ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಸತೀಶ್ ರೆಡ್ಡಿ ಪುತ್ರಿ ನೇಣಿಗೆ ಶರಣು

|
Google Oneindia Kannada News

Bommanahalli BJP MLA Satish Reddy commits suicide
ಬೆಂಗಳೂರು, ಆ 9: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಪುತ್ರಿ ನೇಣಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ವರದಿಗಳ ಪ್ರಕಾರ ತಿಳಿದು ಬಂದಿದೆ.

ನಗರದ ಕ್ರೈಸ್ಟ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ 17 ವರ್ಷದ ಗಗನ ರೆಡ್ಡಿ ಗುರುವಾರ (ಆ 8) ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ತಮ್ಮ ನಿವಾಸದ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.

ವಿಷಯವನ್ನರಿತ ಕುಟುಂಬದ ಸದಸ್ಯರು ಕೂಡಲೇ ಅವರನ್ನು ಸಮೀಪದ ಪ್ರಶಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿ ಮಧ್ಯದಲ್ಲೇ ಗಗನ ರೆಡ್ಡಿ ಇಹಲೋಕ ತ್ಯಜಿಸಿದ್ದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಧ್ಯರಾತ್ರಿ 1.30 ಸುಮಾರಿಗೆ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ಶುಕ್ರವಾರ (ಆ 9) ಬೆಳಗ್ಗೆಯೇ ಹೊಂಗಸಂದ್ರ ಸಮೀಪ ಶವವನ್ನು ಮಣ್ಣು ಮಾಡಲಾಗಿದೆ.

English summary
Bommanahalli BJP MLA Satish Reddy daughter Gagana Reddy (17) commits suicide on Thursday (Aug 8) in her residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X