• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂ.ಜಿ.ರಸ್ತೆಯಲ್ಲಿ ಶೀಘ್ರವೇ ಉಚಿತ ವೈ-ಫೈ ಸೇವೆ

|

ಬೆಂಗಳೂರು, ಆ.10 : ಮಹಾನಗರ ಬೆಂಗಳೂರಿನ ಪ್ರತಿಷ್ಠಿತ ಮಹಾತ್ಮಗಾಂಧಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳು ಮತ್ತಷ್ಟು ಹೈಟೆಕ್ ಆಗಲಿವೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ಎರಡೂ ರಸ್ತೆಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಲಭ್ಯವಾಗಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2013-14ನೇ ಸಾಲಿನ ಬಜೆಟ್ ನಲ್ಲಿ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಜನರಿಗೆ ಸಹಾಯಕವಾಗಲು ಉಚಿತ ವೈ-ಫೈ ಸೌಲಭ್ಯ ಒದಗಿಸಲಾಗುವುದು ಎಂದು ಘೋಷಿಸಿದ್ದರು. ಇದು ಕಾರ್ಯರೂಪಕ್ಕೆ ಬಂದಿದ್ದು, ಆಗಸ್ಟ್ ಅಂತ್ಯದಲ್ಲಿ ಜನರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಈ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು. ಆಗಸ್ಟ್ ಅಂತ್ಯದ ವೇಳೆಗೆ ಈ ರಸ್ತೆಗಳ 2.5 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುವ ಜನರಿಗೆ 256 ಕೆಬಿಪಿಎಸ್‌ ವೇಗದ ಉಚಿತ ವೈ-ಫೈ ಸೇವೆ ಲಭ್ಯವಾಗಲಿವೆ. ಇದರಿಂದಾಗಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳು ಮತ್ತಷ್ಟು ಹೈಟೆಕ್ ಆಗಲಿವೆ.

ವೈ-ಫೈ ಸೇವೆ ಬಗ್ಗೆ ಮಾಹಿತಿ ನೀಡಿರುವ ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್, ಲೋಕಸಭೆ ಉಪ ಚುನಾವಣೆ ಬಳಿಕ ಈ ಸೇವೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಸೇವೆ ಒದಗಿಸುವ ಕುರಿತು ಕೆಲ ನಿಯಮ ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ. ಉಚಿತ ವೈಫೈ ಸೇವೆ ಒಂದಷ್ಟು ಮಾಹಿತಿ ಇಲ್ಲಿದೆ.

(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

ಮೋಹನ್‌ದಾಸ್‌ ಪೈ ಅವರ ಕನಸು

ಮೋಹನ್‌ದಾಸ್‌ ಪೈ ಅವರ ಕನಸು

ಈ ಉಚಿತ ವೈ-ಪೈ ಸೇವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸಮಿತಿ ಅಧ್ಯಕ್ಷ ಮೋಹನ್‌ದಾಸ್‌ ಪೈ ಅವರ ಕನಸು. 2012ರ ಜನವರಿಯಲ್ಲಿ ಐಸಿಟಿ ಸಮಿತಿ ಎರಡೂ ರಸ್ತೆಗಳಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವೈ-ಫೈ ಸೇವೆ ಆರಂಭಿಸುವ ಕುರಿತು ಸರ್ಕಾರಕ್ಕೆ ವರದಿ ನೀಡಿತ್ತು.

ಬಜೆಟ್ ನಲ್ಲಿ ಘೋಷಣೆ

ಬಜೆಟ್ ನಲ್ಲಿ ಘೋಷಣೆ

ಐಸಿಟಿ ಸಮಿತಿಯ ವರದಿ ಆಧರಿಸಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವುದಾಗಿ ಘೋಷಿಸಿದ್ದರು. ಬಜೆಟ್‌ ಅನುಷ್ಠಾನದ ಹಿನ್ನೆಲೆಯಲ್ಲಿ ಐಟಿ-ಬಿಟಿ ಇಲಾಖೆ ಡಿ-ವಿಒಐಎಸ್‌ ಬ್ರಾಡ್‌ಬ್ಯಾಂಡ್‌ ಕಂಪನಿಗೆ ವೈ-ಫೈ ಸೇವೆ ಒದಗಿಸಲು ನಿರ್ದೇಶನ ನೀಡಿತ್ತು. ಇದರ ಸಿದ್ಧತೆ ಪೂರ್ಣಗೊಂಡಿದ್ದು, ಸರ್ಕಾರ ಸೇವೆ ಒದಗಿಸುವ ಕುರಿತು ಸೂಕ್ತ ಮಾಗದರ್ಶನಗಳನ್ನು ರೂಪಿಸಿ, ಯೋಜನೆಯನ್ನು ಪ್ರಾರಂಭಿಸಲಿದೆ.

