ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯೋತ್ಸವ ಸಂದರ್ಭಕ್ಕೆರಡು ಸಮಾಧಾನಕರ ಸುದ್ದಿ

By Srinath
|
Google Oneindia Kannada News

ಅಹಮದಾಬಾದ್, ಆಗಸ್ಟ್ 14: ಇಡೀ ರಾಷ್ಟ್ರ ಇನ್ನೇನು 67ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಮಿಂದೇಳಲಿದೆ. ಈ ಸಂಭ್ರಮನ್ನು ಮತ್ತಷ್ಟು ಹೆಚ್ಚಿಸುವ ಒಂದೆರಡು ಸಿಹಿ/ಸಮಾಧಾನಕರ ಸುದ್ದಿಗಳು ಇಲ್ಲಿವೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅಮೆರಿಕದಲ್ಲಿನ ಅನಿವಾಸಿ ಭಾರತೀಯರು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ, ನಮಗೆ ಸ್ವಾತಂತ್ರ್ಯವನ್ನು ವಾಪಸ್ ಕೊಟ್ಟ ಬ್ರಿಟೀಶರ ನಾಡಿನಲ್ಲಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ಮಣೆ ಹಾಕಲಾಗಿದೆ. ಈ ಇಬ್ಬರೂ ಗುಜರಾತ್ ರಾಜ್ಯಕ್ಕೆ ಸಂಬಂಧಪಟ್ಟವರಾದರೂ ಪರಸ್ಪರ ವಿರೋಧಿ ಕ್ಷೇತ್ರದವರು ಎಂಬುದು ಗಮನಾರ್ಹ.

anna-hazare-to-ring-bell-at-nasdaq-to-lead-id-parade-in-new-york

ಅಮೆರಿಕದ ಬೋಸ್ಟನ್‌ ನಲ್ಲಿ ನಮ್ಮ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, 76 ವರ್ಷದ ಹಿರಿಯ ಜೀವ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅಮೆರಿಕದಲ್ಲಿನ ಅನಿವಾಸಿ ಭಾರತೀಯರು ಸಿದ್ಧತೆ ನಡೆಸಿದ್ದಾರೆ.

ರಾಜಕೀಯೇತರ ಕ್ಷೇತ್ರದ ಭಾರತೀಯ ನಾಯಕರೊಬ್ಬರು ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಇಂತಹ ಅದ್ದೂರಿ ಸ್ವಾಗತ ಪಡೆಯುತ್ತಿರುವುದು ಸ್ವಾತಂತ್ರ್ಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ. ಇದು ಎಲ್ಲ ಭಾರತೀಯರಿಗೂ ಸಲ್ಲುವ ಗೌರವವಾಗಿದೆ.

ನಾಸ್ಡಾಕ್ ಘಂಟೆ ರಿಂಗಣಿಸುವ ಭಾಗ್ಯ ಅಣ್ಣಾ ಹಜಾರೆಗೆ: ಅವರು ಆಗಸ್ಟ್ 16 ರಿಂದ ತಮ್ಮ ಎರಡು ವಾರಗಳ ಅಮೆರಿಕ ಪ್ರವಾಸವನ್ನು ಆರಂಭಿಸಲಿದ್ದು ಈ ವೇಳೆ ನ್ಯೂಯಾರ್ಕ್‌ ನಲ್ಲಿ ನಡೆಯಲಿರುವ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ ನೇತೃತ್ವವನ್ನು ವಹಿಸಲಿದ್ದಾರೆ. ಈ ಪರೇಡಿನ‌ಲ್ಲಿ ಸಾವಿರಾರು ಭಾರತೀಯ ಅಮೆರಿಕನರು ಭಾಗವಹಿಸಲಿದ್ದಾರೆ.

ಇದೇ ವೇಳೆ ಪ್ರತಿಷ್ಠಿತ ಷೇರು ಮಾರುಕಟ್ಟೆಯ ನಾಸ್ಡಾಕ್ ಘಂಟೆಯನ್ನು ರಿಂಗಣಿಸುವ ಭಾಗ್ಯವೂ ಇವರದಾಗಲಿದೆ. ಆ ಬಳಿಕ ಹಜಾರೆ ಸೌತ್‌ ಕ್ಯಾರೊಲಿನಾದ ಗವರ್ನರ್‌ ಆಗಿರುವ ಭಾರತೀಯ ಅಮೆರಿಕನ್‌ ಪ್ರಜೆ ನಿಕ್ಕಿ ಹ್ಯಾಲಿ ಅವರು ಆಯೋಜಿಸಿರುವ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಎರಡು ವಾರಗಳ ತಮ್ಮ ಅಮೆರಿಕ ಭೇಟಿಯ ವೇಳೆ ಹಜಾರೆ ಅವರು ನ್ಯೂಯಾರ್ಕಿನ ಕ್ಯಾಪಿಟಲ್‌ ಹಿಲ್‌ ನಲ್ಲಿ ದೇಶದ ಸಂಸದರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಜತೆಗೆ, ವಿಶ್ವಸಂಸ್ಥೆಯ ಮುಖ್ಯಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವೂ ಅವರ ಪ್ರವಾಸದಲ್ಲಿದೆ.

ಹಾಗೆಯೇ, ಸ್ಯಾನ್‌ ಫ್ರಾನ್ಸಿಸ್ಕೋ, ಮೇರಿಲ್ಯಾಂಡ್‌, ವಾರ್ಟನ್‌ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಮತ್ತು ಕೊಲಂಬಿಯಾ ಯುನಿವರ್ಸಿಟಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದೊಂದಿಗಿನ ಸಂವಾದದಲ್ಲಿ ಭಾಗವಹಿಸಲಿರುವರು.

ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಜನಪ್ರಿಯರಾಗಿರುವ ಹಜಾರೆ ಅವರ ಮಾತುಗಳನ್ನು ಆಲಿಸಲು ಅಮೆರಿಕನರು ಭಾರೀ ಕುತೂಹಲದಿಂದಿದ್ದು, ಭ್ರಷ್ಟಾಚಾರ ಕುರಿತಾಗಿನ ಅವರ ದೃಷ್ಟಿಕೋನಗಳನ್ನು ದೇಶದ ತನ್ನ ಓದುಗರಿಗೆ ವಿವರಿಸುವ ಸಲುವಾಗಿ ಮಾಧ್ಯಮಗಳೂ ಹಜಾರೆ ಅವರ ಸಂದರ್ಶನ ಪಡೆಯಲು ಉತ್ಸುಕವಾಗಿವೆ.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

English summary
Anti-corruption crusader Anna Hazare to ring bell at Nasdaq to lead Independence Day parade in New York. Indian-Americans are preparing to throw a red-carpet welcome to anti-corruption crusader Anna Hazare, during his two-week visit to the US, a kind of welcome, which has not been seen for a non-politician from India in recent times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X