ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಕೋಲಾರ, ಹಾಸನ, ಕುಂದಾಪುರ...

By Mahesh
|
Google Oneindia Kannada News

ಬೆಂಗಳೂರು, ಆ.6: ತುಮಕೂರಿನ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈ.ಜಿ ಕುಮಾರ್ ಸಿಪಿಸಿ-386 ಹಂದನಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶ: ದಿನಾಂಕ 04-08-2013 ರಂದು ಗುಪ್ತಮಾಹಿತಿ ಕರ್ತವ್ಯದಲ್ಲಿದ್ದು ಸಂಜೆ ಮತಿಘಟ್ಟಕ್ಕೆ ಬಂದು ನಂತರ ರಾತ್ರಿ 08-30 ಗಂಟೆಗೆ ಹರೇನಹಳ್ಳಿಗೇಟ್ ಕಡೆ ಹೋಗುತ್ತಿರುವಾಗ್ಗೆ ಸೋರಲಮಾವು ಗೇಟ್ ನಲ್ಲಿ ಜನರು ಸೇರಿದ್ದು ಅಲ್ಲಿ ಹೋಗಿ ನೋಡಲಾಗಿ ಎರಡು ಬೈಕುಗಳು ಒಂದಕ್ಕೊಂದು ಮುಖಾಮುಖಿಯಾಗಿ ಅಪಘಾತಗೊಂಡಿತ್ತು.

ನಂತರ ತಿಳಿಯಲಾಗಿ ಬೈಕ್ ನಂ.ಕೆಎ44ಜೆ2573 ನೇ ಬಜಾಜ್ ಡಿಸ್ಕವರಿ ಬೈಕಿನಲ್ಲಿ ತಿಪಟೂರು ಕಡೆಯಿಂದ ಸೋರಲಮಾವು ಗೇಟ್ ಬಳಿ ಬರುವಾಗ ಹುಳಿಯಾರು ಮಾರ್ಗದಿಂದ ತಿಪಟೂರು ಕಡೆಗೆ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಹೀರೋಹೊಂಡಾ ನಂ.ಕೆಎ44ಜೆ8497 ವಾಹನಕ್ಕೆ ಅಜಾಗರೂಕತೆಯಿಂದ ಡಿಕ್ಕಿ ಹೊಡೆಸಿದ್ದರಿಂದ ಸದರಿ ಹೀರೊಹೊಂಡಾ ವಾಹನದ ಸವಾರ ರಾಜಶೇಖರಯ್ಯ ಹಾಗೂ ಆತನ ಮಗನಾದ ಗುಣಶೇಖರನಿಗೆ ಅಪಘಾತವಾಗಿ ರಾಜಶೇಖರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಾರ್ವಜನಿಕರು ಯಾರೋ 108 ಅಂಬುಲೆನ್ಸ್ ವಾಹನಕ್ಕೆ ಪೋನ್ ಮಾಡಿದ್ದರಿಂದ ಅಷ್ಟರಲ್ಲಿ ಅಲ್ಲಿಗೆ ಬಂದ 108 ಅಂಬುಲೆನ್ಸ್ ನಲ್ಲಿ ಅಪಘಾತ ಉಂಟು ಮಾಡಿದ ಬಜಾಜ್ ಡಿಸ್ಕವರಿ ಬೈಕಿನ ಸವಾರನನ್ನು ಹಾಗೂ ಮೃತ ಹೀರೊಹೊಂಡಾ ಬೈಕಿನ ಸವಾರನ ಮಗ ಗುಣಶೇಖರ ಇವರನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದು ಅಪಘಾತ ಮಾಡಿದವನ ಹೆಸರು ವಿಳಾಸ ತಿಳಿಯಲಾಗಿ ರಘು, ವಾಸ ಮಲ್ಲಿಗೆರೆ ಎಂದು ತಿಳಿದು ಬಂದಿರುತ್ತದೆ.

ಕೆಲವು ಕ್ಷಣದ ನಂತರ ಅಂಬುಲೆನ್ಸ್ ನಲ್ಲಿ ಹೋಗಿದ್ದ ಮಗು ಗುಣಶೇಖರ ಕೂಡ ಮೃತಪಟ್ಟಿರುತ್ತಾನೆಂದು ತಿಳಿದುಬಂತು. ಸದರಿ ಅಪಘಾತ ಮಾಡಿದ ನಂ.ಕೆಎ44ಜೆ2573 ನೇ ಬಜಾಜ್ ಡಿಸ್ಕವರಿ ಬೈಕಿನ ಸವಾರನಾದ ರಘು ಮಲ್ಲಿಗೆರೆ ಈತನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತುಮಕೂರು ಠಾಣೆಗೆ ದೂರು ಸಲ್ಲಿಸಲಾಗಿದೆ.

