲ್ಲಿ ಗಂಡಿನ ಸ್ಥಾನ ಮಹಿಳೆಗಿಂತ ಒಂದು ಕೈಮೇಲು

ನಗರ ಪ್ರದೇಶದಲ್ಲಿ ಸುಶಿಕ್ಷಿತ, ಉದ್ಯೋಗಸ್ಥ ಯುವತಿಯರಿಗೆ ಈ ಪರಿಸ್ಥಿತಿ ತಲೆದೋರಿದೆ. ಚೀನಾ ಸಂಪ್ರದಾಯದಲ್ಲಿ/ ಸಮಾಜದಲ್ಲಿ ಗಂಡಿನ ಸ್ಥಾನ ಮಹಿಳೆಗಿಂತ ಒಂದು ಕೈ ಮೇಲು. ಹಾಗಾಗಿ ಚೆನ್ನಾಗಿ ಓದಿಕೊಂಡು, ಒಳ್ಳೆ ಸಂಬಳ ತರುವ ಉದ್ಯೋಗಸ್ಥೆ ಎನಿಸಿಕೊಂಡಿದ್ದರೂ ಚೀನಾದಲ್ಲಿ ಅವಿವಾಹಿತ ಯುವತಿಯರ ಗೋಳು ಹೇಳತೀರದಾಗಿದೆ.

ವಿದ್ಯಾವಂತ ವಧು ಬ್ರಹ್ಮಚಾರಿಗಳಿಗೆ ನುಂಗಲಾರದ ತುತ್ತು

ವಿದ್ಯಾವಂತ ವಧು ಬ್ರಹ್ಮಚಾರಿಗಳಿಗೆ ನುಂಗಲಾರದ ತುತ್ತು

ವಿಚಿತ್ರ ಅಂದರೆ ಚೀನಾದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಸ್ವಲ್ಪ ಮುಂದುವರಿದವರಂತೆ ಕಂಡುಬರುತ್ತಾರೆ. ಗಂಡುಕುಳುಗಳು ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಾರೆ. ಹುಡುಗಿಯರು ಜಾಸ್ತಿ ಓದಿಕೊಂಡು, ಭಾರಿ ಸಂಬಳ ತರುವ ಉದ್ಯೋಗಗಳಲ್ಲಿರುವು ಬ್ರಹ್ಮಚಾರಿಗಳಿಗೆ ನುಂಗಲಾರದ ತುತ್ತಾಗಿದೆ. ಒಳ್ಳೆಯ ಸಂಬಳದ/ ಎತ್ತರದ ನಿಲುವಿನ/ಹೆಣ್ಣಿಗಿಂತ ಗಂಡಿನ ವಯಸ್ಸೇ ಹೆಚ್ಚಾಗಿರಬೇಕು ಎನ್ನುವ ಸಂಪ್ರದಾಯ/ಸಮಾಜ ಚೀನಾದಲ್ಲಿದೆ.

ಹುಡುಗರಿಗಿಂತ ದುಪ್ಪಟ್ಟು ಸಂಬಳ ತರುವ ಹೆಣ್ಣುಗಳೇ ಇದ್ದಾರೆ. ಅವರ ಮನೆಯವರೂ ಬೇಗ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬೀಳುತ್ತಾರೆ. ಆದರೂ ಅವರಿಗೆ ಒಪ್ಪುವ ಬ್ರಹ್ಮಚಾರಿಗಳು ದೊರಕುತ್ತಿಲ್ಲ.

Qixi - ಚೀನೀ Valentine's Day

Qixi - ಚೀನೀ Valentine's Day

ಯಾಕಪ್ಪಾ ಈ ಜ್ವಲಂತ ಸಮಸ್ಯೆ ಬಗ್ಗೆ ಈಗ ತಲೆಕೆಡಿಸಿಕೊಂಡಿರುವುದು ಅಂದರೆ ಮೊನ್ನೆ ಮಂಗಳವಾರ ಚೀನಾ Qixi ಆಚರಿಸಿದೆ. ಏನಪ್ಪಾ ಇದು ಅಂದರೆ ಇಡೀ ಜಗತ್ತು ಫೆಬ್ರವರಿ 14ರಂದು ಆಡಂಬರದಿಂದ ಆಚರಿಸುವ Valentine's Dayನಂತೆ ಚೀನೀಯರು Qixi ಅನ್ನು ಆಗಸ್ಟ್ 13ರಂದು ಆಚರಿಸುತ್ತಾರೆ.

ಕುಟುಂಬಕ್ಕೆ ಒಂದೇ ಮಗು ಕಂಟಕವಾಯ್ತೇ!?

ಕುಟುಂಬಕ್ಕೆ ಒಂದೇ ಮಗು ಕಂಟಕವಾಯ್ತೇ!?

ಚೀನಾ ಈಗ 'ಕುಟುಂಬಕ್ಕೆ ಒಂದೇ ಮಗು' ಎಂಬ ಕುಟುಂಬ ಯೋಜನೆಯ ಫಲವನ್ನುಣ್ಣುತ್ತಿದೆ. ಅಂದರೆ ಇಪ್ಪತ್ತರ ಆಯಸ್ಸು ದಾಟಿದ, ಇನ್ನೂ ಮದುವೆಯೇ ಆಗದ, ಆದರೆ ವಿವಾಹ ಬಂಧಕ್ಕೊಳಗಾಗಲು ತಹತಹಿಸುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ/ಸಮಸ್ಯೆ ಅಲ್ಲಿ ವಿಪರೀತ ಅನಿಸುವಷ್ಟಿದೆ. 2011ರ ಚೀನಾ ಜನಗಣತಿ ಪ್ರಕಾರ leftover menಗಳೂ ಉದ್ಭವವಾಗಲಿದ್ದಾರೆ.

