• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರಮಹಾಲಕ್ಷ್ಮೀ ಹಬ್ಬದ ದಿನ ಈ ಬಡಾವಣೆಯಲ್ಲಿ ಕರೆಂಟ್ ಇರಲ್ಲ

By Prasad
|

ಬೆಂಗಳೂರು, ಆ. 14 : ವರಮಹಾಲಕ್ಷ್ಮೀ ಹಬ್ಬದ ದಿನ ಆ.16ರಂದು ಲಕ್ಷ್ಮೀದೇವಿ ನಮ್ಮ ಮನವನ್ನು ಬೆಳಗಲಿ, ಸಮೃದ್ಧಿಯನ್ನು ನೀಡಲಿ ಎಂದು ಬೇಡಿಕೊಳ್ಳಲು ಬೆಂಗಳೂರಿನ ಜನತೆ ಸಜ್ಜಾಗಿದ್ದರೆ, ಅಂದು ನಗರದ ಹಲವಾರು ಬಡಾವಣೆಗಳಲ್ಲಿನ ಮನೆಗಳು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕತ್ತಲಲ್ಲಿ ಮುಳಗಲಿವೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಆಗಸ್ಟ್ 16ರಂದು, ವಿದ್ಯುತ್ ತಂತಿ ಜೋಡಣೆ ಮತ್ತು ಬದಲಾವಣೆ, ವಿದ್ಯುತ್ ಕಂಬ ನಿಲ್ಲಿಸುವಿಕೆ, ಟ್ರಾನ್ಸ್ ಫಾರ್ಮರ್ ರಿಪೇರಿ ಮುಂತಾದ ಕಾರ್ಯಗಳನ್ನು ಹಾಕಿಕೊಂಡಿರುವುದರಿಂದ ಅನೇಕ ಬಡಾವಣೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಹಾಗೆಯೆ, ಹಬ್ಬಕ್ಕೆ ವಿದ್ಯುತ್ ಗ್ರಾಹಕರಿಗೆ ಶುಭಾಶಯವನ್ನೂ ಕೋರಿದೆ.

ವರಮಹಾಲಕ್ಷ್ಮಿಯಂದು ಪೂಜೆ ಪುನಸ್ಕಾರ ಮುಗಿಸಿದ ನಂತರ, ಬಂಧುಗಳೊಂದಿಗೆ ಹಬ್ಬದೂಟ ಮಾಡುತ್ತ ಖಾಸಗಿ ವಾಹಿನಿಗಳಲ್ಲಿ ಬರುವ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು, ಕನ್ನಡ ಸಿನೆಮಾಗಳನ್ನು ನೋಡಲು ಈ ಬಡಾವಣೆಯವರಿಗೆ ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಡಾವಣೆಗಳಲ್ಲಿ ಕೆಲಸ ಮಾಡಲಿರುವ ಬೆಸ್ಕಾಂ ಸಿಬ್ಬಂದಿಗಳಿಗೆ ರಜಾ ಇರುವುದಿಲ್ಲ!

ವಿದ್ಯುತ್ ವ್ಯತ್ಯಯದ ಅವಧಿ ಮತ್ತು ಬಡಾವಣೆಗಳ ವಿವರ ಕೆಳಗಿನಂತಿವೆ. ಈ ಪಟ್ಟಿಯಲ್ಲಿ ನೀವು ವಾಸಿಸುತ್ತಿರುವ ಬಡಾವಣೆಯೂ ಇದೆಯಾ ಎಂಬುದನ್ನು ನೋಡಿಕೊಳ್ಳಿ. ಕರೆಂಟ್ ಹೋಗುವುದರೊಳಗೆ ಸ್ನಾನ ಸಂಧ್ಯಾವಂದನೆ, ಪೂಜೆ ಪುನಸ್ಕಾರ, ಮಿಕ್ಸಿಯಲ್ಲಿ ಹೋಳಿಗೆ ಹೂರಣ ರುಬ್ಬಿಕೊಳ್ಳುವುದು ಎಲ್ಲವನ್ನೂ ಪೂರೈಸಿಕೊಂಡುಬಿಡಿ. ಇಲ್ಲದಿದ್ದರೆ ನೀವುಂಟು ನಿಮ್ಮ ರುಬ್ಬುಕಲ್ಲುಂಟು.

