ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಮಂಡ್ಯ, ಚಿತ್ರದುರ್ಗ, ತುಮಕೂರು

By Mahesh
|
Google Oneindia Kannada News

ಬೆಂಗಳೂರು, ಆ.12: ಇಂದಿನ ಕ್ರೈಂ ನ್ಯೂಸ್ ಗಳ ಸಂಗ್ರಹದಲ್ಲಿ ಮಹಿಳೆ ನಾಪತ್ತೆ, ಹೆದ್ದಾರಿಯಲ್ಲಿ ಅಪಘಾತ, ಕೊಲೆ ಮುಂತಾದ ಪ್ರಕರಣಗಳ ಸುದ್ದಿಗಳಿವೆ. ಕೋಲಾರ, ಉಳ್ಳಾಲ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಬೆಂಗಳೂರು ಜಿಲ್ಲೆಗಳ ಆಯ್ದ ಚುಟುಕು ಕ್ರೈಂ ನ್ಯೂಸ್ ನಿಮಗಾಗಿ ಓದಿ...

ಗೃಹಿಣಿ ನಾಪತ್ತೆ: ಪತಿಯ ಕೈವಾಡ
ಮಂಡ್ಯ: ಗೃಹಿಣಿಯೋರ್ವಳು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಆಕೆಯ ತಂದೆ ಸಣ್ಣಪ್ಪ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

19ವರ್ಷದ ಮರಿದೇವಮ್ಮ(ಅಭಿಲಾಷ) ಅವರು ಕಳೆದ ಹತ್ತು ದಿನಗಳಿಂದ ತಾಲ್ಲೂಕಿನ ಗುಡುಗೇನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದಾರೆ. ಪತಿ ಕುಮಾರ್ ಎಂಬಾತ ತವರು ಮನೆಯಲ್ಲಿದ್ದ ಆಕೆಯನ್ನು ಧರ್ಮಸ್ಥಳಕ್ಕೆ ಕರೆದೊಯ್ಯುವುದಾಗಿ ದೂರವಾಣಿ ಕರೆ ಮಾಡಿದ್ದಾನೆ. ಆದರೆ ಇದೀಗ ಅಭಿಲಾಷ ಕಾಣೆಯಾಗಿದ್ದು, ಕುಮಾರ್ ನನ್ನು ಕೇಳಿದರೆ ನಾನು ಫೋನ್ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾನೆ. ಇತ್ತೀಚೆಗಷ್ಟೇ ಬೆಂಗಳೂರಿನ ಈಶ್ವರಪ್ಪ, ಶಿವಮ್ಮ ಎಂಬುವವರ ಪುತ್ರ ಕುಮಾರನಿಗೆ ಮದುವೆ ಮಾಡಿಕೊಡಲಾಗಿತ್ತು.

ನಾಪತ್ತೆಯಾದಾಗ ಪಿಂಕ್ ಬಣ್ಣದ ಚೂಡಿದಾರ ಮತ್ತು ಪ್ಯಾಂಟು ಧರಿಸಿದ್ದಾಳೆ. ಕಿವಿಯಲ್ಲಿ ಚಿನ್ನದ ಗುಂಡು, ಕತ್ತಿನಲ್ಲಿ ತಾಳಿ ಸಮೇತದ ಕರಿಮಣಿ ಸರ ಹಾಕಿದ್ದು, ಆಕೆಗೆ ಕನ್ನಡ ಓದಲು ಬರೆಯಲು ಬರುತ್ತದೆ. ದೃಡಕಾಯ ಶರೀರ, ದುಂಡು ಮುಖ, ಗೋದಿ ಬಣ್ಣ, ನಾಲ್ಕು ಮುಕ್ಕಾಲು ಅಡಿ ಎತ್ತರ ಈಕೆಯ ಚಹರೆ ಪತ್ತೆಯಾದಲ್ಲಿ ಕೆರಗೋಡು ಠಾಣೆ ಅಥವಾ ದೂ.9972148607 ಅಥವಾ 9945532634 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ. ವರದಿ : ರಾಜೇಶ್ ಕೊಂಡಾಪುರ

ರಾಜ್ಯದ ಕ್ರೈಂ ರೌಂಡಪ್ ಸುದ್ದಿಗಳಿಗೆ ಮುಂದಿನ ಚಿತ್ರ ಸುರಳಿ ಸರಿಸಿ ನೋಡಿ..

