ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗೇರಿದ ರಂಜಾನ್ ಸಂಭ್ರಮ ಚಿತ್ರಗಳು

By Mahesh
|
Google Oneindia Kannada News

ಬೆಂಗಳೂರು,ಆ.9: ಪವಿತ್ರ ರಂಜಾನ್ ಮಾಸಾಚಾರಣೆ ಶುಕ್ರವಾರದ ಬೆಳಗ್ಗಿನ ಪ್ರಾರ್ಥನೆಯೊಂದಿಗೆ ಕೊನೆಗೊಂಡಿದೆ. ಈದ್ ಉಲ್ ಫಿತ್ರ್ ಆಚರಣೆಯಲ್ಲಿ ವಿಶ್ವದ ಅನೇಕ ದೇಶಗಳು ತೊಡಗಿವೆ. ರಾಜ್ಯಾದ್ಯಂತ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ.

ಎಲ್ಲ ದರ್ಗಾಗಳಲ್ಲಿ, ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೆಂಗಳೂರು ನಗರಾದ್ಯಂತ ರಂಜಾನ್ ಸಡಗರ ಮನೆ ಮಾಡಿತ್ತು. ಶಿವಾಜಿನಗರದ ಮಿಲ್ಲರ್ ರಸ್ತೆಯಲ್ಲಿರುವ ಈದ್ಗಾ ಮೈದಾನ, ಚಾಮರಾಜಪೇಟೆಯ ಈದ್ಗಾ ಮೈದಾನ, ಮೈಸೂರು ರಸ್ತೆಯಲ್ಲಿರುವ ಮಸೀದಿಗೆ ಮುಸ್ಲಿಂ ಬಾಂಧವರು ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಂಗಿಸಿ ರಂಜಾನ್ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ಮಿಲ್ಲರ್ ರಸ್ತೆಯ ಈದ್ಗಾ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ರೋಷನ್ ಬೇಗ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮುಂತಾದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಮುಸ್ಲಿಂ ಬಾಂಧವರಿಗೂ ರಂಜಾನ್ ಹಬ್ಬದ ಶುಭಾಶಯ ಕೋರಿದರು.

ಕಾರವಾರದಲ್ಲಿ ರಂಜಾನ್ ಸಂಭ್ರಮ ಮುಗಿಲು ಮುಟ್ಟಿತು. ಬಳ್ಳಾರಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಬಿಎಸ್ಆರ್ ಪಕ್ಷದ ಸಂಸ್ಥಾಪಕ ಶ್ರೀರಾಮಲು ಭಾಗವಹಿಸಿದ್ದರು. ಚಾಮರಾಜನಗರ ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲೆಡೆ ಮುಸ್ಲಿಂ ಬಾಂಧವರು ಸಂಭ್ರಮ-ಸಡಗರದಿಂದ ಆಚರಿಸಿದರು. ದೇಶ,ವಿದೇಶಗಳಲ್ಲಿ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ ನೋಡಿ..

 ಕರ್ನಾಟಕದಲ್ಲಿ

ಕರ್ನಾಟಕದಲ್ಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ

ಸಿಎಂ ಸಿದ್ದು ಶುಭ ಹಾರೈಕೆ

ಸಿಎಂ ಸಿದ್ದು ಶುಭ ಹಾರೈಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.

ಸಿದ್ದು ಶುಭ ಹಾರೈಕೆ

ಸಿದ್ದು ಶುಭ ಹಾರೈಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಐತಿಹಾಸಿಕ ಚಾರ್ಮಿನಾರ್ ಬಳಿ ಈದ್ ಹಬ್ಬದ ಅಂಗವಾಗಿ ಗುರುವಾರ ರಾತ್ರಿಯಿಂದಲೇ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ಫಿಲಿಫೈನ್ಸ್ ನಲ್ಲಿ

ಫಿಲಿಫೈನ್ಸ್ ನಲ್ಲಿ

ಫಿಲಿಫೈನ್ಸ್ ನ ಮನೀಲಾದ ಪೂರ್ವದಲ್ಲಿರುವ Taguig ನಗರದಲ್ಲಿ ಮುಸ್ಲಿಮರು ಬ್ಲೂ ಮಸೀದಿ ಬಳಿ ಈದ್ ಸಂಭ್ರಮಾಚರಣೆ ಮಾಡಿದ್ದಾರೆ

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ

ಪವಿತ್ರ ನಾಖೋಡಾ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಶ್ರೀನಗರದಲ್ಲಿ

ಶ್ರೀನಗರದಲ್ಲಿ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಈದ್ ಉಲ್ ಫಿತ್ರ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. PTI Photo By S Irfan

ದೆಹಲಿಯಲ್ಲಿ

ದೆಹಲಿಯಲ್ಲಿ

ದೆಹಲಿಯ ಪ್ರಸಿದ್ಧ ಜಮಾ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಕಂಡು ಬಂದ ನಮಾಜಿನ ದೃಶ್ಯ PTI Photo by Atul Yadav


English summary
The holy month of Ramzan has come to an end on Friday as Muslims across India and the world were celebrating Eid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X