ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹ ನೋಂದಣಿ ಮಾಡಿಸುವುದು ಇನ್ನು ಕಡ್ಡಾಯ

|
Google Oneindia Kannada News

marriage
ನವದೆಹಲಿ, ಆ.14 : ಜನನ ಮತ್ತು ಮರಣದ ನೋಂದಣಿಯಂತೆ, ವಿವಾಹ ನೋಂದಣಿ ಮಾಡಿಸುವುದು ಇನ್ನು ಕಡ್ಡಾಯವಾಗಲಿದೆ. ಜನನ ಮತ್ತು ಮರಣ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದೆ.

ಮಂಗಳವಾರ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ರಾಜ್ಯಸಭೆಯಲ್ಲಿ ವಿವಾಹ ನೋಂದಣಿ ಕಡ್ಡಾಯಗೊಳಿಸುವ 'ಜನನ ಮತ್ತು ಮರಣ ತಿದ್ದುಪಡಿ ವಿಧೇಯಕ 2012'ನ್ನು ಮಂಡಿಸಿದರು. ಧ್ವನಿ ಮತದ ಮೂಲಕ ವಿಧೇಯಕ ಅಂಗೀಕಾರವಾಯಿತು.

ರಾಜ್ಯಸಭೆಯಲ್ಲಿ ವಿಧೇಯಕದ ಕುರಿತು ಮಾತನಾಡಿದ ಕಪಿಲ್ ಸಿಬಲ್, ವಿವಾಹ ನೋಂದಣಿ ಕಡ್ಡಾಯ ಆದರೆ, ನೋಂದಣಿ ಮಾಡದವರಿಗೆ ದಂಡ ವಿಧಿಸಲಾಗುವುದಿಲ್ಲ. ನೋಂದಣಿ ಮಾಡಿಸುವುದರಿಂದ ಇರುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ನೋಂದಣಿಗೆ ಸಂಬಂಧಿಸಿದಂತೆ ತಮಗೆ ಅನುಕೂಲವಾದ ಕಾನೂನು ರೂಪಿಸುವುದಕ್ಕೆ ರಾಜ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಂಪ್ರದಾಯಬದ್ಧವಾಗಿ ವಿವಾಹವಾಗುವ ಜನರಿಗೆ ಕಾಯ್ದೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿವಾಹ ನೋಂದಣಿಗೆ ಸುಳ್ಳು ಮಾಹಿತಿ ನೀಡಿದರೆ 50 ರೂ. ದಂಡ ವಿಧಿಸಲಾಗುತ್ತಿದೆ. ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಬಸವರಾಜ್ ಪಾಟೀಲ್ ಮತ್ತಿತರ ಸದಸ್ಯರು ಸರ್ಕಾರಕ್ಕೆ ಸಲಹೆ ನೀಡಿದರು.

ವಿಧೇಯಕದ ಪ್ರಮುಖ ಅಂಶಗಳು :
* ಧರ್ಮದ ಭೇದವಿಲ್ಲದೆ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವುದು.
* ಇತರೆ ಕಾಯಿದೆಯನ್ವಯ ನೋಂದಣಿ ಮಾಡಿಸಿದವರು, ವಿಧೇಯಕದನ್ವಯ ಪುನಃ ನೋಂದಣಿ ಮಾಡಿಸುವ ಅಗತ್ಯವಿಲ್ಲ.
* ವಿವಾಹ ನೋಂದಣಿ ಪ್ರಮಾಣ ಪತ್ರದ ನೆರವಿನಿಂದ ಅನಗತ್ಯ ಕೌಟುಂಬಿಕ ಕಿರುಕುಳ ತಪ್ಪಲಿವೆ ಮತ್ತು ಪರಿಹಾರ ಪ್ರಕರಣಗಳಲ್ಲಿ ನೆರವಾಗಲಿದೆ.
* ವಿವಾಹವಾದವರ ವಯಸ್ಸು, ಮಕ್ಕಳು ಯಾರ ವಶದಲ್ಲಿರಬೇಕು ಮುಂತಾದ ವಿವಾದಗಳು ಉಂಟಾದಾಗ ವಿದೇಯಕ ಖಚಿತ ಸಾಕ್ಷಿ ಒದಗಿಸಲಿದೆ.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

English summary
The Rajya Sabha passed a bill to make registration of marriages, irrespective of religion, mandatory under the Registration of Births and Deaths Act, 1969, which currently only regulates registration of births and deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X