ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಾ ಬಂಧನಕ್ಕೆ ICICIನಿಂದ ವಿಶೇಷ ಕೊಡುಗೆ

By Prasad
|
Google Oneindia Kannada News

Raksha Bandhan offer from ICICI Money2India
ವರ್ಷ ಋತುವಿನ ಶ್ರಾವಣ ಶುದ್ಧ ಚತುರ್ಥಿ, ಮಂಗಳವಾರ ಆಗಸ್ಟ್ 20ರಂದು ರಕ್ಷಾ ಬಂಧನ ಹಬ್ಬ. ಹಿಂದೂಗಳ ಪವಿತ್ರ ಹಬ್ಬವಾದ ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಅಭಯವನ್ನು ಪಡೆದುಕೊಳ್ಳುತ್ತಾಳೆ. ಇದು ಅಣ್ಣ ತಂಗಿ, ಅಕ್ಕ ತಮ್ಮಂದಿರ ನಡುವೆ ಆತ್ಮೀಯತೆ, ಬಾಂಧವ್ಯ, ಪ್ರೀತಿ ಪ್ರೇಮವನ್ನು ವೃದ್ಧಿಸುವ ವಿಶಿಷ್ಟವಾದ ಹಬ್ಬ.

ಈ ಹಬ್ಬದಂದು ಬೆಳಗಿನ ಜಾವ ಸ್ನಾನ ಮಾಡಿ ಶುಚಿರ್ಭೂತರಾಗಿ ಬಂದ ನಂತರ, ಹೊಸ ಬಟ್ಟೆ ತೊಟ್ಟು, ಸಹೋದರನನ್ನು ಕೂಡಿಸಿ ಆತನ ಹಣೆಗೆ ತಿಲಕವನ್ನಿಟ್ಟು, ರಾಖಿ ಕಟ್ಟಿ ಆರತಿ ಮಾಡಿ ಆಶೀರ್ವಾದ ಮಾಡುವ ಅಥವಾ ಆಶೀರ್ವಾದ ಪಡೆಯುವ ಬಾಂಧವ್ಯ ಬೆಸುಗೆಯ ಹಬ್ಬ. ರಾಖಿ ಕಟ್ಟಿದ ಸಹೋದರಿಗೆ ಇಷ್ಟವಾದ ಉಡುಗೊರೆ ಕೊಟ್ಟು ಸಹೋದರರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಆದರೆ, ಕೆಲಸದ ಕಾರಣಗಳಿಂದ ಅಣ್ಣ ತಂಗಿ ದೂರವಿರುವುದು ಸರ್ವೇಸಾಮಾನ್ಯ. ಪ್ರೀತಿಯ ಸಹೋದರಿಗೆ ರಾಖಿ ಹಬ್ಬದಂದು ಉಡುಗೊರೆ ಖುದ್ದಾಗಿ ನೀಡಲಾಗಲಿಲ್ಲವಲ್ಲ ಎಂದು ಕೊರಗುವ ಅಗತ್ಯವೇ ಇಲ್ಲ. ಇದಕ್ಕಾಗಿ ICICIನ Money2India ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ನಿಮ್ಮ ಸಹೋದರಿಗೆ ಬ್ಯಾಂಕ್ ಮುಖಾಂತರ ಗಿಫ್ಟ್ ಕಳಿಸಿ ಮತ್ತು ಶೇ.22ರಷ್ಟು ರಿಯಾಯಿತಿ ಪಡೆಯಿರಿ.

Money2India ಮೂಲಕ ಹಣವನ್ನು ಭಾರತದಲ್ಲಿರುವ ಸಹೋದರಿಗೆ ಕಳುಹಿಸಿದರೆ, ಬ್ಯಾಂಕ್ ನಿಮಗೆ ಗಿಫ್ಟ್ ಕೋಡ್ ಕಳುಹಿಸುತ್ತದೆ. ಈ ಸೌಲಭ್ಯ ಅಮೆರಿಕ, ಯುನೈಟೆಡ್ ಕಿಂಗ್ಡಂ, ಕೆನಡಾ, ಸಿಂಗಪುರ, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಹಾಂಗ್ ಕಾಂಗ್ ನಲ್ಲಿರುವ ಭಾರತೀಯರಿಗೆ ಮಾತ್ರ ಲಭ್ಯವಿದೆ.

ಹಲವಾರು ರೀತಿಯಲ್ಲಿ ಹಣವನ್ನು ಕಳುಹಿಸಬಹುದು. ಭಾರತದಲ್ಲಿನ 100ಕ್ಕೂ ಹೆಚ್ಚು ಬ್ಯಾಂಕ್‌ಗಳಿಗೆ ಎಲೆಕ್ಟ್ರಾನಿಕ್ ವರ್ಗಾವಣೆ, ICICI ರೆಮಿಟನ್ಸ್ ಕಾರ್ಡ್‌ಗೆ ಕ್ರೆಡಿಟ್, ವೀಸಾ ಡೆಬಿಟ್ ಕಾರ್ಡ್‌ಗೆ ಕ್ರೆಡಿಟ್ ಮತ್ತು ಭಾರತದಲ್ಲಿನ 700 ಬ್ಯಾಂಕ್‌ಗಳಲ್ಲಿ ಡಿಮಾಂಡ್ ಡ್ರಾಫ್ಟ್ ಮೂಲಕ ಹಣವನ್ನು ಸರಳವಾಗಿ ವರ್ಗಾವಣೆ ಮಾಡಬಹುದು.

ಸರಳ ಮತ್ತು ಸುರಕ್ಷಿತವಾಗಿ ಹಣ ವರ್ಗಾವಣೆ ಮಾಡುವ ಈ ವಿಧಾನಗಳಿಂದ ಅನೇಕ ಲಾಭಗಳು ಕೂಡ ಇವೆ. ಇಂಟರ್ನೆಟ್ ಮತ್ತು ಮೊಬೈಲ್ ಆಪ್ಸ್ ಮುಖಾಂತರ ಹಣ ವರ್ಗಾವಣೆ ಪ್ರಕ್ರಿಯೆ ಗಮನಿಸಲು, ನಿಗದಿತ ಹಣ ಠೇವಣಿಗೆ ಖಚಿತ ವರ್ಗಾವಣೆ ದರ, ಈಮೇಲ್ ಅಥವಾ ಫೋನ್ ಮುಖಾಂತರ ದಿನದ 24 ಗಂಟೆಗಳ ಕಾಲ ಸೇವಾ ತಜ್ಞರನ್ನು ಸಂಪರ್ಕಿಸಲು ಕೂಡ ಸಾಧ್ಯವಿದೆ.

ಅಮೆರಿಕ ಡಾಲರ್, ಬ್ರಿಟಿಷ್ ಪೌಂಡ್ಸ್, ಕೆನಡಾ ಡಾಲರ್, ಯೂರೋಸ್ ಮತ್ತು ಸಿಂಗಪುರ ಡಾಲರುಗಳಲ್ಲಿ ಹಣವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ವರ್ಗಾವಣೆ ಮಾಡಬಹುದು. ನಿಮ್ಮ ಪ್ರೀತಿಯ ಸಹೋದರಿಗಾಗಿ ಇಷ್ಟನ್ನು ಮಾಡಲು ಸಾಧ್ಯವಿಲ್ಲವೆ?

English summary
You need not feel guilty if you are not able to wish your sister personally on Rakhi this month. Send your Sister gift of your choice and get 22% discount. Simply transfer money with Money2India and get a gift code to avail offer. The offer is for residents of US, UK, Canada, Singapore, Sweden, Switzerland and Hong Kong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X