ಹಾಸನದಲ್ಲಿ ನಾಲ್ವರ ದುರ್ಮರಣ

ಹಾಸನದಲ್ಲಿ ನಾಲ್ವರ ದುರ್ಮರಣ

05-08-13 ರಂದು ಬೆಳಗ್ಗೆ 10-30 ಗಂಟೆಯಲ್ಲಿ ಬೆಂಗಳೂರು ಕೆಂಗೇರಿ ಉಪ ನಗರ ದೊಡ್ಡ ಬಸೀದಿ ರಸ್ತೆ ಬೆಟ್ಟೆಗೌಡರವರ ಮಗ ಜಗದೀಶ, ಜಗದೀಶನ ಹೆಂಡತಿ ಕುಮುದ ಜಗದೀಶನ ಮಗ ಧನುಷ್, ಬೆಟ್ಟೆಗೌಡರ ಹೆಂಡತಿ ನಾಗಮ್ಮ ಕೆಎ-09-ಜೆಡ್-9983 ರ ಕಾರಿನಲ್ಲಿ ಸಾಗರ ಸಾಗರ ತಾಲೂಕ್ ನಿಂದ ಬೆಂಗಳೂರಿಗೆ ಹೋಗಲು ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿ, ಬೆಂಡೆಕೆರೆ ಹತ್ತಿರ ಎನ್ ಹೆಚ್ -206 ರಸ್ತೆ ಹಿಡಿದಿದ್ದಾರೆ.

ಎದುರುಗಡೆಯಿಂದ ಬರುತ್ತಿದ್ದ ಕೆಎ-27-ಎಫ್-427 ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಮಾಡಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಬೆಟ್ಟೆಗೌಡ(60), ಜಗದೀಶ(35), ಕುಮುದ(27), ಧನುಷ್(1 ವರ್ಷ) ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಪ್ರತ್ಯಕ್ಷದರ್ಶಿ ಶ್ರೀಕುಮಾರ್ ಕೊಟ್ಟ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಕೋಲಾರ

ಕೋಲಾರ

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬೆಂಗಳೂರು-ಚೈನ್, ಎನ್ .ಹೆಚ್-೪ ರಸ್ತೆಯ ಕಾಲ್ ಮಾನ್ ಕಂಪನಿ, ನರಸಾಫುರ ಕ್ರಾಸ್ ಬಳಿ ಸಂಭವಿಸಿರುತ್ತದೆ.

ದಿನಾಂಕ 04/08/2013 ರಂದು ಸಂಜೆ ಕೋಲಾರ ತಾಲ್ಲೂಕು, ಕೆ.ಬಿ.ಹೊಸಹಳ್ಳಿ ವಾಸಿ ರಾಜೀವಲು ರವರು ತಮ್ಮ ಬಾಬತ್ತು ಕೆಎ-03,ಇ.ಹೆಚ್-39 ಟಿವಿಎಸ್ ಎಕ್ಸಲ್ ನಲ್ಲಿ ಕೋಲಾರ ಕಡೆಗೆ ಹೋಗುತ್ತಿದ್ದು. ಈ ಸಮಯದಲ್ಲಿ ಕಾರ್ ನಂ-ಕೆಎ-07,ಎಂ-3654 ರ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿವಿಎಸ್ ಗೆ ಡಿಕ್ಕಿ ಹೊಡೆಸಿದ್ದು. ಟಿವಿಎಸ್ ಎಕ್ಸಲನ ಹಿಂಬದಿಯಲ್ಲಿ ಕುಳಿತ್ತಿದ್ದ ರಾಜೀವ ರವರ ಹೆಂಡತಿ ಶಾಂತಮ್ಮ ರವರು ಕೆಳಕ್ಕೆ ಬಿದ್ದು, ತೀವ್ರತರವಾದ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಆಲ್ದೂರು ಪೊಲೀಸ್ ಠಾಣೆ ಮೊ.ಸಂ. 170/2013 ಕಲಂ; 279 337 304(ಎ) ಐಪಿಸಿ - ದಿನಾಂಕ- 06/08/2013 ರಂದು ಸುನಿಲ್ ಕುಮಾರ್ ಹಾನ್ ಬಾಳ್ ವಾಸಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ:

