ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮೋದಿ ಜೊತೆ 'ಕಿಲಾಡಿ' ಅಕ್ಷಯ್ ಕುಮಾರ್

By Mahesh
|
Google Oneindia Kannada News

ಅಹಮದಾಬಾದ್, ಆ.8: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕಾಣಲು ಹಿಂದಿ ಚಿತ್ರರಂಗದ ಇಬ್ಬರು ವಿಶೇಷ ಅತಿಥಿಗಳು ಬುಧವಾರ ಆಗಮಿಸಿದ್ದರು. ಬಾಲಿವುಡ್ ನಲ್ಲಿ ಕಿಲಾಡಿಗಳ ಕಿಲಾಡಿ ಎನಿಸಿರುವ ಅಕ್ಷಯ್ ಕುಮಾರ್ ಹಾಗೂ ಪ್ರಬುದ್ಧ ನಟ ಪರೇಶ್ ರಾವಲ್ ಅವರು ಮೋದಿ ಜತೆ ನಡೆಸಿದ ಮಾತುಕತೆ ಹಾಗೂ ಚಿತ್ರಗಳು ಇಲ್ಲಿವೆ ನೋಡಿ...

ನರೇಂದ್ರ ಮೋದಿ ಅವರ ಜತೆ ಸೌಹಾರ್ದ ಭೇಟಿ ಇದಾಗಿತ್ತು. ತುಂಬಾ ಮುಂಚೆ ಭೇಟಿ ಮಾಡಬೇಕಿತ್ತು ಆದರೆ, ಸಮಯ ಕೂಡಿ ಬಂದಿರಲಿಲ್ಲ, ಈಗ ಮಾತುಕತೆ ನಡೆಸಿದೆವು ಅಷ್ಟೇ ಎಂದು ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಗುಜರಾತಿನಲ್ಲಿ ಕ್ರೀಡೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಆಗಬೇಕಿರುವ ಸುಧಾರಣೆಗಳ ಬಗ್ಗೆ ನರೇಂದ್ರ ಮೋದಿ ಅವರು ಇಬ್ಬರು ನಟರಿಗೆ ವಿವರಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ತಮ್ಮ ಕೈಲಾಗುವ ನೆರವು ನೀಡಲು ಒಪ್ಪಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕರಾಟೆ ಕಲೆ ಹೇಳಿಕೊಡುವ ಶಿಕ್ಷಕರಾಗಿ ಅನುಭವ ಹೊಂದಿರುವ ಅಕ್ಷಯ್ ಕುಮಾರ್ ಅವರು ಜ್ಯೂಡೋ ಹಾಗೂ ಕರಾಟೆ ಕ್ರೀಡೆಗಳ ಅಭಿವೃದ್ಧಿಗೆ ಶ್ರಮಿಸಲು ಪಣ ತೊಟ್ಟಿದ್ದಾರೆ. ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶಕ್ಕೆ ಇದು ಪೂರಕವಾಗಲಿದೆ ಎಂದು ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ವಿಷಯ ಚಿತ್ರ ಸರಣಿಯಲ್ಲಿ ನೋಡಿ...

ಪರೇಶ್, ಅಕ್ಷಯ್ ಜೊತೆ ಮೋದಿ

ಪರೇಶ್, ಅಕ್ಷಯ್ ಜೊತೆ ಮೋದಿ

ಮೋದಿ ಅವರು ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿದ್ದು, ಗುಜರಾತ್ ಅಷ್ಟೇ ಅಲ್ಲದೆ ದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಕ್ರೀಡೆ ಜತೆ ಯೋಗ

ಕ್ರೀಡೆ ಜತೆ ಯೋಗ

ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಜತೆಗೆ ಯೋಗ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಕೂಡಾ ಅಕ್ಷಯ್ ಹಾಗೂ ಪರೇಶ್ ಜತೆ ಮೋದಿ ಅವರು ಮಾತುಕತೆ ನಡೆಸಿದ್ದಾರೆ.

ಕುಮಾರ್ ಏಕೆ?

ಕುಮಾರ್ ಏಕೆ?

ದೇಶದ ಅನೇಕ ಶಾಲೆ ಮತ್ತು ಕಾಲೇಜುಗಳಲ್ಲಿ ಕ್ರೀಡೆಗೆ ಮಹತ್ವ ನೀಡುವಂತೆ ಮಾಡಲು ಅಕ್ಷಯ್ ಅಭಿಯಾನ ನಡೆಸಿದ್ದಾರೆ. ಅದರಲ್ಲೂ martial art ವಿಭಾಗಕ್ಕೆ ಸೇರುವ ಕರಾಟೆ, ಕುಂಗು ಫು ಜತೆಗೆ ಟೇಕ್ವಾಂಡೋ, ಕಿಕ್ ಬಾಕ್ಸಿಂಗ್, ಮುಂತಾದ ಸಮರ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಆಹ್ವಾನ

ಆಹ್ವಾನ

ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ಟಿ 20 ನೋಡಲು ಪರೇಶ್ ರಾವಲ್ ಅವರು ಬಂದಿದ್ದಾಗ ಮೋದಿ ಅವರ ಆಪ್ತ ಅಮಿತ್ ಶಾ ಅವರು ಸಿಎಂ ಕಚೇರಿಗೆ ಬರುವಂತೆ ಆಹ್ವಾನ ನೀಡಿದ್ದರು.

ಸುಮಾರು ಆರು ತಿಂಗಳ ನಂತರ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ಮೋದಿ ಜತೆ ಮಾತುಕತೆ ನಡೆಸಿದ್ದಾರೆ.

ಮೋದಿ ಟ್ವೀಟ್ಸ್

ಗುಜರಾತ್ ಶಾಲೆ, ಕಾಲೇಜಿನಲ್ಲಿ ಸಮರ ಕಲೆ ಪ್ರೋತ್ಸಾಹಿಸಲು ಅಕ್ಷಯ್ ಒಪ್ಪಿಕೊಂಡಿದ್ದಾರೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

English summary
Bollywood actors Paresh Rawal and Akshay Kumar met Gujarat Chief Minister Narendra Modi on Wednesday. Bollywood actors Paresh Rawal and Akshay Kumar met Gujarat Chief Minister Narendra Modi here on Wednesday. During the talks, Modi and the two actors discussed various steps taken by the government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X