ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ವಿರುದ್ಧ ಜನಾಂಗೀಯ ತಾರತಮ್ಯ ದೂರು

|
Google Oneindia Kannada News

Infosys
ಬೆಂಗಳೂರು, ಆ.7 : ಬೆಂಗಳೂರು ಮೂಲದ ಇನ್ಫೋಸಿಸ್‌ ಕಂಪನಿ ಮೇಲೆ ಅಮೆರಿಕದ ಮಹಿಳೆಯೊಬ್ಬರು ಜನಾಂಗೀಯ ತಾರತಮ್ಯದ ಆರೋಪ ಹೊರಿಸಿದ್ದಾರೆ. ಅಮೆರಿಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಕಂಪನಿ ಜನಾಂಗೀಯ ತಾರತಮ್ಯ ಎಸಗಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕದ ಬ್ರೆಂಡಾ ಕೊಯ್ಲೆರ್ ಅವರು ಪೂರ್ವ ವಿಸ್ಕಾನ್ಸಿನ್‌ನಲ್ಲಿನ ಜಿಲ್ಲಾ ಕೋರ್ಟ್‌ನಲ್ಲಿ ಇನ್ಫೋಸಿಸ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಅಮೆರಿಕಾದ ಇನ್ಫೋಸಿಸ್‌ ಕಚೇರಿಯಲ್ಲಿ ತಾನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ನನಗೆ ಉದ್ಯೋಗ ನೀಡದೆ ಬಾಂಗ್ಲಾದೇಶದ ಪ್ರಜೆಗೆ ಕೆಲಸ ನೀಡಲಾಗಿದೆ.

ಸ್ಥಳೀಯರಿಗೆ ನೌಕರಿ ನೀಡುವ ಬದಲು ಕಂಪನಿ ಬಾಂಗ್ಲಾದೇಶದ ಪ್ರಜೆಯೊಬ್ಬರಿಗೆ ನೌಕರಿ ನೀಡುವ ಮೂಲಕ, ಮೂಲಕ ಇನ್ಫೋಸಿಸ್‌ ಜನಾಂಗೀಯ ತಾರತಮ್ಯ ಮಾಡಿದೆ. ಅಮೆರಿಕದಲ್ಲಿನ ನಾಗರಿಕರಿಗೆ ಅವಕಾಶ ನೀಡುವ ಬದಲು, ಏಷ್ಯಾದವರಿಗೆ ನೌಕರಿ ನೀಡಿದೆ ಎಂದು ದೂರಿದ್ದಾರೆ.

ಬಾಂಗ್ಲಾದವರಿಗೆ ಉದ್ಯೋಗ ನೀಡಿದ್ದರಿಂದ ಇನ್ಫೋಸಿಸ್‌ ಕಂಪನಿ ಅಮೆರಿಕದ ಕಾನೂನನ್ನು ಉಲ್ಲಂಘಿಸಿದಂತಾಗಿದೆ ಎಂದು ಅರ್ಜಿಯಲ್ಲಿ ಬ್ರೆಂಡಾ ಕೊಯ್ಲೆರ್ ಆರೋಪಿಸಿದ್ದಾರೆ. ಸದ್ಯ ಈ ಕುರಿತ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಇನ್ಫೋಸಿಸ್‌ ಪ್ರತಿಕ್ರಿಯೆ : ನೌಕರಿ ನೀಡುವುದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಈ ವಿಷಯದಲ್ಲಿ ಸಮಾನತೆಯನ್ನು ಕಂಪನಿ ಕಾಯ್ದಕೊಂಡಿದೆ ಎಂದು ಇನ್ಫೋಸಿಸ್‌ ಪ್ರತಿಕ್ರಿಯೆ ನೀಡಿದೆ. ಈ ವಿಷಯ ಕೋರ್ಟ್‌ ನಲ್ಲಿ ಇರುವುದರಿಂದ, ಅಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

English summary
The India’s second biggest exporter of software services Infosys has been slapped with a class action lawsuit by an American litigant. Alleging that it has been indulging in systematic, company-wide discrimination against non-South Asian country citizens while recruiting people to work for the company in the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X