ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಮೇಯರ್ ಸ್ಥಾನ ಬಿಜೆಪಿ ಪಾಲು?

By Mahesh
|
Google Oneindia Kannada News

ಬೆಂಗಳೂರು, ಆ.9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಾಲ್ವರು ಪಾಲಿಕೆ ಸದಸ್ಯರು ರೇಸಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಮೇಯರ್ ಹಾಗೂ ಉಪ ಮೇಯರ್ ಸ್ಥನದ ಮೀಸಲಾತಿ ಕುರಿತು ಹೈಕೋರ್ಟ್ ಗುರುವಾರ ನೀಡಿದ ಆದೇಶದ ನಂತರ ಚುನಾವಣೆ ವೇಳಾಪಟ್ಟಿಗೆ ಅಭ್ಯರ್ಥಿಗಳು ಕಾದು ಕೂತಿದ್ದಾರೆ.

ಮೇಯರ್ ಚುನಾವಣೆ ನಡೆಸಲು ಕನಿಷ್ಠ 15 ದಿನವಾದರೂ ಬೇಕಾಗುತ್ತದೆ. ಚುನಾವಣೆ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ನಂತರ ಪ್ರಾದೇಶಿಕ ಆಯುಕ್ತರಿಗೆ ಬಿಬಿಎಂಪಿ ಆಡಳಿತ ಪತ್ರ ಕಳುಹಿಸುತ್ತದೆ. ನಂತರ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.

ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ಬಸವನಗುಡಿ ವಾರ್ಡ್ ಪಾಲಿಕೆ ಸದಸ್ಯ ಕಟ್ಟೆ ಸತ್ಯನಾರಾಯಣ, ಪಟ್ಟಾಭಿರಾಮನಗರ ವಾರ್ಡಿನ ಸಿ.ಕೆ. ರಾಮಮೂರ್ತಿ, ಡಾ. ರಾಜಕುಮಾರ್ ವಾರ್ಡಿನ ಸದಸ್ಯ ಗಂಗ ಭೈರಯ್ಯ ಹಾಗೂ ಜೆಪಿ ಪಾರ್ಕ್ ವಾರ್ಡಿನ ಸದಸ್ಯ ಬಿ.ಆರ್ ನಂಜುಂಡಪ್ಪ ಅವರ ಹೆಸರುಗಳು ಕೇಳಿ ಬಂದಿದೆ. ಈ ಪೈಕಿ ಹಿರಿಯ ಕಾರ್ಯಕರ್ತ, ಪಾಲಿಕೆ ಸದಸ್ಯ ಕಟ್ಟೆ ಸತ್ಯನಾರಾಯಣ ಅವರ ಹೆಸರು ಬಲವಾಗಿ ಕೇಳಿ ಬಂದಿದೆ.

Race for BBMP Mayor

"ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಬಸವನಗುಡಿ ಭಾಗದಲ್ಲಿ ಸಾಕಷ್ಟು ದುಡಿದಿದ್ದೇನೆ. ಈ ಬಾರಿ ಮೇಯರ್ ಹುದ್ದೆ ಸಿಗುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ. ಮೊದಲ ಅವಧಿಯಲ್ಲೇ ನಾನು ಮೇಯರ್ ಆಗುವ ಬಗ್ಗೆ ಪ್ರಸ್ತಾಪಿಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಪಕ್ಷ ಬೇರೆಯವರಿಗೆ ಮಣೆ ಹಾಕುವುದಿಲ್ಲ ಎಂದು ನಂಬಿದ್ದೇನೆ" ಎಂದು ಕಟ್ಟೆ ಸತ್ಯನಾರಾಯಣ ಅವರು ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಬೇಕು ಎಂದು ಕಾನೂನು ಹೋರಾಟ ಮಾಡಿದವರಲ್ಲಿ ಕಟ್ಟೆ ಸತ್ಯನಾರಾಯಣ ಅವರು ಪ್ರಮುಖರಾಗಿದ್ದರು. ಮೇಯರ್ ಸ್ಥಾನ ಬಿಜೆಪಿ ಪಾಲಾದರೆ, ಮುಂಬರುವ ಲೋಕಸಭೆ ಚುನಾವಣೆಗೆ ಪೂರಕವಾಗಲಿದೆ ಎಂಬ ನಂಬಿಕೆ ಹುಟ್ಟಿದೆ.

ಹಿರಿತನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಯಾಗಲಿದೆ ಎಂದು ಸಂಸದ ಅನಂತಕುಮಾರ್ ಹಾಗೂ ಮಾಜಿ ಸಚಿವ ಆರ್ ಅಶೋಕ್ ಅವರು ಭರವಸೆ ನೀಡಿದ್ದಾರೆ. ಒಂದು ವೇಳೆ ಮತ್ತೊಮ್ಮೆ ಬೆಂಗಳೂರು ದಕ್ಷಿಣ ಭಾಗಕ್ಕೆ ಮೇಯರ್ ಸ್ಥಾನ ನೀಡುವುದು ಬೇಡ ಎಂದು ಬಿಜೆಪಿ ನಿರ್ಧರಿಸಿದರೆ ಮಾತ್ರ ಡಾ.ರಾಜಕುಮಾರ್ ವಾರ್ಡ್ ಸದಸ್ಯ ಗಂಗಭೈರಯ್ಯ ಅಥವಾ ಜೆಪಿ ಪಾರ್ಕ್ ಪಾಲಿಕೆ ಸದಸ್ಯ ಬಿ.ಆರ್ ನಂಜುಡಯ್ಯ ಅವರಿಗೆ ಮೇಯರ್ ಪಟ್ಟ ಒಲಿಯುವ ಸಾಧ್ಯತೆಯಿದೆ.

ಮೀಸಲಾತಿ ಗೊಂದಲ: ಫೆ.8, 2013ರಂದು ರಾಜ್ಯ ಸರ್ಕಾರ 2013ನೇ ಸಾಲಿಗೆ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಅಧಿಸೂಚನೆ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೊಸ ಅರ್ಜಿ ಸಲ್ಲಿಸಬಹದು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ, ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕಾಗಿ ಏ. 27ಕ್ಕೆ ಚುನಾವಣೆ ನಡೆಯಬೇಕಿತ್ತು.

ಆದರೆ, ಮೇಯರ್ ಅಥವ ಉಪ ಮೇಯರ್ ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಎಸ್‌ಟಿ ಸಮುದಾಯಕ್ಕೆ ಮೀಸಲಿಡಬೇಕು ಎಂದು ಪಾಲಿಕೆ ಸದಸ್ಯರಾದ ಲೋಕೇಶ್ ಮತ್ತು ಇಂದಿರಾ ಮುಂತಾದವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ದರಿಂದ ಚುನಾವಣೆ ತಡವಾಗಿತ್ತು.

English summary
Katte Sathyanarayana(Basavanagudi ward),CK Ramamurthy(Pattabhiramanagar), Gangabhairaiah and BR Nanjundappa are in the race for BBMP Mayor post. The High court of Karnataka HC ordered and reserved Mayor post for General category and deputy mayor post for ST category women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X