ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಚಂದ್ರ: ಶಾಲಾಮಕ್ಕಳೇ ಪಾಯಿಖಾನೆ ತೊಳೆಯುತ್ತಾರೆ

By ರಾಜೂ ದೇವರಹಟ್ಟಿ
|
Google Oneindia Kannada News

ತುಮಕೂರು, ಆಗಸ್ಟ್ 12: ಕಾನೂನು ರೂಪಿಸುವ ಕಾನೂನು ಸಚಿವರ ಸ್ವ ಕ್ಷೇತ್ರದಲ್ಲಿಯೇ ಮಕ್ಕಳ ರಕ್ಷಣಾ ಕಾನೂನಿಗೆ ಭಂಗ! ಶಾಲಾ ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರಕಾರ ನಾನಾ ಕಸರತ್ತು ಮಾಡುತ್ತದೆ. ಆದರೆ, ಸರಕಾರದ ಇಷ್ಟೆಲ್ಲಾ ಕಾಳಜಿಯ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ಟಿಬಿ ಜಯಚಂದ್ರ ಅವರ ಸ್ವಕ್ಷೇತ್ರದಲ್ಲಿ ಮಕ್ಕಳನ್ನು ಶಾಲೆಯಲ್ಲಿಯೇ ಅಕ್ಷರಶಃ ದುಡಿಮೆಗೆ ಹಚ್ಚಲಾಗಿದೆ!

ಶಿರಾ ತಾಲೂಕಿನ ಕರೇಕ್ಯಾತನಹಳ್ಳಿ ಸರಕಾರಿ ಶಾಲೆಯಲ್ಲಿ ಸಮವಸ್ತ್ರ ಧರಿಸಿದ ಮಕ್ಕಳು ಮರುಳು ತುಂಬಿದ ಬಾಂಡ್ಲಿಯನ್ನು ನಿತ್ಯ ತಲೆ ಮೇಲೆ ಹೊರಲೇಬೇಕು. ಶಾಲೆಯಲ್ಲಿರುವ ಪಾಯಿಖಾನೆ ತೊಳೆಯಬೇಕು. ಇದು ನಂಬಲು ಅಸಾಧ್ಯವಾದರೂ ನಂಬಬೇಕು.

ಮಕ್ಕಳಿಗೆ ಇದೆಂಥಾ ಶಿಕ್ಷೆ?
14 ವರ್ಷದೊಳಗಿನ ಮಕ್ಕಳು ಕಾರ್ಮಿಕರಾಗಿ ಕೆಲಸ ಮಾಡಬಾರದು ಎಂದು ಕಾನೂನು ಹೇಳುತ್ತದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಈ ಕಾನೂನು ಜಾರಿಯಲ್ಲಿದೆ. ಕಾರ್ಖಾನೆ, ಹೋಟೆಲ್ ಮತ್ತಿತರ ಕಡೆ ಇದು ರಾಜಾರೋಷವಾಗಿ ಕಂಡರೆ, ಅಧಿಕಾರಗಳು ತಕ್ಷಣ ಕ್ರಮಕ್ಕೆ ಮುಂದಾಗುತ್ತಾರೆ. ಆದರೆ, ಕರೇಕ್ಯಾತನಹಳ್ಳಿ ಶಾಲಾ ಮಕ್ಕಳ ತಂಟೆಗೆ ಯಾರೂ ಬರುವುದಿಲ್ಲ. ಕಲಿಯಲು ಬರುವ ಮಕ್ಕಳಿಗೆ ನಿತ್ಯ ಈ ಕಾಯಕಕ್ಕೆ ಹಚ್ಚುವ ಶಿಕ್ಷಕರು ಇದೊಂದು ಕೌಶಲ್ಯ ಶಿಕ್ಷಣ ಎಂದೇ ಭಾವಿಸಿರುವಂತಿದೆ.

ಶೌಚಾಲಯ ಕ್ಲೀನ್ ಮಾಡಿಸುವುದು ಎಷ್ಟು ಸರಿ?

ಶೌಚಾಲಯ ಕ್ಲೀನ್ ಮಾಡಿಸುವುದು ಎಷ್ಟು ಸರಿ?

ಮಕ್ಕಳನ್ನು ಶಾಲೆಗೆ ಕರೆ ತರಲು ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿರುವುದು ಸಮಂಜಸ. ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪುಸ್ತಕ ವಿತರಣೆ ಮಾಡಿ ಮಕ್ಕಳನ್ನು ಶಾಲೆಯತ್ತ ಮುಖ ಮಾಡುವಂತೆ ಯೋಜನೆ ರೂಪಿಸಿರುವುದು ಒಳ್ಳೆಯ ಕೆಲಸ. ಆದರೆ, ಶಾಲೆಗೆ ಬರುವ ಮುಗ್ಧ ಮಕ್ಕಳಿಂದ ಈ ರೀತಿ ಮಣ್ಣು ಎತ್ತಿಸುವುದು, ಶೌಚಾಲಯ ಕ್ಲೀನ್ ಮಾಡಿಸುವುದು ಎಷ್ಟು ಸರಿ? ಬಡ ಕುಟುಂಬದವರು ತಮ್ಮ ಮಕ್ಕಳು ಶಾಲೆಗೆ ಹೋಗಿ ಅಕ್ಷರ ಕಲಿತು ವಿದ್ಯಾವಂತರಾಗಿ ಎಂಬ ಆಸೆ ಇಟ್ಟುಕೊಂಡು ಸ್ಕೂಲಿಗೆ ಕಳಿಸುತ್ತಾರೆ.

