ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ : ಹೆಬ್ಬಾವಿಗೆ ಸಹೋದರರು ಬಲಿ

|
Google Oneindia Kannada News

ಕೆನಡಾ, ಆ.6 : ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡು ಮನೆಯೊಂದಕ್ಕೆ ನುಗ್ಗಿದ ಹೆಬ್ಬಾವು ಇಬ್ಬರು ಮಕ್ಕಳನ್ನು ಕೊಂದಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಮನೆಯಲ್ಲಿದ್ದ ಮತ್ತೊಂದು ಮಗು ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಹೆಬ್ಬಾವಿನ ದಾಳಿಯಿಂದ ಪಾರಾಗಿದೆ.

ಕೆನಡಾದ ನ್ಯೂ ಬರ್ನ್ಸ್ ವಿಕ್ ನಲ್ಲಿರುವ ಕ್ಯಾಂಪ್ ಬೆಲ್ಟನ್ ನಗರದಲ್ಲಿನ ಗೆಳೆಯನ ಮನೆಯಲ್ಲಿ ಮಲಗಿದ್ದ, ಐದು ಮತ್ತು ಆರು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಹೆಬ್ಬಾವಿನ ದಾಳಿಗೆ ಸಿಲುಕಿದ್ದಾರೆ. ಸೋಮವಾರ ಬೆಳಗ್ಗೆ ಇಬ್ಬರು ಮಕ್ಕಳಿಗೂ ಹೆಬ್ಬಾವು ಸುತ್ತಿಕೊಂಡು ಮಲಗಿದ್ದ ದೃಶ್ಯಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

boys

ಕೋನರ್ ಬ್ರಾಥ್ (5) ಮತ್ತು ನೋಹಾ ಬ್ರಾಥ್ (7) ಎಂಬ ಇಬ್ಬರು ಸಹೋದರರು ಭಾನುವಾರ ಗೆಳೆಯನ ಮನೆಗೆ ಆಗಮಿಸಿದ್ದರು. ಅವರ ಅಪಾರ್ಟ್ ಮೆಂಟ್ ಕೆಳಗೆ ಸಾಕು ಪ್ರಾಣಿಗಳ ಸಂಗ್ರಹಾಲಯವಿದ್ದು, ಅಲ್ಲಿಂದ ತಪ್ಪಿಸಿಕೊಂಡ ಹೆಬ್ಬಾವು ವೆಂಟಿಲೇಟರ್ ಮೂಲಕ ಮಕ್ಕಳಿದ್ದ ಮನೆಗೆ ಆಗಮಿಸಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆಬ್ಬಾವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಹೆಬ್ಬಾವು ಯಾರಿಗೆ ಸೇರಿದ್ದು ಎಂಬುದು ಮಾತ್ರ ತಿಳಿದು ಬಂದಿಲ್ಲ. ಮಕ್ಕಳಿದ್ದ ಅಪಾರ್ಟ್ ಮೆಂಟ್ ಕೆಳಗಿನ ಪ್ರಾಣಿ ಸಂಗ್ರಹಾಲಯದವರು ಇದು ನಮಗೆ ಸೇರಿದ ಹಾವು ಎಂಬುದನ್ನು ಒಪ್ಪಿಕೊಂಡಿಲ್ಲ.

ಇದು ಆಫ್ರಿಕನ್ ಜಾತಿಗೆ ಸೇರಿದ ಹೆಬ್ಬಾವು ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾವು ಸುಮಾರು 100 ಪೌಂಡ್ ತೂಕವಿದ್ದು, 4.5 ಮೀಟರ್ ಉದ್ದವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾವು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.

English summary
The RCMP has launched a criminal investigation after two young boys were strangled to death by a python in northern New Brunswick. The boys’ bodies were discovered Monday, August 5 in an apartment above an exotic pet store in Campbellton.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X