05/06/2013 ರಂದು ರಾತ್ರಿ 21.30 ಗಂಟೆಗೆ ಭೂತನ ಕಾಡು ಸಮೀಪ ತನ್ನ ಅಕ್ಕನ ಮಗ ಮಿಥುನ ತನ್ನ ಅಕ್ಕನ ಕಾರು ನಂಬರ್ ಕೆಎ-18 ಪಿ-344 ಕಾರನ್ನು ಅತಿವೇಗ ಹಾಗೂ ಅಜಾಕರೂಕತೆಯಿಂದ ಚಾಲನೆ ಮಾಡಿ ಕಾರನ್ನು ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿದ್ದು ಚಾಲನೆ ಮಾಡುತಿದ್ದ ಮಿಥುನ ಮೃತಪಟ್ಟು, ಕಾರಿನಲ್ಲಿ ಜೊತೆಯಲ್ಲಿದ್ದ ಮುರುಗೇಶನಿಗೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ.

ಕುಂದಾಪುರ

ಕುಂದಾಪುರ

ಪಿರ್ಯಾದಿದಾರರಾದ ಡಾ ರಾರ್ಬಟ್ ರೆಬೆಲ್ಲೋ, ಕುಂದಾಪುರ ಸರ್ಕಾರಿ ಆಸ್ಪತ್ರೆ ವೈದ್ಯ ಸರಕಾರಿ ಆಸ್ಪತ್ರೆಯಲ್ಲಿ 2 ಶವಗಳ ಮರಣೋತ್ತರ ಶವ ಪರೀಕ್ಷೆಗೆ ಹೊರಟಿದ್ದರು.
ಅವರ ಕಾರಿನ ಶೆಡ್ಡಿಗೆ ಅಡ್ಡವಾಗಿ 3 ಮೋಟಾರು ಬೈಕುಗಳನ್ನು ಅಡ್ಡವಾಗಿ ನಿಲ್ಲಿಸಿದ್ದು ಸದ್ರಿ ವಾಹನಗಳ ಜವಾಬ್ದಾರರಿಗೆ ವಾಹನಗಳನ್ನು ತೆಗೆಯಲು ಕೋರಿದ್ದಾರೆ ಆಗ ಆಪಾದಿತ ರಾಘವೇಂದ್ರ, ಅಕ್ಷಯ ಕುಮಾರ, ಹರ್ಷ, ರಾಜು ದೇವಾಡಿಗ ಇವರುಗಳು ವಾಹನಗಳನ್ನು ತೆಗೆಯಲು ತಗಾದೇ ತೆಗೆದು ಡಾ ರಾರ್ಬಟ್ ಮೇಲೆ ಹಲ್ಲೆಗೆ ಮುಂದಾಗಿ, 2ನೇ ಮಹಡಿ ತನಕ ಅಟ್ಟಿಸಿಕೊಂಡು ಬಂದು ಜೀವ ಬೆದರಿಕೆ ಹಾಕಿ,ಕರ್ತವ್ಯಕ್ಕೆ ಹಾಜರಾಗದಂತೆ ಮಾಡಿರುತ್ತಾರೆ. ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 291/2013 ಕಲಂ 341, 448, 506, 353, ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಖಲಾಗಿದೆ.

ಬೆಂಗಳೂರು

ಬೆಂಗಳೂರು

ನವವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ಮೂಲದ ಹಂಸಲತಾ (22) ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನ ಕಾರ್ತಿಕ್ ಎಂಬುವವರೊಂದಿಗೆ ವಿವಾಹವಾಗಿದ್ದರು.

ಭಾನುವಾರ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು. ಹಾಗಾಗಿ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಂಸಲತಾ ಫ್ಯಾನಿಗೆ ನೇಣುಹಾಕಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ.

ಹಂಸಲತಾ ಅವರ ತಂದೆ ಬಸವರಾಜು, ತನ್ನ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಕಾರ್ತಿಕ್ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಆಷಾಢಕ್ಕೆ ತವರಿಗೆ ಹೋಗಿದ್ದ ಪತ್ನಿಯನ್ನು ಅವಧಿಗೆ ಮುನ್ನ ಮನೆಗೆ ಕರೆ ತಂದಿದ್ದ ಎಂದು ತಿಳಿದು ಬಂದಿದೆ.

English summary
Karnataka Todays Crime beat news : A bike accident in Handanakere, Tumkur police station limits, life threatening call case in Kundapur, Accident cases from Chikmagalur, Hassan and a suicide case from Bangalore and More crime report from across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X