ಆದರೆ, ಇಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ನೀಡುವ ಬದಲಾಗಿ ಮೈ ಮುರಿಯುವ ಕೆಲಸ ಕೊಡಲಾಗುತ್ತಿದೆ. ಓದಲು ಬಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಇದೆಂಥಾ ಶಿಕ್ಷೆ ಎಂಬ ಪ್ರಶ್ನೆ ಮೂಡುತ್ತದೆ.

ಶಿಕ್ಷಕರು ಹೇಳೋದೆ ಬೇರೆ!

ಶಿಕ್ಷಕರು ಹೇಳೋದೆ ಬೇರೆ!

ಆದರೆ, ಇಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ನೀಡುವ ಬದಲಾಗಿ ಮೈ ಮುರಿಯುವ ಕೆಲಸ ಕೊಡಲಾಗುತ್ತಿದೆ. ಓದಲು ಬಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಇದೆಂಥಾ ಶಿಕ್ಷೆ ಎಂಬ ಪ್ರಶ್ನೆ ಮೂಡುತ್ತದೆ.
ಈ ಬಗ್ಗೆ ಅಲ್ಲಿನ ಶಿಕ್ಷಕರನ್ನು ಪ್ರಶ್ನಿಸಿದರೆ ಅವರು ಹೇಳೋದೆ ಬೇರೆ. ಮಕ್ಕಳು ತಮ್ಮ ಶಾಲೆಯ ಕೆಲಸ ಮಾಡುವುದರಲ್ಲಿ ತಪ್ಪೇನಿದೆ? ಶಾಲೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮಕ್ಕಳ ಕರ್ತವ್ಯವಲ್ಲವೇ? ಎಂದು ಪ್ರಶ್ನಿಸುವ ದಾರ್ಷ್ಟ್ಯವನ್ನು ಶಿಕ್ಷಕರು ತೋರುತ್ತಾರೆ!

ಮಕ್ಕಳೇ ಕೆಲಸ ಮಾಡಬೇಕು ಎನ್ನುತ್ತದಾ ಸರಕಾರಿ ನಿಯಮ?

ಮಕ್ಕಳೇ ಕೆಲಸ ಮಾಡಬೇಕು ಎನ್ನುತ್ತದಾ ಸರಕಾರಿ ನಿಯಮ?

ಶಿಕ್ಷಕರು ಹೇಳೋ ಮಾತು ನಿಜ. ಆದರೆ, ಓದಲು ಬಂದ ಮಕ್ಕಳ ಕೈಲಿ ಕೆಲಸ ಮಾಡಿಸಬೇಕು, ಅವರಿಂದ ಶಾಲಾ ಆವರಣ ಸ್ವಚ್ಛಗೊಳಿಸಬೇಕು ಎಂಬ ನಿಯಮವನ್ನು ಸರಕಾರ ಜಾರಿ ಮಾಡಿಲ್ಲ ಎಂಬುದನ್ನು ಅರಿಯಬೇಕು. ಮಕ್ಕಳಿಗೆ ತೊಂದರೆಯಾಗದಂತೆ ಸಣ್ಣಪುಟ್ಟ ಕೆಲಸ ಮಾಡಿಸಿದ್ದರೆ ಯಾರೂ ಕೇಳುತ್ತಿರಲಿಲ್ಲ. ಬದಲಾಗಿ ಮಕ್ಕಳ ತಲೆ ಮೇಲೆ ಮಣ್ಣು ತುಂಬಿದ ಬಾಂಡ್ಲಿ ಹೊರಿಸುವುದು, ಶೌಚಾಲಯ ತೊಳೆಸುವುದು ಎಷ್ಟು ಸರಿ.

ಸೌದೆಯಲ್ಲಿ ಬಿಸಿಯೂಟ ಅಡುಗೆ!

ಸೌದೆಯಲ್ಲಿ ಬಿಸಿಯೂಟ ಅಡುಗೆ!