ಉಳ್ಳಾಲ

ಉಳ್ಳಾಲ

ಇಲ್ಲಿನ ತೊಕ್ಕೊಟ್ಟುವಿನಲ್ಲಿ ರೈಲು ಡಿಕ್ಕಿ ಹೊಡೆದು ಒರಿಸ್ಸಾ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೋಮವಾರ (ಆ.12) ನಡೆದಿದೆ.

ತೊಕ್ಕೊಟ್ಟು ಜಂಕ್ಷನ್ ನಿಂದ ಒಳಪೇಟೆ ಸಂಪರ್ಕಿಸುವ ರೈಲ್ವೇ ಕ್ರಾಸಿಂಗ್ ಬಳಿ ಅಪರಿಚಿತ ಶವ ಹಳಿ ಬದ್ದಿದೆ. ಸೋಮವಾರ ಬೆಳಗ್ಗೆ ಪತ್ತೆಯಾದ ಈ ಶವದ ಬಗ್ಗೆ ಇನ್ನಷ್ಟು ವಿವರಗಳು ತಿಳಿಯಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಹೇಳಿದ್ದಾರೆ. ಕಳೆದ ಒಂದು ವಾರದಲ್ಲಿ ಮೂವರು ರೈಲಿನಡಿಗೆ ಸಿಕ್ಕಿ ಜೀವ ಕಳಕೊಂಡಂತಾಗಿದೆ.
ಕೋಲಾರ

ಕೋಲಾರ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿದೆ.

ಕೋಲಾರ ತಾಲ್ಲೂಕು, ಶಾನಬೋಗನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ 11.30 ಗಂಟೆಯಲ್ಲಿ ಬಸಪ್ಪ ಬಿನ್ ಬುಡ್ಡಪ್ಪ ರವರನ್ನು ಅದೇ ಗ್ರಾಮದ ಶಿವಶಂಕರ್ ಮತ್ತು ಇತರರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕೈಗಳಲ್ಲಿ ಮಚ್ಚು, ದೊಣ್ಣೆ, ಸುತ್ತಿಗಗಳನ್ನು ಹಿಡಿದುಕೊಂಡು ಬಂದು ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ,ಜಾತಿ ನಿಂದನೆ ಮಾಡಿದ್ದು. ಈ ಕೃತ್ಯಕ್ಕೆ ಬಸಪ್ಪ ರವರು ನಿರ್ಮಿಸಿದ್ದ ಕಾಂಪೌಂಡ್ ಗೆ ಸಂಬಂಧಿಸಿದಂತೆ ಪರಸ್ಪರರು ಜಗಳ ಮಾಡಿಕೊಂಡು, ಹಲ್ಲೆ ಮಾಡಿಕೊಂಡಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 295/2013 ಕಲಂ; 417 420 ಐಪಿಸಿ - ಆಪಾದಿತ ರಘುಮೂರ್ತಿ ಬೀರನಹಳ್ಳಿ ವಾಸಿ ಈತ ಪಿರ್ಯಾದಿ ಬೆಳವಾಡಿ ಗ್ರಾಮ ವಾಸಿ ಲಕ್ಷ್ಮಿ ಈಗ್ಗೆ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಗೆ ನಿರ್ಧರಿಸುತ್ತಾರೆ.

ಸಖರಾಯಪಟ್ಟಣದ ಚೌಡಮ್ಮ ದೇವಸ್ಥಾನದಲ್ಲಿ ತಾಳಿ ಕಟ್ಟಿ ಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಳ್ಳುವುದಾಗಿ ರಘುಮೂರ್ತಿ ಭರವಸೆ ನೀಡುತ್ತಾನೆ.