 ಚೀನಾದಲ್ಲಿ shengnu ಅಂದರೆ leftover women

ಚೀನಾದಲ್ಲಿ shengnu ಅಂದರೆ leftover women

ಹೀಗೆ ಮದುವೆಯಾಗದೇ ಉಳಿದಿರುವ ಹೆಣ್ಣುಮಕ್ಕಳಿಗೆ ಚೀನಾದಲ್ಲಿ shengnu ಅಂತ ಕರೆಯುತ್ತಾರೆ. ಅಂದರೆ ಹಸಿಹಸಿಯಾಗಿ ಆಂಗ್ಲೀಕರಿಸಿದರೆ ಅವರೆಲ್ಲಾ leftover women ಗಳಾಗುತ್ತಾರೆ. ಇನ್ನು ಕನ್ನಡಕ್ಕೆ ಇದನ್ನು ಭಾಷಾಂತರಿಸಿದರೆ ನಮ್ಮ ಹೆಣ್ಣುಮಕ್ಕಳೂ ನಿಜಕ್ಕೂ ಬೇಸರಪಟ್ಟುಕೊಳ್ಳುತ್ತಾರೆ. ಹಾಗಾಗಿ ಅಚ್ಚ ಇಂಗ್ಲೀಷಿನಲ್ಲಿ leftover womang ಎಂದೇ ಗೌರವಿಸೋಣ.

A grade ಯುವತಿಯರು- D grade ಹುಡುಗರಿಗೆ ಜೀವನ ಸಂಗಾತಿ

A grade ಯುವತಿಯರು- D grade ಹುಡುಗರಿಗೆ ಜೀವನ ಸಂಗಾತಿ

ಚೀನಾ ವಿವಾಹ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ A-grade ಹುಡುಗರು B-grade ಯುವತಿಯರನ್ನು ಮದುವೆ ಆಗುತ್ತಾರೆ. B-grade ಹುಡುಗರು C-grade ಯುವತಿಯರನ್ನು ಮದುವೆ ಆಗುತ್ತಾರೆ. C-grade ಹುಡುಗರು D-grade ಯುವತಿಯರನ್ನು ಮದುವೆ ಆಗುತ್ತಾರೆ.

ಇದರರ್ಥ A-grade ಯುವತಿಯರು ಮತ್ತು D-grade ಹುಡುಗರಿಗೆ ಜೀವನ ಸಂಗಾತಿಗಳು ಸಿಗದೆ ಮದುವೆಯಾಗದೆ ಹಾಗೇ ಉಳಿದುಬಿಡುತ್ತಿದ್ದಾರೆ. ಅಂತಹವರಿಗೇ ಅಲ್ಲಿನ ಸಮಾಜ/ ಮಾಧ್ಯಮಗಳು leftoverಗಳು ಎನ್ನುತ್ತಿರುವುದು.

ಚೀನಾ ಸರಕಾರವೂ ಸುಮ್ಮನೆ ಕುಳಿತಿಲ್ಲ

ಚೀನಾ ಸರಕಾರವೂ ಸುಮ್ಮನೆ ಕುಳಿತಿಲ್ಲ

ಇಂತಹ ಭೀಕರ ಬರ/ ಸಮಸ್ಯೆಯ ಎದುರು ಚೀನಾ ಸರಕಾರವೂ ಸುಮ್ಮನೆ ಕೈಕಟ್ಟಿಕೊಂಡು ಕುಳಿತಿಲ್ಲ. ಆಗಾಗ ಮ್ಯಾಟ್ರಿಮೋನಿಯಲ್ ಮೇಳಗಳನ್ನು ಆಯೋಜಿಸುತ್ತಿರುತ್ತದೆ. ಸಾಕಷ್ಟು ಯುವಕ/ಯುವತಿಯರು ಇದರಲ್ಲಿ ಪಾಳ್ಗೊಳ್ಳುತ್ತಾರೆ. ಆದರೆ 32 ವರ್ಷದ ಭಾಷಾ ಶಿಕ್ಷಕಿ ಲೂಸಿ ವಾಂಗ್ ಹೇಳುವಂತೆ ಒಂದೋ ಪ್ಲೇಬಾಯ್ ಮಾದರಿಯ ಗಂಡುಗಳು ಕಾಣಸಿಗುತ್ತಾರೆ. ಇಲ್ಲವಾದರೆ, ಇನ್ನೂ ಅಮ್ಮನ ಮಡಿಲುಬಿಟ್ಟು ಬಾರದ ಮುಗ್ಧ ಜೀವಗಳು ಕಣ್ಣಿಗೆ ಬೀಳುತ್ತವಂತೆ. ಸೋ, ಸಮಸ್ಯೆ ಏನೂ ಅಂತ ಇಷ್ಟೊತ್ತಿಗಾಗ್ಲೇ ನಿಮಗೂ ಅರ್ಥವಾಗಿರಬೇಕಲ್ಲ!

English summary
Match-making problems in China - 5 lakh leftover women in Beijing. A big issue for urban, educated and well-paid Chinese women in a society where the husband's social status is traditionally above the wife's is it is hard to find right man. Millions of women here face stark choices as long-held ideas about matrimonial hierarchy run up against economic and social changes sweeping the world's most populous country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X