ಮಕ್ಕಳಿಗೆ ಮಧ್ಯಾಹ್ನ ನೀಡಲಾಗುವ ಬಿಸಿಯೂಟ ತಯಾರು ಮಾಡಲು ಇಲ್ಲಿ ಸೌದೆಯನ್ನೇ ಬಳಸಲಾಗುತ್ತಿದೆ. ಸರಕಾರ ಸಿಲಿಂಡರ್ ಕೊಟ್ಟಿದ್ದರೂ ಅದರಲ್ಲಿ ಅಡುಗೆ ಮಾಡದೆ ಸೌದೆ ಉಪಯೋಗಿಸುತ್ತಾರೆ. ಇದರಿಂದ ಶಾಲಾ ಕೊಠಡಿಗಳಲ್ಲಿ ಹೊಗೆ ತುಂಬಿ ಮಕ್ಕಳು ಕೆಮ್ಮುತ್ತಾರೆ. ಅಲ್ಲದೆ ಹೊಗೆಗೆ ಕಣ್ಣು ಹುರಿ ಬರುತ್ತದೆ. ಅದೆಲ್ಲವನ್ನು ಸಹಿಸಿಕೊಂಡು ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

ಸಚಿವರ ತವರಲ್ಲೇ ಸಂಕಟ

ಸಚಿವರ ತವರಲ್ಲೇ ಸಂಕಟ

ಅನ್ನ ಸಾಂಬಾರ್ ಮಾಡಿ ಕಲಸಿ ಅದನ್ನೇ ಮಕ್ಕಳಿಗೆ ಚಿತ್ರಾನ್ನ ಎಂದು ಬಡಿಸುತ್ತಾರೆ. ಇಲ್ಲಿ ಬಳಕೆಯಾಗದ ಸರಕಾರ ನೀಡುವ ಸಿಲಿಂಡರ್ ಯಾರ ಅಡುಗೆ ಮನೆ ಸೇರುತ್ತದೊ ಗೊತ್ತಿಲ್ಲ. ಹೀಗೆ ಒಂದಲ್ಲ ಎರಡಲ್ಲ, ಹತ್ತಾರು ಸಮಸ್ಯೆಗಳ ನಡುವೆ ಕರೇ ಕ್ಯಾತನಹಳ್ಳಿ ಸರಕಾರಿ ಶಾಲೆ ಮುಂದುವರಿಯುತ್ತಿದೆ. ನಮ್ಮ ಮಕ್ಕಳು ಶಾಲೆಗೆ ಕಲಿಯೋಕೆ ಹೋಗುತ್ತಿದ್ದಾರೊ? ಇಲ್ಲ ಕೂಲಿ ಮಾಡೋದಕ್ಕೆ ಸೇರಿದ್ದಾರೋ ಎಂಬ ಪ್ರಶ್ನೆ ಪೋಷಕರನ್ನು ಕಾಡತೊಡಗಿದೆ.
ಶಿರಾ ಕ್ಷೇತ್ರವನ್ನು ಮಾದರಿ ತಾಲೂಕನ್ನಾಗಿ ಮಾಡುತ್ತೇನೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ನನ್ನ ಮೊದಲ ಆದ್ಯತೆ ಎಂದು ಹೇಳುವ ಸಚಿವ ಟಿಬಿ ಜಯಚಂದ್ರ ಅವರ ತವರಲ್ಲೇ ಶಾಲಾ ಮಕ್ಕಳು ಅಂಗಳದಲ್ಲಿ ಮಣ್ಣು ಹೊತ್ತು ಸಂಕಟ ಪಡುತ್ತಿರುವುದು ನಿಜಕ್ಕೂ ದುರಂತ.

ಮಕ್ಕಳು ಜೀತದಾಳುಗಳಾಗಿ...

ಮಕ್ಕಳು ಜೀತದಾಳುಗಳಾಗಿ...

ಶಾಲೆಯಲ್ಲಿ ಕೂತು ಪಾಠ ಕೇಳುವ ವಯಸ್ಸಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಮಕ್ಕಳು ಸಿಲುಕಿ ನಲುಗುತ್ತಿದ್ದಾರೆ. ಈ ಶಾಲೆ ಬಗ್ಗೆ ಸಚಿವರು ಗಮನಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಮಕ್ಕಳ ಸ್ಥಿತಿ ಕಂಡು ಅಧಿಕಾರಿಗಳಾದರೂ ಸ್ಪಂದಿಸಬೇಕಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಿದೆ. ಉತ್ತಮ ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಒಂದು ಶಾಲೆಯಲ್ಲಿ ಈ ರೀತಿ ಮಕ್ಕಳನ್ನು ಕೆಲಸಕ್ಕೆ ದೂಡುವ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ಹೊಡೆತ ಕೊಡುವುದು ಎಷ್ಟು ಸರಿ? ಜಿಲ್ಲಾ ಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳಿಗೆ ಹಚ್ಚುವ ಕೆಲಸಕ್ಕೆ ಬ್ರೇಕ್ ಹಾಕಲಿ ಎಂಬುದು ಪೋಷಕರ ಒತ್ತಾಯ.

English summary
Tumkur Sira Kare Kyathanahalli govt school children are nothing but child labourers. That's what these pics exhibits. Tumkur District incharge Minister, state Law Minister, Senior Congress leader Mr. TB Jayachandra please have a look at these photographs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X