ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿದಾರರಿಗೆ ಆತಂಕ ತಂದ ಮೆಟ್ರೋ 2ನೇ ಹಂತ

|
Google Oneindia Kannada News

namma metro
ಬೆಂಗಳೂರು, ಆ.7 : ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಬಿಎಂಆರ್ ಸಿಎಲ್ ಚಾಲನೆ ನೀಡಿದೆ. ನಗರದ ಸುಮಾರು ಎರಡು ಸಾವಿರ ಆಸ್ತಿಗಳನ್ನು ಎರಡನೇ ಹಂತದ ಯೋಜನೆಗಾಗಿ ವಶಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರದ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಬೆಂಗಳೂರಿನ 72 ಕಿ.ಮೀ. ವ್ಯಾಪ್ತಿಯ 61 ನಿಲ್ದಾಣಗಳನ್ನು ಹೊಂದಿರುವ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ ಈಗಾಗಲೇ ಒಪ್ಪಿಗೆ ನೀಡಿದೆ.

ಆದ್ದರಿಂದ ಕಾಮಗಾರಿ ಆರಂಭಿಸಲು ಭೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಬಿಎಂಆರ್ ಸಿಎಲ್ ಚಾಲನೆ ನೀಡಿದೆ. 180ರಿಂದ 200 ಹೆಕ್ಟೇರ್ ವ್ಯಾಪ್ತಿಯಲ್ಲಿ 2000 ಆಸ್ತಿಗಳು ಎರಡನೇ ಹಂತದ ಯೋಜನೆಗಾಗಿ ನಾಶವಾಗುವ ಸಾಧ್ಯತೆ ಇದೆ.

ಮೆಟ್ರೋ ಎರಡನೇ ಹಂತದ ಯೋಜನೆ ಜಯನಗರದಿಂದ ಬೊಮ್ಮಸಂದ್ರ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಮೈಸೂರು ರಸ್ತೆ, ಕೃಷ್ಣರಾಜಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಾದು ಹೋಗಲಿದೆ. ಈ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಬಿಎಂಆರ್ ಸಿಎಲ್ ವಶಪಡಿಸಿಕೊಳ್ಳಲಿದೆ. (ಮೆಟ್ರೋ ಎರಡನೇ ಹಂತಕ್ಕೆ ಸಿಕ್ತು ಅನುಮತಿ)

ಮೆಟ್ರೋ ಮಾರ್ಗ ಹಾದು ಹೋಗುವ ಸ್ಥಳದ ಭೂಮಿಯ ಮಾರುಕಟ್ಟೆ ಮೌಲ್ಯವನ್ನು ಬಿಎಂಆರ್ ಸಿಎಲ್ ಸಿದ್ದಪಡಿಸುತ್ತಿದೆ. ಸಂಸ್ಥೆ ಎರಡನೇ ಹಂತದ ನೀಲನಕ್ಷೆಯನ್ನು ಪ್ರಕಟಿಸಿದ್ದರೂ, ಮೆಟ್ರೋ ಮಾರ್ಗ ಎಲ್ಲಿ ಹಾದು ಹೋಗುತ್ತದೆ ಎಂಬುದರ ಕುರಿತು ಜನರಿಗೆ ಗೊಂದಲಗಳಿವೆ.

ಭೂ ಸ್ವಾಧೀನ ಪ್ರಕ್ರಿಯೆಗೆ ಈಗಾಗಲೇ ವಿರೋಧಗಳು ಕೇಳಿ ಬರುತ್ತಿದ್ದು, ಮಾರ್ಗದ ಸ್ಪಷ್ಟನೇ ನೀಡುವಂತೆ ಕೋರಿ ಬಿಎಂಆರ್ ಸಿಎಲ್ ಕಚೇರಿಗೆ 100ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಜಯನಗರ, ಜೆ.ಪಿ.ನಗರ, ವೈಟ್ ಫೀಲ್ಡ್ ಗಳ ಹಲವು ಆಸ್ತಿದಾರರು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.

ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆ ನಗರದ ಹೊರ ವಲಯದಲ್ಲೇ ಹೆಚ್ಚಾಗಿ ಹಾದು ಹೋಗಲಿದೆ. ಆದ್ದರಿಂದ ಹೆಚ್ಚುವರಿ ಭೂಮಿ ಬಿಎಂಆರ್ ಸಿಎಲ್ ಗೆ ಅಗತ್ಯವಿದೆ. ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳ ಉದ್ದ 150 ಮೀಟರ್ ಇದ್ದರೆ, ಎರಡನೇ ಹಂತದಲ್ಲಿ ಇದು 170 ಮೀಟರ್ ಗಳಷ್ಟು ವಿಸ್ತರಣೆಯಾಗಲಿದೆ.

ಮಾರ್ಗದ ವಿವರಗಳು
ಆರ್.ವಿ. ರಸ್ತೆ- ಬೊಮ್ಮಸಂದ- 18.82 ಕಿ.ಮೀ.
ಗೊಟ್ಟಿಗೆರೆ-ಐಐಎಂಬಿ-ನಾಗವಾರ- 21.85 ಕಿ.ಮೀ.
ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌- 15.50 ಕಿ.ಮೀ.
ಮೈಸೂರು ರಸ್ತೆ ಟರ್ಮಿನಲ್‌- ಕೆಂಗೇರಿ- 6.45 ಕಿ.ಮೀ.
ಹೆಸರಘಟ್ಟ ಕ್ರಾಸ್‌- ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ- 3.77 ಕಿ.ಮೀ.

English summary
Around 1,500 to 2,000 properties spread over 180-200 hectares in the Bangalore acquired and demolished for the implementation of Namma Metro’s Phase II. Phase II will provide train connectivity along 72 km with 61 stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X