1) ಬೆಳಿಗ್ಗೆ 10ರಿಂದ ಸಂಜೆ 5 : ದೊಡ್ಡಣ್ಣನಗರ, ಮಹಾಲಕ್ಷ್ಮಿ, ಫ್ಲೋರ್ ಮಿಲ್, ಯಾರಬ್ ನಗರ, ಡಿಜೆ ಹಳ್ಳಿ ಮಾರ್ಕೆಟ್ ರಸ್ತೆ, ಡಿಜೆ ಹಳ್ಳಿ ಪೊಲೀಸ್ ಸ್ಟೇಷನ್, ಕೆಜಿ ಹಳ್ಳಿ, ಮಾಗಡಿ ರಸ್ತೆ, ಗೋವಾ ಗಾರ್ಡನ್, ಟಿಪ್ಪು ಸರ್ಕಲ್, ಸ್ಲಂ ಬೋರ್ಡ್ ಕ್ವಾರ್ಟರ್ಸ್.

2) ಬೆಳಿಗ್ಗೆ 10ರಿಂದ ಸಂಜೆ 4 : ವಿವಿ ಲೇಔಟ್ ನ ಕೆಲಭಾಗ, ವಸಂತಪುರ, ಪೈಪ್ ಲೈನ್, ಪಾಮ್ ಸ್ಪ್ರಿಂಗ್ ಲೇಔಟ್, ರಘುವನಹಳ್ಳಿ, ದೊಡ್ಡಕಾಳಸಂದ್ರ.

3) ಬೆಳಿಗ್ಗೆ 11ರಿಂದ ಮಧ್ಯಾಹ್ನ 3 : ಅರೆಹಳ್ಳಿ, ಇಸ್ರೋ ಲೇಔಟ್, ಪೈಪ್ ಲೈನ್, ಕುಮಾರಸ್ವಾಮಿ ಬಡಾವಣೆ ಕೆಲಭಾಗ, ಕನಕನಗರ, ಕುಮಾರಸ್ವಾಮಿ ಲೇಔಟ್ 1ನೇ ಹಂತ 14ನೇ ಮುಖ್ಯರಸ್ತೆ.

4) ಮಧ್ಯಾಹ್ನ 12ರಿಂದ ಅಪರಾಹ್ನ 2 : ಲೀಲಾ, ಕೋಡಿಹಳ್ಳಿ, ಏರ್ಪೋರ್ಟ್ ರಸ್ತೆ, ದೊಮ್ಮಲೂರು 2ನೇ ಹಂತ, 100 ಅಡಿ ರಸ್ತೆ, ದೂಪನಹಳ್ಳಿ.

5) ಮಧ್ಯಾಹ್ನ 12ರಿಂದ ಅಪರಾಹ್ನ 2 : ಎಚ್ಆರ್‌ಬಿಆರ್ ಬಡಾವಣೆಯ ಬಾಣಸವಾಡಿ 1ನೇ ಮತ್ತು 2ನೇ ಹಂತ.

6) ಬೆಳಿಗ್ಗೆ 10ರಿಂದ ಸಂಜೆ 5 : ಎಚ್ ಬಿಆರ್, ವಿದ್ಯಾಸಾಗರ, ತಣಿಸಂದ್ರ, ಆರ್ ಕೆ ಹೆಗಡೆ ನಗರ, ಕೆ. ನಾರಾಯಣಪುರ, ಬಾಲಾಜಿ ಲೇಔಟ್ 1ನೇ, 2ನೇ ಮತ್ತು 3ನೇ ಹಂತ, ರೈಲ್ವೆ ಮೇನ್.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Power interruption on 16th August 2013 in several part of Bangalore. Several layouts in Bangalore will be in dark on Varamahalakshmi festival due to work undertaken by BESCOM. Customers are requested to co-operate. Happy Varamahalakshmi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more