ವೈ-ಪೈ ವೇಗವೆಷ್ಟು

ವೈ-ಪೈ ವೇಗವೆಷ್ಟು

ಸುಮಾರು 2.5ಕಿ.ಮೀ ವ್ಯಾಪ್ತಿಯಲ್ಲಿ ವೈ-ಫೈಸೇವೆ ಲಭ್ಯವಾಗಲಿವೆ. ಇದಕ್ಕಾಗಿ ಎಂ.ಜಿ. ರಸ್ತೆಯಲ್ಲಿ 20 ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ 4 ಆಕ್ಸೆಸ್ (ಹಾಟ್ ಸ್ಪಾಟ್ ) ಪಾಯಿಂಟ್ ಗಳನ್ನು ಆಳವಡಿಸಲಾಗುತ್ತಿದೆ. ಪ್ರಾರಂಭದಲ್ಲಿ 256 ಕೆಬಿಪಿಎಸ್‌ ವೇಗದಲ್ಲಿ ಸೇವೆ ಲಭ್ಯವಿರುತ್ತದೆ. ಬೇಡಿಕೆಗೆ ಅನುಗುಣವಾಗಿ ವೇಗ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.

 ಹಿಂದೆಯೂ ಪ್ರಸ್ತಾವನೆ ಇತ್ತು

ಹಿಂದೆಯೂ ಪ್ರಸ್ತಾವನೆ ಇತ್ತು

2010 ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಐಟಿಪಿಎಲ್‌ ಹಾಗೂ ಏರ್ ಪೋರ್ಟ್‌ಗೆ ಸಂಚರಿಸುವ ವಾಯುವಜ್ರ ಬಸ್‌ ಸೀಟುಗಳ ಹಿಂದಿರುವ 7 ಇಂಚಿನ ಎಲ್‌ಸಿಡಿ ಪರದೆಗೆ ವೈ-ಫೈ ಸೇವೆ ಒದಗಿಸಲು ಮುಂದಾಗಿತ್ತು. ಆದರೆ, ಅದು ಅನುಷ್ಠಾನಗೊಂಡಿರಲಿಲ್ಲ. 2006 ರಲ್ಲಿ ನಗರಾದ್ಯಂತ ವೈ-ಫೈ ಸೇವೆ ಒದಗಿಸಲು ಯೋಜನೆ ಸಹ ರೂಪಗೊಂಡಿತ್ತು.

ಯಾರು ಬಳಸಬಹುದು

ಯಾರು ಬಳಸಬಹುದು

ವೈ-ಫೈ ಆಪ್ಷನ್‌ ಹೊಂದಿರುವ ಪರ್ಸನಲ್‌ ಕಂಪ್ಯೂಟರ್‌, ವಿಡಿಯೋ ಗೇಮ್ಸ್‌ ಕನ್ಸೋಲ್ಸ್‌, ಸ್ಮಾರ್ಟ್‌ಫೋನ್‌, ಕೆಲವು ಡಿಜಿಟಲ್‌ ಕ್ಯಾಮೆರಾ, ಟ್ಯಾಬ್ಲೆಟ್‌, ಡಿಜಿಟಲ್‌ ಆಡಿಯೋ ಪ್ಲೇಯರ್ ಬಳಕೆದಾರರು ಉಚಿತವಾಗಿ ಈ ಸೇವೆಯನ್ನು ಪಡೆಯಬಹುದು. ವೈ-ಫೈ ಸೇವೆಯ ಬಳಕೆಯ ಕುರಿತು ಸರ್ಕಾರ ಮಾರ್ಗಸೂಚಿ ತಯಾರಿಸಿದ ನಂತರ ಸೇವೆ ಪ್ರಾರಂಭವಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Free wireless internet services are expected to commence in the Mahatma Gandhi Road and Brigade Road Bangalore in August month end. Free Wi-Fi access as part of a plan to make Bangalore the first city to have such a service available at public spots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more