ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಅಗ್ನಿ ಶಿಶು, ವೈದ್ಯ ಲೋಕದ ಅಚ್ಚರಿ!

|
Google Oneindia Kannada News

child
ಚೆನ್ನೈ, ಆ.11 : ತಮಿಳುನಾಡಿನ ಮೂರು ತಿಂಗಳ ಹಸುಗೂಸೊಂದು ಚರ್ಮರಂಧ್ರಗಳ ಮೂಲಕ ಆಗಾಗ್ಗೆ ಅನಿಲ ವಿಸರ್ಜಿಸುತ್ತಿದೆ. ಇದರಿಂದಾಗಿ ಮಗುವಿನ ದೇಹ ನಾಲ್ಕು ಬಾರಿ ಸುಟ್ಟುಹೋಗಿದ್ದು, ವೈದ್ಯಕೀಯ ಲೋಕದ ಅಚ್ಚರಿಗೆ ಕಾರಣವಾಗಿದೆ.

ಚೆನ್ನೈನ ಕಿಲೌಕ್‌ ವೈದ್ಯ ಕಾಲೇಜಿನ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕ್ಷಿಪ್ರ ಮಾನವ ದಹನ ಸಮಸ್ಯೆಯಿಂದ ಮಗು ಬಳಲುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಕಳೆದ 300 ವರ್ಷಗಳ ಅವಧಿಯಲ್ಲಿ ವಿಶ್ವದ 200 ಮಂದಿಯಲ್ಲಿ ಮಾತ್ರ ಈ ತೊಂದರೆ ಕಾಣಿಸಿದೆಯಂತೆ.

ರಾಹುಲ್‌ ಎಂಬ ಈ ಮಗುವಿಗೆ 9 ದಿನದವನಿದ್ದಾಗ ಮೊದಲು ಬೆಂಕಿ ಕಾಣಿಸಿಕೊಂಡು ಮೈ ಸುಟ್ಟು ಹೋಗಿತ್ತು. ಮಗುವಿನ ಸುತ್ತ ಸುಡುವ ವಸ್ತು ಇಲ್ಲದಿದ್ದರೂ, ಮಗು ಮೈ ಸುಟ್ಟು ಹೋಗಿದ್ದು, ರಾಹುಲ್ ತಾಯಿ ರಾಜೇಶ್ವರಿ ಅವರಿಗೆ ಅಚ್ಚರಿ ಮೂಡಿಸಿತ್ತು.

ನಂತರ ರಾಹುಲ್ ನನ್ನು ವಿಲ್ಲುಪುರಂನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಮೂರು ದಿನ ಚಿಕಿತ್ಸೆ ನಿಡಿದ ವೈದ್ಯರು ನಂತರ ಮನೆಗೆ ಕಳುಹಿಸಿದ್ದರು. ಆಸ್ಪತ್ರೆಯಲ್ಲಿ ಮಗುವಿಗೆ ಏನು ಆಗಿರಲಿಲ್ಲ.

15 ದಿನಗಳ ಹಿಂದೆ ಮಗುವಿನ ತಲೆಯಿಂದ ಕಾಲಿನವರೆಗೂ ಬೆಂಕಿ ಕಾಣಿಸಿಕೊಂಡು, ದೇಹ ಸುಟ್ಟುಹೋಗಿದೆ. ಆದ್ದರಿಂದ ಕಿಲೌಕ್‌ ವೈದ್ಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಅನಿಲ ವಿಸರ್ಜನೆ : ರಾಹುಲ್ ಚರ್ಮದ ರಂಧ್ರಗಳ ಮೂಲಕ ಬೆಂಕಿ ಹೊತ್ತಿಕೊಳ್ಳುಲು ಅನುಕೂಲವಾಗುವಂತಹ ಅನಿಲ ಹೊರಬರುತ್ತದೆ. ಆದ್ದರಿಂದ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಆಸ್ಪತ್ರೆಯ ಡಾ. ನಾರಾಯಣ ಬಾಬು ಹೇಳಿದ್ದಾರೆ. ಆದರೆ, ಅನಿಲ ಯಾವುದು ಎಂದು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ರಾಹುಲ್‌ ಪ್ರಕರಣ ಚೆನ್ನೈನ ವೈದ್ಯರಿಗೆ ಅಚ್ಚರಿ ಉಂಟುಮಾಡಿದೆ. ಹಲವಾರು ತಜ್ಞ ವೈದ್ಯರು ಆಸ್ಪತ್ರೆಗೆ ಆಗಮಿಸಿ ಮಗುವಿನ ಪರೀಕ್ಷೆ ನಡೆಸುತ್ತಿದ್ದಾರೆ. ಮನುಷ್ಯನ ದೇಹದಲ್ಲಿ ಸ್ಪಲ್ಪ ಆಲ್ಕೋಹಾಲ್‌ ಇರುತ್ತದೆ. ಅದರ ಪ್ರಮಾಣ ಜಾಸ್ತಿಯಾಗಿ, ಅನಿಲದ ಜತೆ ಸೇರಿಕೊಂಡರೆ, ಸುಟ್ಟ ಗಾಯಗಳಾಗುತ್ತವೆ ಎಂದು ಕೆಲವು ವೈದ್ಯರು ವಿಶ್ಲೇಷಿಸಿದ್ದಾರೆ.

ಹಿಂದಿನ ಪ್ರಕರಣ : 1995ರಲ್ಲಿ ಇಂಗ್ಲೆಂಡ್‌ನ‌ಲ್ಲಿ 73 ವರ್ಷದ ವೃದ್ಧರೊಬ್ಬರು ಮಲಗಿದ್ದಾಗಲೇ ಇಂತಹ ಸಮಸ್ಯೆಗೆ ತುತ್ತಾಗಿದ್ದರು. ನಿದ್ರಿಸುವಾಗಲೇ ಅವರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು. ಈ ಮಾದರಿಯ ಕಾಯಿಲೆ ಮತ್ತೆ ಕಾಣಿಸಿಕೊಂಡಿರಲಿಲ್ಲ ಎಂಬುದು ವೈದ್ಯರ ವಿವರಣೆ. [ತಿಂಗಳ ಮಗು ನಡೆಯುತ್ತಂತೆ, ಬೆಂಕಿ ಉಗುಳುತ್ತಂತೆ]

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

English summary
Karnan and Rajeswari were shocked to see their two-month-old son Rahul on fire for the first time. They woke up to the gravity of the situation when the incident repeated itself. Rahul has been admitted to Kilpauk Medical College Hospital Chennai. Doctors said, child was suffering from spontaneous human combustion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X