ಆದರೆ, ಲಕ್ಷ್ಮಿ ಜತೆ ಪ್ರೀತಿಯಿಂದ ದೈಹಿಕ ಸಂಪರ್ಕ ಇಟ್ಟುಕೊಂಡು ನಂತರ ಆಪಾದಿತನು ಅವರ ಊರಾದ ಬೀರನಹಳ್ಳಿಗೆ ಹೋಗಿ ಇದ್ದು ಆಗ - ಈಗ ಕರೆದುಕೊಂಡು ಹೋಗುತ್ತೇನೆಂದು ನೆಪ ಹೇಳಿ ತಪ್ಪಿಸಿಕೊಂಡಿರುತ್ತಾನೆ.

ಮದುವೆ ನಮ್ಮ ತಂದೆ ತಾಯಿ ಒಪ್ಪುತ್ತಿಲ್ಲ ಎಂದು ಫೋನ್ ಕರೆ ಮಾಡಿ ಹೇಳಿದ್ದಾನೆ. ಈಗ ಬೇರೆ ಹುಡುಗಿಯನ್ನು ಮದುವೆ ಆಗುವುದಾಗಿ ತಿಳಿದಿದ್ದು ನನಗೆ ವಂಚಿಸಿ ನನ್ನನ್ನು ಮದುವೆಯಾಗದೆ ಮೋಸ ಮಾಡಿರುತ್ತಾನೆ ಎಂದು ಲಕ್ಷ್ಮಿ ದೂರು ನೀಡಿದ್ದಾರೆ.
ಚಿತ್ರದುರ್ಗ

ಚಿತ್ರದುರ್ಗ

ಗಂಡ, ಅತ್ತೆ, ಮಾವ ಮತ್ತು ಮೈದುನ ಸೇರಿಕೊಂಡು ಗೃಹಿಣಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಕೇಳಲು ಬಂದ ಗೃಹಿಣಿಯ ತಂದೆ ಮಾವಂದಿರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಮೆದೇಹಳ್ಳಿ ವಾಸಿ ಪೂಜಾ (21) ಎಂಬುವವರು ಮೂರು ವರ್ಷಗಳ ಹಿಂದೆ ಮಲ್ಲಾಪುರ ವಾಸಿ ಹನುಮಂತರೆಡ್ಡಿ ಎಂಬುವರನ್ನು ಮದುವೆಯಾಗಿದ್ದು, ಒಂದು ಗಂಡು ಮಗು ಇರುತ್ತದೆ. ಮದುವೆ ಕಾಲದಲ್ಲಿ ವರದಕ್ಷಿಣೆ ಹಾಗೂ ಇತರೆ ಖರ್ಚುಗಳನ್ನು ಮಾಡಿ ಮದುವೆಯಾಗಿದ್ದು, ಮತ್ತೆ ಹಣಕ್ಕಾಗಿ ಪೂಜಾರವರ ಮಾವ ಗುರುವಾರೆಡ್ಡಿ, ಅತ್ತೆ ತಿಮ್ಮಕ್ಕ, ಮೈದುನ ಬಾಬು ಹಾಗೂ ಗಂಡ ಹನುಮಂತರೆಡ್ಡಿ ಆಗಾಗ ಕಿರುಕುಳ ನೀಡುತ್ತಿದ್ದಾರೆ.

ಇದನ್ನು ಕೇಳಲು ಬಂದ ಪೂಜಾಳ ತಂದೆ ಮತ್ತು ಭಾವಂದಿರಿಗೆ ಎಲ್ಲರೂ ಸೇರಿಕೊಂಡು ಕೊಡಲಿ, ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ ಎಂದು ಪೂಜಾರವರು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

English summary
Karnataka Todays Crime beat news : A women from Gudugenahalli village missing, complaint registered in Keragod police station limits, Mandya and More crime report from across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X