ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಕಿಂಗ್ ಸಮಸ್ಯೆಗೆ ಇದು ಪರಿಹಾರ ಆಗಬಹುದೇ?

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 13: ರಾಜಧಾನಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ನಿಜಕ್ಕೂ ಅಗಾಧವಾಗಿದೆ. ರಸ್ತೆ ಬದಿ ವಾಹನ ಪಾರ್ಕ್ ಮಾಡಲು ಚೂರು ಜಾಗ ಸಿಕ್ಕಿದರೆ ಜನ ಧನ್ಯತಾಭಾವ ಅನುಭವಿಸುತ್ತಾರೆ. ಪಾರ್ಕಿಂಗ್ ಜಾಗಕ್ಕೆ ಅಷ್ಟೊಂದು ಅಭಾವವಿದೆ.

ಅಸಲಿಗೆ ಇದ್ದಕ್ಕಿದ್ದಂತೆ ರಸ್ತೆಗಳೇ ಮಾಯವಾಗಿ ಬಿಡುತ್ತದೆ. ರಸ್ತೆಯಲ್ಲಿ ನಾಲ್ಕು ವಾಹನಗಳು ಹೆಚ್ಚಾಗಿ ಕಾಣಿಸಿಕೊಂಡುಬಿಟ್ಟರೆ ಸಂಚಾರವೂ ಸ್ತಬ್ಧ. ಸಂಚಾರ ಮಾಡುವ ವಾಹನಗಳಿಗಿಂತ, ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಅಂದರೆ ಅಡ್ಡಿಯಿಲ್ಲ. ಇದಕ್ಕೆಲ್ಲ ಪರಿಹಾರ ಇಲ್ಲವೇ?

ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಅಂಡರ್ ಪಾಸುಗಳನ್ನು ಎಷ್ಟು ಅಂತ ನಿರ್ಮಿಸುವುದು. ಅಷ್ಟಕ್ಕೂ ಇದಷ್ಟೇ ಸಂಚಾರ ದಟ್ಟಣೆ/ಪಾರ್ಕಿಂಗ್ ಸಮಸ್ಯೆ ನೀಗಿಸಬಲ್ಲದೇ? ಇದರಾಚೆಗೆ ಏನಾದರೂ ಯೋಜನೆ/ಯೋಚನೆಗಳಿವೆಯಾ? ಖಂಡಿತವಾಗಿಯೂ ಇದೆ.

ಆಯ್ತು, ರಸ್ತೆಗಳಲ್ಲೇ ವಾಹನ ನಿಲ್ಲಿಸುವುದು ಬೇಡ. ಅದರ ಬದಲಿಗೆ ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಹೇಗೆ? ಅರ್ಥ ಆಗಲಿಲ್ಲವಾ? ಹೌದು ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಸಂಚಾರ ದಟ್ಟಣೆಯೂ ತಪ್ಪುತ್ತದೆ. ವಾಹನ ನಿಲ್ಲಿಸೋಕ್ಕೆ ವಿಶಾಲ ಜಾಗವೂ ಲಭಿಸುತ್ತದೆ ಎನ್ನಲು ಒಂದೆರಡು ಯೋಜನೆಗಳು ಇಲ್ಲಿವೆ.

Elevated parking space

Elevated parking space

ಒಂದು - Elevated parking space on existing roads. ಎರಡು- Creating parking place in residential areas.

ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು

ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು

ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು. ಭಾರಿ ಗಾತ್ರದ ರಚನೆಗಳನ್ನು ಬಳಸಿ, ವಿಶಾಲ parking place ನಿರ್ಮಿಸಬಹುದು. ಈ ರಚನೆಗಳು ತುಸು ಹೆಚ್ಚಾಯ್ತು/ ಅಥವಾ ಅದರ ಅಗತ್ಯ ಇಲ್ಲ ಅನಿಸಿದಾಗ ಈ ರಚನೆಗಳನ್ನು ತೆಗೆದುಹಾಕಬಹುದು.

Elevated parking space- ವೆಚ್ಚ ಎಷ್ಟು ?

Elevated parking space- ವೆಚ್ಚ ಎಷ್ಟು ?

ಸರಿ ಇದಕ್ಕೆ ತಗಲುವ ವೆಚ್ಚ ಎಷ್ಟು ಅಂದಿರಾ? ಹೆಚ್ಚೇನೂ ಇಲ್ಲ- ಅಬ್ಬಬ್ಬಾ ಅಂದರೆ 15 ಕೋಟಿ ರೂಪಾಯಿ ಅಷ್ಟೇ. ಇಷ್ಟೇ ವೆಚ್ಚದಲ್ಲಿ ನಿರ್ಮಿಸಲಾದ Elevated parking spaceನಲ್ಲಿ parking fee ರೂಪದಲ್ಲಿ ವಾರ್ಷಿಕ 2 ಕೋಟಿ ರೂ. ಗಳಿಸಬಹುದು. ಇದನ್ನು ಬಹುಮಹಡಿಗಳನ್ನಾಗಿಯೂ ರಚಿಸಬಹುದು.

ಸಂಬಂಧಪಟ್ಟವರು ಗಮನ ಹರಿಸುವರೇ?

ಸಂಬಂಧಪಟ್ಟವರು ಗಮನ ಹರಿಸುವರೇ?

ಇದನ್ನು ಜನವಸತಿ ಪ್ರದೇಶಗಳಲ್ಲೂ ಮಾಡಬಹುದು. ಈ ಯೋಜನೆಗಳೆರಡೂ comfortable-feasible ಅನ್ನಿಸುತ್ತದೆ. ಹಾಗಾಗಿ ಇದರ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು ಸೂಕ್ತವಲ್ಲವೇ?

English summary
Bangalore- Elevated parking space on existing roads and residential areas. Here is plan layout. The structure of plan designed will be made of interchangeable heavy engineering components, can be fitted & dismantled by heavy nut/bolts, even shifting structure possible, gives opportunity to utilize invested money. Estimated cost is around rupees 15 cr for the span designed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X