ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ ಡೈರೆಕ್ಟ್ ಜೊತೆ ರಿಲಯನ್ಸ್ ಡಿಟಿಎಚ್ ವಿಲೀನ?

|
Google Oneindia Kannada News

dth
ನವದೆಹಲಿ, ಆ.11 : ಡಿಟಿಎಚ್ ಸೇವೆ ಒದಗಿಸುತ್ತಿರುವ ರಿಲಯನ್ಸ್ ಡಿಜಿಟಲ್ ಶೀಘ್ರವೇ ಸನ್ ನೆಟ್ ವರ್ಕ್ ಒಡೆತನದ ಸನ್ ಡೈರೆಕ್ಟ್ ಜೊತೆ ವಿಲೀನಗೊಳ್ಳಲಿದೆ. ವಿಲೀನಗೊಂಡ ಕಂಪನಿಯು ದೇಶದ ಡಿಟಿಎಚ್ ಕ್ಷೇತ್ರದಲ್ಲಿ ಎರಡನೇ ಅತಿ ದೊಡ್ಡ ಉದ್ಯಮವಾಗಿ ಹೊರಹೊಮ್ಮಲಿದೆ.

ರಿಲಯನ್ಸ್ ಡಿಜಿಟಲ್ ಅನ್ನು ಸನ್ ನೆಟ್ ವರ್ಕ್ ಜೊತೆ ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆಕಿದ್ದು, ಶೀಘ್ರದಲ್ಲೇ ಈ ಕುರಿತು ಅಂತಿಮ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಎರಡೂ ಕಂಪನಿಗಳ ವಿಲೀನದಿಂದ ದೇಶದ ಡಿಟಿಎಚ್ ಉದ್ಯಮದಲ್ಲಿ ಭಾರೀ ಬದಲಾವಣೆ ಆಗುವ ನಿರೀಕ್ಷೆ ಇದೆ.

ಸನ್ ಡೈರೆಕ್ಟ್ ಜೊತೆ ವಿಲೀನಗೊಂಡ ಬಳಿಕ ರಿಲಯನ್ಸ್ ಕಮ್ಯೂನಿಕೇಷನ್ಸ್ ಆರಂಭದಲ್ಲಿ ಶೇ 26ರಷ್ಟು ಷೇರು ಹೊಂದಿರಲಿದೆ. ಸದ್ಯ ರಿಲಯನ್ಸ್ ಡಿಜಿಟಲ್ ಹೊಂದಿರುವ 1500ಕೋಟಿ ಸಾಲವನ್ನು ಸನ್ ಡೈರೆಕ್ಟ್ ನಲ್ಲಿ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.

ಒಪ್ಪಂದದಂತೆ ಸನ್ ನೆಟ್ ವರ್ಕ್ ಹಂತಹಂತವಾಗಿ ಸಾರ್ವಜನಕ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಷೇರು ಮಾರಾಟದ ನಂತರ ರಿಲಯನ್ಸ್ ಕಮ್ಯುನಿಕೇಷನ್ ನಿಧಾನವಾಗಿ ಕಂಪನಿಯ ಮೇಲಿನ ಸಂಪೂರ್ಣ ಒಡೆತನವನ್ನು ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ರಿಲಯನ್ಸ್ ಡಿಟಿಎಚ್ ಶೇ 41 ಗ್ರಾಹಕರನ್ನು ಹೊಂದಿದೆ. ಸನ್ ಡೈರೆಕ್ಟ್ 85 ಲಕ್ಷ ಗ್ರಾಹಕರನ್ನು ಹೊಂದಿದೆ. ಉತ್ತರ ಭಾರತದಲ್ಲಿ ರಿಲಯನ್ಸ್ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದು ಸನ್ ಗ್ರೂಪ್ ನ ಮಾರುಕಟ್ಟೆ ಬೆಳವಣಿಗೆಗೂ ಸಹಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಿಲಯನ್ಸ್ ಮತ್ತು ನಸ್ ಡೈರೆಕ್ಟ್ ವಿಲೀನಗೊಂಡರೆ ಎರಡೂ ಕಂಪನಿಗಳ ಡಿಟಿಎಚ್ ಗ್ರಾಹಕರ ಮಾಸಿಕ ಶುಲ್ಕದಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಒಪ್ಪಂದದ ಅಧಿಕೃತ ಪ್ರಕಟಣೆ ಹೊರಬಿದ್ದ ಬಳಿಕ ಈ ಕುರಿತು ಅಂತಿಮ ಚಿತ್ರಣ ಲಭ್ಯವಾಗಲಿದೆ.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

English summary
Reliance Digital TV, the fully-owned subsidiary of Reliance Communications runs its direct-to-home (DTH) operations, will merge with Sun Direct to become India's second largest DTH company. Under the deal, to be announced in a few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X