ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗೆ ಉಗ್ರ ಹಫೀಜ್ ನಿಂದ ದಾಳಿ ಬೆದರಿಕೆ

By Mahesh
|
Google Oneindia Kannada News

ನವದೆಹಲಿ, ಆ.9 : ಸ್ವತಂತ್ರ ದಿನಾಚರಣೆಯಂದು ಐತಿಹಾಸಿಕ ಕೆಂಪುಕೋಟೆ ಹಾಗೂ ಸಂಸತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಗುವು ಎಂದು ಪಾಕಿಸ್ತಾನದ ಕುಖ್ಯಾತ ಉಗ್ರ ಹಫೀದ್ ಸಯಿದ್ ಎಚ್ಚರಿಕೆ ನೀಡಿದ್ದಾನೆ. ಹೀಗಾಗಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕೆಂಪುಕೋಟೆ, ಸಂಸತ್ ಭವನ, ರಾಷ್ಟ್ರಪತಿ ಭವನ, ರೈಲ್ವೆ ಭವನ, ವಿಮಾನ ನಿಲ್ದಾಣ, ಪ್ರಧಾನಿ ನಿವಾಸ, ರಾಯಭಾರಿ ಕಚೇರಿಗಳು, ರೈಲ್ವೆ, ಬಸ್ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಗುಪ್ತಚರ ಇಲಾಖೆ ವರದಿ ಆಧಾರದ ಮೇಲೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಎಲ್ಲಾ ರಾಜ್ಯಸರ್ಕಾರಗಳಿಗೂ ಸೂಚನೆ ನೀಡಿದ್ದು, ಆಗಸ್ಟ್ 15ರಂದು ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಬೇಕೆಂದು ಸೂಚನೆ ನೀಡಿದೆ.

ಲಷ್ಕರ್-ಇ-ತೊಯ್ಬಾ ಮಾತೃಸಂಸ್ಥೆ ಜಮಾತ್-ಉದ್-ದಾವಾದ ಸಂಸ್ಥಾಪಕ ಹಫೀದ್ ಸಯ್ಯದ್ ಕೆಂಪುಕೋಟೆ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ಸಂಸತ್ ಸೇರಿದಂತೆ ಮತ್ತಿತರ ಕಡೆ ನಡೆಸಿದ ದಾಳಿ ಮಾದರಿಯಲ್ಲೇ ಆ.15ರಂದು ದಾಳಿ ನಡೆಸಲಾಗುವುದೆಂದು ಬೆದರಿಕೆ ಹಾಕಿರುವುದನ್ನು ಗುಪ್ತಚರ ಹಾಗೂ ಗೃಹ ಇಲಾಖೆ ಅಕಾರಿಗಳು ಶುಕ್ರವಾರ ಖಚಿತಪಡಿಸಿದ್ದಾರೆ.

Hafiz Saeed threatens to attack India

ಸಂಸತ್, ಗುರುದ್ವಾರ, ರಖಬ್ಗಂಜ್, ಆಲ್ ಇಂಡಿಯಾ ರೇಡಿಯೋ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಲಾಗುವುದು. ಇದಕ್ಕಾಗಿ ಆತ್ಮಾಹುತಿ ಬಾಂಬರ್ಗಳನ್ನು ಸಿದ್ಧಪಡಿಸಿರುವುದಾಗಿ ಹಫೀದ್ ಸಯ್ಯದ್ ಸಿದ್ಧಪಡಿಸಿದ್ದಾನೆಂದು ಮೂಲಗಳು ತಿಳಿಸಿವೆ.

ನವದೆಹಲಿಯಲ್ಲಿರುವ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ರಾಯಭಾರಿ ಕಚೇರಿಗಳು, ವಿದೇಶಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗುವುದು. ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಮೂಲಕ ತರಬೇತಿ ಪಡೆದಿರುವ ಉಗ್ರರನ್ನು ಒಳನುಸುಳಲು ಸೂಚನೆ ನೀಡಲಾಗಿದೆ. ಉಗ್ರರು ಮತ್ತು ಹಫೀದ್ ಸಯ್ಯದ್ ನಡುವೆ ನಡೆದಿರುವ ಮಾತುಕತೆಯ ಸಂಭಾಷಣೆ ವಿವರಗಳನ್ನು ಗುಪ್ತಚರ ಇಲಾಖೆ ಅಕಾರಿಗಳು ಪತ್ತೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಗುಪ್ತಚರ ಇಲಾಖೆಗೆ ಪತ್ರ ಬರೆದಿದ್ದು, ಭದ್ರತೆ ಹೆಚ್ಚಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.

ಮುಂಬೈ ಮೇಲೆ 2008 ನವೆಂಬರ್ 26ರಂದು ನಡೆದ ದಾಳಿಯ ಪ್ರಮುಖ ರೂವಾರಿ ಕುಖ್ಯಾತ ಉಗ್ರ ಹಫೀದ್ ಸಯ್ಯದ್ ಪಾಕಿಸ್ತಾನದ ಲಾಹೋರ್ ನಲ್ಲಿ ರಂಜಾನ್ ಪ್ರಾರ್ಥನೆಯನ್ನು ಮುನ್ನಡೆಸಿದ್ದಾನೆ. ಪಾಕಿಸ್ತಾನದ ಲಾಹೋರ್ ನಲ್ಲಿರುವ ಐತಿಹಾಸಿಕ ಗಡಾಫಿ ಕ್ರೀಡಾಂಗಣದಲ್ಲಿ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದಲ್ಲಿ ಹಫೀದ್ ಸಯ್ಯದ್ ಪ್ರಾರ್ಥನೆ ಸಲ್ಲಿಸಿ ಈತನೇ ಇದರ ಉಸ್ತುವಾರಿ ವಹಿಸಿದ್ದಾನೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಹಫೀಜ್ ಪಾಕಿಸ್ತಾನದಲ್ಲಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಇದ್ದರೂ ಪಾಕಿಸ್ತಾನ ಒಪ್ಪಿಕೊಳ್ಳುತ್ತಿಲ್ಲ. ಮುಂಬೈ ದಾಳಿ ರುವಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲು ಪಾಕಿಸ್ತಾನ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ.

English summary
Delhi police on Friday issued alert after receiving letter from Intelligence Bureau (IB) about a specific attack on the capital ahead of Independence Day, said TV reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X