ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಸ್ತೆ ಹೇಮಮಾಲಿನಿ ಕೆನ್ನೆಯಂತೆ ನುಣುಪಾಗಿದೆ ಕಣ್ರೀ!

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 8: ಅಂದಾಜು 25 ಲಕ್ಷ ರೂ ವೆಚ್ಚದಲ್ಲಿ ಚೆಂದನೆಯ ರಸ್ತೆಯೊಂದು (ಹೌದು ಒಂದೇ ಒಂದು ರಸ್ತೆ) ಮೂರೇ ದಿನಗಳಲ್ಲಿ ರಾಜಧಾನಿಯಲ್ಲಿ ತಲೆ ಎತ್ತಿದೆ. ಹಾಗಾದರೆ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮಾಧ್ಯಮಗಳು ಒಂದೇ ಸಮನೆ ಚಿತ್ರ ಸಹಿತ ಬಿತ್ತರಿಸಿದ ರಸ್ತೆ ಗುಂಡಿಗಳೂ ನಿಖಾಲಿಯಾದವಾ? ಅಂದರೆ ಉಹುಃ ಅವುಗಳಿಗಿನ್ನೂ ಆ ಭಾಗ್ಯ ಬಂದಿಲ್ಲ.

ಆದರೆ ರಾಜಧಾನಿಯಲ್ಲಿ, ಅದೂ ಶಕ್ತಿ ಕೇಂದ್ರದ ಎದುರಿಗೆ, ಅದೂ ರಾಜಕಾರಣಿಗಳಿಗೆ ಅನುಕೂಲವಾಗಿರಲೆಂದು, ಅದೆಂದೋ ಲಾಲೂ ಹೇಳಿದ ಹಾಗೆ ಹೇಮಮಾಲಿನಿಯ ಕೆನ್ನೆಯಂತೆ ನುಣುಪಾಗಿ ಈ ರಸ್ತೆಯನ್ನು ನಿರ್ಮಿಸಲಾಗಿದೆ.

ಆದರೆ, ರಾಜಧಾನಿ ಸೇರಿದಂತೆ ರಾಜ್ಯದಲ್ಲೆಲ್ಲ ಇತರೆ ರಸ್ತೆಗಳು ಮಾತ್ರ ಹೇಮಮಾಲಿನಿಯ ಈಗಿನ ಕೆನ್ನೆಯಂತೆ ಉಬ್ಬುತಗ್ಗುಗಳಿಂದ ಕೂಡಿದೆ ಎಂದು with all due respect to wonderful actor called Hema malini ಹೇಳಬೇಕಾದ ದೌರ್ಭ್ಯಾಗ್ಯ ನಮ್ಮದಾಗಿದೆ.

ags-road-opposite-vidhan-soudha-laid-in-just-3-days-at-rs-25-lakh

ಅಸಲಿಗೆ ಘನಂಧಾರಿ ಸರಕಾರ ವಿಧಾನಸೌಧ ಎದುರು, AGS ಕಚೇರಿ ಎದುರು, ಇಂತಹ ಅಪರೂಪದ ರಸ್ತೆಯನ್ನು ನಿರ್ಮಿಸಿದೆಯಲ್ಲ ಅದು ಹೆಚ್ಚಾಗಿ ಬಳಕೆಯಲ್ಲೇ ಇಲ್ಲ. ರಾತ್ರಿ 7-8 ಆಗುತ್ತಿದ್ದಂತೆ ಪುಂಡ ರಾಜಕಾರಣಿಗಳಿಗೆ ಪ್ರಶಸ್ತವಾದ ರಾಜಮಾರ್ಗವಾಗಿ ಇದು ಮಾರ್ಪಡುತ್ತದೆ. ಅಂತಹ ರಸ್ತೆಯನ್ನು ಘನಂದಾರಿಯಾಗಿ ಚೊಕ್ಕಟವಾಗಿ ನಿರ್ಮಿಸಲಾಗಿದೆ. ಆದರೆ ಅದರಾಚೆಗಿನ ರಸ್ತೆಗಳು ಅದೇ ಹೇಮಾಲಿನಿಯ ಇಂದಿನ ಕೆನ್ನೆಯಂತೆ... again, sorry to say this.

ನಾಡಿನ ದೊರೆ ಸಿದ್ರಾಮಣ್ಣ ಆದಿಯಾಗಿ ಎಲ್ರೂ ಮೂರು-ಆರು ತಿಂಗಳಲ್ಲಿ ಬೆಂಗಳೂರಿನ ಅಷ್ಟೂ ರಸ್ತೆಗಳಲ್ಲಿ ಒಂದೇ ಒಂದು ಗುಂಡಿಯೂ ಇಲ್ಲದಂತೆ ಸಾಪಾಟಾಗಿ ಮಾಡುತ್ತೇವೆ ಎಂದು ಹೇಳಿದ್ದೇ ಬಂತು... ಅನೇಕ ಅಮಾಯಕ ಜೀವಗಳು ಅದೇ ಗುಂಡಿಗಳಲ್ಲಿ ಬಿದ್ದು ಸಾಯುತ್ತಿವೆ. ಆದರೂ ನಮ್ಮ ರಾಜಕೀಯ ಮಂದಿ ವಿಧಾನಸೌಧದ ಎದುರು ಸಾಪಾಟಾಗಿ ಅದ್ಬುತವಾದ ರಸ್ತೆಯೊಂದನ್ನು ನಿರ್ಮಿಸಿದ್ದಾರೆ. ಇವರಿಗಿನ್ನೆಷ್ಟು ಗುಂಡಿಗೆ ಇರಬೇಕು.

ಆಮದು ಮಾಡಿಕೊಂಡ ತಂತ್ರಜ್ಞಾನದಿಂದ ಇದನ್ನು ನಿರ್ಮಿಸಲಾಗಿದೆಯಂತೆ. 30 ವರ್ಷವಾದರೂ ಒಂದೇ ಒಂದು ಗುಂಡಿಯೂ ಬೀಳುವುದಿಲ್ಲವಂತೆ. ಹಾಗಾದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಲ್ಲಾ ಇನ್ನು ಮುಂದೆ ಇಂತಹುದೇ ರಸ್ತೆಗಳು ನಿರ್ಮಾಣವಾಗುತ್ತವಾ? ಅಂಥ ಭ್ರಮೆ ಏನೂ ಬೇಡ. ಆದರೆ ಅಲ್ಲಿಯವರೆಗೂ ನೀವು ಗುಂಡಿಗಳನ್ನು ಮತ್ತು ಅದರಲ್ಲಿ ಬಿದ್ದು ಸತ್ತವರ ಸಂಖ್ಯೆಯನ್ನು ಲೆಕ್ಕ ಇಡುತ್ತಾ ಇರಿ...

English summary
AGS road opposite Vidhan Soudha laid in just 3 days at Rs 25 lakh. Bangalore is to get a road that comes with a guarantee of no potholes. The road will open for commuters on Friday. it lies in the central part of the city and leads to the entrance of the state legislature that's used by ministers. Over the last two months, the city's municipal corporation received 50,000 complaints about pothole from residents in different parts of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X